Advertisement
ಬಂಜಾರ-ಗೋಲ್ಡ್‌ಫಿಂಚ್ ಪ್ರಕಾಶಣ್ಣ ಪ್ರಸಿದ್ಧಿಯ ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ (ಉಡುಪಿ) ಜಿಲ್ಲೆಯ ಪಡುಬಿದ್ರಿ ಮೂಲದ ಉದ್ಯಮಿ, ಎಂಆರ್‌ಜಿ ಸಮೂಹದ ಆಡಳಿತ ನಿರ್ದೇಶಕರಾಗಿರುವ ಪ್ರಕಾಶ್ ಶೆಟ್ಟಿ ಕೊರಂಗ್ರಪಾಡಿ ಅವರಿಗೆ “ವಿಜನರಿ ಹೊಟೇಲ್ ಓನರ್ ಆಫ್ ದ ಈಯರ್'(Visionary Hotel Owner of the Year-2018) ವಾರ್ಷಿಕ ಪ್ರಶಸ್ತಿಯನ್ನು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಐಡಿಇ ಗ್ಲೋಬಲ್ ನಿರ್ದೇಶಕರುಗಳಾದ ಕೆ. ಸುರೇಶ್ ಮತ್ತು ಎಸ್.ಗಣೇಶ್ ಪ್ರದಾನಿಸಿ ಗೌರವಿಸಿ ಅಭಿನಂದಿಸಿದರು.
Related Articles
ಉಡುಪಿ ಜಿಲ್ಲೆಯ ಪಡುಬಿದ್ರಿ ಮೂಲದ ಕೊರಂಗ್ರಪಾಡಿ ಮನೆತನದ ಪ್ರಕಾಶ್ ಎಂ. ಶೆಟ್ಟಿ ಅವರು ಕೆ. ಮಾಧವ ಶೆಟ್ಟಿ ಮತ್ತು ರತ್ನಾ ಎಂ. ಶೆಟ್ಟಿ ಅವರ ಪುತ್ರ. ತನ್ನ ಕಾಲೇಜು ಶಿಕ್ಷಣ ಪೂರೈಸಿ ಹೊಟೇಲು ಉದ್ಯಮಕ್ಕೆ ನಾಂದಿ ಹಾಡಿದವರು. ಅನಂತರ ಎಂಆರ್‌ಜಿ ಸಮೂಹ ರೂಪಿಸಿ ದೇಶ ವಿದೇಶಗಳಲ್ಲಿ ಹೊಟೇಲ್ ಉದ್ಯಮವನ್ನು ಪಸರಿಸಿ ದರು. ಸರಳ ಸಜ್ಜನಿಕೆಯ, ಶಿಕ್ಷಣ ಪ್ರೇಮಿಯಾಗಿರುವ ಇವರು ಕೊಡುಗೈ ದಾನಿಯಾಗಿಯೂ ಪರಿಚಿತರು. 1997ರಲ್ಲಿ ಕರ್ನಾಟಕದಲ್ಲಿ ನಡೆದ 4ನೇ ನ್ಯಾಷನಲ್ ಗೇಮ್ಸ್ ಮತ್ತು 1999ರಲ್ಲಿ ಮಣಿಪುರಾದಲ್ಲಿ ನಡೆಸಲ್ಪಟ್ಟ 5ನೇ ನ್ಯಾಷನಲ್ ಗೇಮ್ಸ್‌ಗಳ ಆಹಾರವನ್ನು ಪೂರೈಸಿ ಹೊಟೇಲ್ ಉದ್ಯಮದಲ್ಲಿ ತನ್ನದೇ ಆದ ಸ್ವಂತಿಕೆಯ ಛಾಪು ಮೂಡಿಸಿಕೊಂಡಿದ್ದಾರೆ.
Advertisement
ಸದ್ಯ ಹಲವಾರು ಪ್ರತಿಷ್ಠಿತ ಸಂಸ್ಥೆಗಳ ಕಾರ್ಯಾಧ್ಯಕ್ಷರಾಗಿ, ಆಡಳಿತ ನಿರ್ದೇಶಕರಾಗಿ, ಟ್ರಸ್ಟಿ, ಪದಾಧಿಕಾರಿಯಾಗಿ ಸೇವಾ ನಿರತರಾಗಿದ್ದಾರೆ. ಬೆಂಗಳೂರು, ಮಂಗಳೂರು, ದಿಲ್ಲಿ, ಮುಂಬಯಿ, ಗೋವಾ ನಗರಗಳಲ್ಲಿ ಗೋಲ್ಡ್‌ಫಿಂಚ್ ಹೊಟೇಲ್‌ಗಳನ್ನು ಹೊಂದಿರುವ ಇವರು ಪಂಚತಾರಾ ಹೊಟೇಲ್, ವಸತಿಗೃಹ, ವ್ಯಾಪಾರ ಸಂಕೀರ್ಣ, ಕಟ್ಟಡ ನಿರ್ಮಾಣ ಸಂಸ್ಥೆಗಳನ್ನು ಮುನ್ನಡೆಸಿ ಸಾವಿರಾರು ಜನರಿಗೆ ಉದ್ಯೋಗ, ಉದ್ಯಮ ಒದಗಿಸಿದ್ದಾರೆ.
