Advertisement
ಕಬೆಲ ನಿವಾಸಿ ಉಮೇಶ್ ಪೂಜಾರಿ ಅವರಿಗೆ ಸೇರಿದ ಮನೆಯಲ್ಲಿ ಹೊನ್ನಪ್ಪ ಗೌಡ ಅವರ ಕುಟುಂಬ ಬಾಡಿಗೆ ನೆಲೆಯಲ್ಲಿ ವಾಸಿಸುತ್ತಿದ್ದಾರೆ. ಗುರುವಾರ ರಾತ್ರಿ ಅಡುಗೆ ಮಾಡುವುದಕ್ಕಾಗಿ ಗ್ಯಾಸ್ ಉರಿಸುವ ವೇಳೆ ಏಕಾಏಕಿ ಹೊತ್ತಿ ಉರಿದಿದ್ದು, ಗ್ಯಾಸ್ ಸೊರಿಕೆಯ ಪರಿಣಾಮ ಉರಿದಿದೆ ಎನ್ನಲಾಗಿದೆ.
ಘಟನ ಸ್ಥಳಕ್ಕೆ ಶುಕ್ರವಾರ ಗ್ರಾಮ ಕರಣಿಕೆ ಅಶ್ವಿನಿ ಅವರು ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸಿದ್ದಾರೆ. ಈ ವೇಳೆ ಗ್ರಾ.ಪಂ.ಸದಸ್ಯ ಪದ್ಮನಾಭ ಶೆಟ್ಟಿ ಪುಂಚಮೆ, ವಿಠಲ್ ಸಾಲ್ಯಾನ್, ದಿನೇಶ್ ಶೆಟ್ಟಿ ಕೊಟ್ಟಿಂಜ ಉಪಸ್ಥಿತರಿದ್ದರು.