Advertisement

ವರ್ಷದೊಳಗೆ ವಸತಿ ಹೀನರಿಗೆ ಒದಗಲಿದೆ ಗೃಹಭಾಗ್ಯ

09:41 AM Apr 05, 2022 | Team Udayavani |

ವಾಡಿ: ಪಟ್ಟಣದ ಹೊರ ವಲಯದ 16 ಎಕರೆ ಭೂಮಿಯಲ್ಲಿ ನಿರ್ಮಿಸಲಾಗುತ್ತಿರುವ ಶಾಸಕ ಪ್ರಿಯಾಂಕ್‌ ಖರ್ಗೆ ಅವರ ಕನಸಿನ ಯೋಜನೆ “ಪ್ರಗತಿ ಕಾಲೋನಿ’ಯಲ್ಲಿ ಸ್ಥಳೀಯ ಸಾವಿರಾರು ಜನ ವಸತಿ ಹೀನರಿಗೆ ಗೃಹಭಾಗ್ಯ ಒದಗಿಸಲು ಯೋಜನೆ ಪೂರ್ಣಗೊಂಡಿದ್ದು, ಸಿದ್ಧಗೊಂಡಿರುವ 500 ಫಲಾನುಭವಿಗಳ ಪಟ್ಟಿ ಶಾಸಕರ ಅನುಮೋದನೆಗಾಗಿ ಕಾಯುತ್ತಿದೆ.

Advertisement

ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿಗೆ ಪಟ್ಟಣದ ಬಡ ಕುಟುಂಬಗಳಿಗೆ ಶಾಸಕರೊಬ್ಬರು ವಸತಿ ಸೌಲಭ್ಯ ಒದಗಿಸುತ್ತಿದ್ದಾರೆ. ಜಿ+1 ಮಾದರಿಯಲ್ಲಿ ಸಾವಿರ ಮನೆಗಳ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧಗೊಂಡಿದ್ದು, ಭೂಮಿಪೂಜೆಗೆ ದಿನಗಣನೆ ಶುರುವಾಗಿದೆ. ಫಲಾನುಭವಿಗಳ ತಲಾ ಒಂದು ಗೃಹ ನಿರ್ಮಾಣಕ್ಕೆ ಒಟ್ಟು 6.50 ಲಕ್ಷ ರೂ. ಖರ್ಚಾಗುತ್ತಿದೆ.

ಪಜಾ, ಒಬಿಸಿ ಫಲಾನುಭವಿಗೆ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ 1.5 ಲಕ್ಷ ರೂ. ಹಾಗೂ ರಾಜ್ಯ ಸರ್ಕಾರದಿಂದ ಪಜಾ ಫಲಾನುಭವಿಗೆ 1.80 ಲಕ್ಷ ರೂ. ಒಬಿಸಿಗೆ 1.2 ಲಕ್ಷ ರೂ. ಸಹಾಯಧನ ನೀಡಲಾಗುತ್ತಿದೆ. ಬ್ಯಾಂಕ್‌ ಸಾಲ ಪಜಾಗೆ 2.55 ಲಕ್ಷ ಮತ್ತು ಒಬಿಸಿ ಇತರರಿಗೆ 3.15 ಲಕ್ಷ ರೂ. ಮಂಜೂರು ಮಾಡಲಾಗುತ್ತಿದೆ. ಫಲಾನುಭವಿಗಳು ಅರ್ಜಿಗಳ ಜತೆಗೆ ಆರಂಭಿಕ ಶುಲ್ಕವಾಗಿ 65000 ರೂ. ಪುರಸಭೆಗೆ ಪಾವತಿಸಬೇಕಿದೆ.

ಈಗಾಗಲೇ 525 ಜನ ಕುಟುಂಬಗಳು ಪುರಸಭೆ ಹೆಸರಿನಲ್ಲಿ ತಲಾ 10,000 ರೂ. ಮೊತ್ತದ ಡಿಡಿ ಜಮೆ ಮಾಡಿದ್ದಾರೆ. ಇದೇ ವೇಳೆ ಬಹುತೇಕ ಬಡ ಕುಟುಂಬಗಳು ಬ್ಯಾಂಕ್‌ ಸಾಲದ ಹೊರೆಗೆ ಹೆದರಿ ವಸತಿ ಸೌಲಭ್ಯ ಪಡೆಯುವಲ್ಲಿ ಹಿಂದೇಟು ಹಾಕಿರುವುದು ಕಂಡು ಬಂದಿದೆ. ನ್ಯೂ ಟೌನ್‌ (ಪ್ರಗತಿ ಕಾಲೋನಿ) ನಿರ್ಮಾಣದ ಮನೆಗಳಿಗೆ ಪಡೆಯಲಾಗುತ್ತಿರುವ ದುಬಾರಿ ಮೊತ್ತದ ವಂತಿಗೆ ವಿರೋಧಿ ಸಿ ಕೆಲವರು ಪ್ರತಿಭಟನೆ ನಡೆಸಿದ್ದು, ಅನೇಕರಿಗೆ ಸರ್ಕಾರದ ಈ ವಸತಿ ಸೌಕರ್ಯ ಕೈಗೆಟುಕದಂತಾಗಿದೆ.