ಅವರ ಸಾಧನೆಗಳಿಗೆ ಹೊಟೇಲ್ ಉದ್ಯಮಶ್ರೀ ಪುರಸ್ಕಾರ, ಭಾರತ್ ಗೌರವ ರತ್ನ ಪುರಸ್ಕಾರ, ಇಂಟರ್‌ನ್ಯಾಶನಲ್ ಗೋಲ್ಡ್ ಸ್ಟಾರ್ ಮಿಲಿನಮ್ ಪುರಸ್ಕಾರ, ಬೆಸ್ಟ್ ಇಂಟಲೆಕುcವಲ್ ಅವಾರ್ಡ್ ಆಫ್ ಕಾರ್ಪೊರೇಟ್ ಲೀಡರ್‌ಶಿಪ್, ರಾಜೀವ್ ಗಾಂಧಿ ಶೀರೋಮನಿ ಪುರಸ್ಕಾರ, ಟಿಪ್ಪು ಸುಲ್ತಾನ್ ಪುರಸ್ಕಾರ, ನ್ಯಾಶನಲ್ ಅವಾರ್ಡ್ ಫಾರ್ ಓವರ್ ಆಲ್ ಅಚೀವ್‌ಮೆಂಟ್, ಒಕ್ಕಲಿಗ ರತ್ನ ಪ್ರಶಸ್ತಿ, ತೌಳವಶ್ರೀ ಪ್ರಶಸ್ತಿ, ಕರಾವಳಿ ರತ್ನ ಅವಾರ್ಡ್, ನಾಡಪ್ರಭು ಕೆಂಪೇಗೌಡ ಇಂಟರ್‌ನ್ಯಾಶನಲ್ ಅವಾರ್ಡ್, ದುಬೈಯಲ್ಲಿ ಮತ್ತು ಕರ್ನಾಟಕ ಪ್ರದೇಶ ಹೊಟೇಲ್ ಆ್ಯಂಡ್ ರಿಟರ್ನ್ ಅಸೋಸಿಯೇಶನ್‌ನಿಂದ ಉದ್ಯಮರತ್ನ ಪುರಸ್ಕಾಗಳು ಒಲಿದು ಬಂದಿವೆ. ಬಂಟರ ಸಂಘ ಮುಂಬಯಿ ಸಂಸ್ಥೆಯ ನಿಕಟವರ್ತಿಯಾಗಿರುವ ಪ್ರಕಾಶ್ ಶೆಟ್ಟಿ ಅವರು ಬಂಟರ ಸಂಘ ಮುಂಬಯಿ ತನ್ನ ಶಿಕ್ಷಣ ಮತ್ತು ಸಮಾಜ ಕಲ್ಯಾಣಾಭಿವೃದ್ಧಿ ಸಮಿತಿಯು ವಾರ್ಷಿಕವಾಗಿ ನಡೆಸುವ ಸಂಘದ ಬೃಹತ್ ಶೆ„ಕ್ಷಣಿಕ ಮತ್ತು ಸಾಮಾಜಿಕ ಕ್ಷೇಮಾಭಿವೃದ್ಧಿ ಕಾರ್ಯಕ್ರಮದ ಪ್ರಧಾನ ಪ್ರಾಯೋಜಕರಲ್ಲಿ ಒಬ್ಬರಾಗಿದ್ದಾರೆ.
ಗಣ್ಯರ ಅಭಿನಂದನೆ“ವಿಜನರಿ ಹೊಟೇಲ್ ಓನರ್ ಆಫ್ ದ ಈಯರ್’ ಪ್ರಶಸ್ತಿ ಪುರಸ್ಕೃತ ಪ್ರಕಾಶ್ ಶೆಟ್ಟಿ ಅವರಿಗೆ ಚರಿಷ್ಮಾ ಬಿಲ್ಡರ್ನ ಆಡಳಿತ ನಿರ್ದೇಶಕ ಸುಧೀರ್ ವಿ. ಶೆಟ್ಟಿ, ತುಂಗಾ ಹೊಟೇಲ್ ಸಮೂಹದ ಆಡಳಿತ ನಿರ್ದೇಶಕ ಸುಧಾಕರ್ ಎಸ್. ಹೆಗ್ಡೆ, ಸಂಸದ ಗೋಪಾಲ ಸಿ. ಶೆಟ್ಟಿ, ಆಲ್‌ಕಾರ್ಗೋ ಸಮೂಹದ ಶಶಿಕಿರಣ್ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಭವಾನಿ ಫೌಂಡೇಶನ್‌ನ ಸಂಸ್ಥಾಪಕಾಧ್ಯಕ್ಷ ಕೆ. ಡಿ. ಶೆಟ್ಟಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಉಪಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ನಗ್ರಿಗುತ್ತು ವಿವೇಕ್ ಶೆಟ್ಟಿ, ಬಿ. ವಿವೇಕ್ ಶೆಟ್ಟಿ, ರಘುರಾಮ ಕೆ. ಶೆಟ್ಟಿ ಬೆಳಗಾವಿ, ಸಿಎ ಶಂಕರ್ ಬಿ. ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ, ಎರ್ಮಾಳ್ ಹರೀಶ್ ಶೆಟ್ಟಿ, ವಿರಾರ್ ಶಂಕರ್ ಶೆಟ್ಟಿ, ಜಯರಾಮ ಎನ್. ಶೆಟ್ಟಿ, ಸಿಎ ಐ. ಆರ್. ಶೆಟ್ಟಿ, ಮಹೇಶ್ ಎಸ್. ಶೆಟ್ಟಿ ಅವರು ಅಭಿನಂದಿಸಿದ್ದಾರೆ. ಚಿತ್ರ – ವರದಿ : ರೋನ್ಸ್ ಬಂಟ್ವಾಳ್