ದೋಟಿಹಾಳ(ಕೊಪ್ಪಳ): ಸರ್ಕಾರವು ಶಾಲೆ ಆರಂಭಿಸಿದೆ. ಮಕ್ಕಳು ಕ್ರಮೇಣ ಶಾಲೆಗೆ ಆಗಮಿಸಿ ಪಾಠ ಆಲಿಸುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ನೆರವಾಗುವ ಬಿಸಿಯೂಟವನ್ನು ಆರಂಭಿಸುತ್ತಿಲ್ಲ. ಇದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತುಂಬ ತೊಂದರೆಯಾಗುತ್ತಿದೆ. ಸರ್ಕಾರ ಕೋವಿಡ್ ಸೋಂಕು ನಿಯಂತ್ರಣದ ಬಳಿಕ ಎಲ್ಲವನ್ನು ಆರಂಭ ಮಾಡಿದೆ.
ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ 6ರಿಂದ 10ನೇ ತರಗತಿವರೆಗೂ ಶಾಲೆ ಆರಂಭವಾಗಿದೆ.ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ಪಾಲಕರು ಬೆಳಗ್ಗೆ ಹೊಲ ಗದ್ದೆಗಳಿಗೆ ದುಡಿಮೆಗೆ ಹೋದವರುಸಂಜೆ ವೇಳೆಗೆ ಮನೆಗೆ ಆಗಮಿಸುತ್ತಾರೆ. ವೇಳೆ ಮಕ್ಕಳು ಪಾಲಕರು ಬರುವವರೆಗೂ ಶಾಲಾ ಅವಧಿಯಲ್ಲಿ ಶಿಕ್ಷಕರ ಪಾಠ ಆಲಿಸುತ್ತಾರೆ. ಅವರಿಗೆ ಮಧ್ಯಾಹ್ನದ ಊಟದ ಸಮಸ್ಯೆಯೂಎದುರಾಗುವುದು ಸಾಮಾನ್ಯ. ಸರ್ಕಾರ ಇದೆಲ್ಲವನ್ನು ಗಮನಿಸಿ ಈ ಯೋಜನೆ ಆರಂಭಿಸಿದೆ. ಕೋವಿಡ್ ಬಳಿಕ ಸರ್ಕಾರ ಇದೊಂದನ್ನು ಸ್ಥಗಿತ ಮಾಡಿ ವಿದ್ಯಾರ್ಥಿಗಳ ಊಟಕ್ಕೆ ತೊಂದರೆ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಇನ್ನೂ ವಿದ್ಯಾರ್ಥಿಗಳು “ನಮ್ಮ ಮನ್ಯಾಗ ಎಲ್ಲರೂ ಮುಂಜಾನೆ ಐದು ಗಂಟೆಗೆ ಹೊಲಕ್ಕೆ ಹೋಗ್ತಾರಾ. ರಾತ್ರಿ ಮಾಡಿದ ಅನ್ನ ಊಟ ಮಾಡಿ, ಮಧ್ಯಾಹ್ನಕ್ಕೂ ಅದನ್ನೇ ಬತ್ತಿಕಟ್ಟಿಕೊಂಡು ಶಾಲೆಗೆ ಬರ್ತೀವಿ. ಆದರೆಮಧ್ಯಾಹ್ನದ ವೇಳೆಗೆ ನಮ್ಮ ಬುತ್ತಿ ಅನ್ನ ಕೆಟ್ಟು (ಹಳಸಿ) ಹೋಗಿರುತ್ತದೆ. ಇದರಿಂದ ಊಟಕ್ಕೆ ತೊಂದರೆಯಾಗುತ್ತಿದೆ’ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ಶಾಲೆಯಲ್ಲಿ ಬಿಸಿಯೂಟ ಇಲ್ಲದ ಕಾರಣ. ನಾವು ರಾತ್ರಿ ಮಾಡಿದಅನ್ನುವನ್ನೇ ಮಧ್ಯಾಹ್ನ ಬುತ್ತಿ ಕಟ್ಟಿಕೊಂಡುಶಾಲೆಗೆ ಬರುತ್ತೇವೆ. ಮಧ್ಯಾಹ್ನದ ಹೊತ್ತಿಗೆಅನ್ನ ಬಿಸಿಲಿಗೆ ಕೆಟ್ಟು ಹೋಗುತ್ತಿದೆ. ಕೆಲವರು ಮನೆಯಿಂದ ಊಟ ತರುವುದಿಲ್ಲ. ಅವರನ್ನುಜೊತೆಯಲ್ಲಿ ಕರೆದುಕೊಂಡು ಊಟಮಾಡುತ್ತೇವೆ. ಸರ್ಕಾರ ಮಧ್ಯಾಹ್ನದ ಬಿಸಿಯೂಟ ಆರಂಭಿಸಲಿ.
-ಅಮರೇಶ ಚವ್ಹಾಣ, ಶಿವಪ್ಪ ರಾಠೊಡ, ವಿದ್ಯಾರ್ಥಿಗಳು
ಸದ್ಯ ಕೋವಿಡ್ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಮಕ್ಕಳಿಗೆ ಆಹಾರ ಧಾನ್ಯ ಮಾತ್ರ ವಿತರಣೆ ಮಾಡಲಾಗುತ್ತಿದೆ. ಆದರೆ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡುತ್ತಿಲ್ಲ.
-ಅನಿತಾ, ಜಿಲ್ಲಾ ಅಕ್ಷರದಾಸೋಹ ಅಧಿಕಾರಿ ಕೊಪ್ಪಳ
ಕೇಂದ್ರ ಸರ್ಕಾರ ಕೊರೊನಾ ಹಾವಳಿಯಿಂದ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ಸ್ಥಗಿತ ಮಾಡಲು ಆದೇಶ ನೀಡಿದೆ. ಶಾಲೆಗಳಲ್ಲಿ ಮಕ್ಕಳು ಸಾಮೂಹಿಕವಾಗಿ ಊಟ ಮಾಡುವುದನ್ನು ನಿಲ್ಲಿಸಿದ್ದಾರೆ. ಮಕ್ಕಳ ಸಮಸ್ಯೆಗಳ ಬಗ್ಗೆ ಅ ಧಿಕಾರಿಗಳ ಜತೆ ಚರ್ಚೆ ಮಾಡಿ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೋಳ್ಳುತ್ತೇವೆ.
-ನಾರಾಯಣಗೌಡ, (ಜೆಡಿಯು) ಮಧ್ಯಾಹ್ನ ಬಿಸಿಯೂಟ ಯೋಜನೆಯ ಅಧಿಕಾರಿ ಬೆಂಗಳೂರು
-ಮಲ್ಲಿಕಾರ್ಜುನ ಮೆದಿಕೇರಿ