ಪರ ವಿರೋಧದ ಚರ್ಚೆಯ ನಡುವೆಯೂ ಮನೆಗಳನ್ನು ನಿರ್ಮಿಸಲು ಭರದ ಸಿದ್ಧತೆಯಲ್ಲಿರುವ ಪುರಸಭೆ ಆಡಳಿತ, ಮೊದಲ ಹಂತದ ಭಾಗವಾಗಿ ಐದು ನೂರು ಫಲಾನುಭವಿಗಳ ಪಟ್ಟಿಯನ್ನು ಶಾಸಕ ಪ್ರಿಯಾಂಕ್‌ ಖರ್ಗೆ ಅವರಿಗೆ ರವಾನಿಸಿದೆ. ಶಾಸಕರ ಅನುಮೋದನೆಯ ನಂತರ ಕಡತವು ರಾಜೀವ್‌ಗಾಂಧಿ  ನಿಗಮಕ್ಕೆ ಕಳುಹಿಸುತ್ತೇವೆ. ಇಲ್ಲಿ ಅರ್ಜಿ ದಾಖಲೆಗಳ ಪರಾಮರ್ಶೆ ನಡೆಯುತ್ತದೆ. ದಾಖಲೆಗಳು ಸಮರ್ಪಕವಾಗಿಲ್ಲದ ಅರ್ಜಿಗಳು ತಿರಸ್ಕೃತಗೊಳ್ಳುತ್ತವೆ. ನಂತರ ಅಂತಿಮ ಪಟ್ಟಿ ಸಿದ್ಧಗೊಳ್ಳುತ್ತದೆ ಎಂದು ಪುರಸಭೆ ಮುಖ್ಯಾ ಧಿಕಾರಿ ಡಾ| ಚಿದಾನಂದ ಸ್ವಾಮಿ ಹಾಗೂ ನೂಡಲ್‌ ಅಭಿಯಂತರ ಮನೋಜಕುಮಾರ ಹಿರೋಳಿ ಪ್ರತಿಕ್ರಿಯಿಸಿದ್ದಾರೆ.

Advertisement

ಪುರಸಭೆ ವ್ಯಾಪ್ತಿಯಲ್ಲಿ ಒಂದೇಯೊಂದು ಸರ್ಕಾರಿ ಕಟ್ಟಡ ಕಟ್ಟಲು ಜಾಗ ಇರಲಿಲ್ಲ. ನಮ್ಮ ಅವಧಿಯಲ್ಲಿ 100 ಎಕರೆ ಭೂಮಿ ಖರೀದಿಸಿ ಕೊಟ್ಟಿದ್ದೀನಿ. ಜಿ+1 ಮಾದರಿಯಲ್ಲಿ ಸಾವಿರ ಮನೆಗಳನ್ನು ಕಟ್ಟಲು ತೀರ್ಮಾನಿಸಿ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದೇನೆ. ಕೊರೊನಾ ಸಂಕಷ್ಟದಿಂದ ಜನರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಬ್ಯಾಂಕ್‌ ಸಾಲ ಕಡಿಮೆ ಮಾಡಿ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಬಿಜೆಪಿ ಸರ್ಕಾರ ಮಾತ್ರ ಇದಕ್ಕೆ ಒಪ್ಪುತ್ತಿಲ್ಲ. ಮಂಜೂರು ಮಾಡಿದಷ್ಟು ಮನೆಗಳನ್ನು ಗುಣಮಟ್ಟದಡಿ ನಿರ್ಮಿಸುತ್ತೇವೆ. ಮನೆಗಳ ಗುಣಮಟ್ಟ ನೋಡಿದ ಬಳಿಕ ಇನ್ನಷ್ಟು ಜನರು ವಸತಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ. -ಪ್ರಿಯಾಂಕ್‌ ಖರ್ಗೆ. ಶಾಸಕರು ಚಿತ್ತಾಪುರ

Advertisement

Udayavani is now on Telegram. Click here to join our channel and stay updated with the latest news.

Next