Advertisement

ಪಂಚಮಸಾಲಿ ಸಮಾಜದಿಂದ ಶೀಘ್ರವೇ ಹಾಸ್ಟೆಲ್‌

02:04 PM Aug 05, 2017 | |

ವಿಜಯಪುರ: ಜಿಲ್ಲಾ ಪಂಚಮಸಾಲಿ ಸಂಘದಿಂದ ಶೀಘ್ರವೇ ಸಮಾಜದ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಸ್ಟೆಲ್‌ ತೆರೆಯುವ ಜೊತೆಗೆ ಯುಪಿಎಸ್‌ಸಿ-ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಪ್ರತಿಭಾವಂತ ಬಡ ಪದವೀಧರರಿಗೆ ಉಚಿತ ತರಬೇತಿ ಕೊಡಿಸುವುದಾಗಿ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಭೀಮನಗೌಡ ಬಿರಾದಾರ ನಾಗರಾಳಹುಲಿ ಹೇಳಿದರು.

Advertisement

ಶುಕ್ರವಾರ ನಗರದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ನಡೆದ ಪಂಚಮಸಾಲಿ ಸಮಾಜದ ವಧು-ವರರ,
ಉದ್ಯೋಗ ಮಾಹಿತಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಿಲ್ಲಾ ಪಂಚಮಸಾಲಿ ಸಂಘದಿಂದ ಸಮಾಜ ಬಹುದಿನಗಳ ಬೇಡಿಕೆಯಾಗಿದ್ದ ವಧು-ವರರ, ಉದ್ಯೋಗ ಮಾಹಿತಿ ಕೇಂದ್ರಕ್ಕೆ ಇದೀಗ ಚಾಲನೆ ದೊರೆತಿದೆ. ಅದೇ ರೀತಿ ಬರುವ ದಿನಗಳಲ್ಲಿ ಶಿಕ್ಷ  ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಟ್ಟುಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಐಎಎಸ್‌, ಐಪಿಎಸ್‌, ಐಆರ್‌ಎಸ್‌, ಹೀಗೆ ಉನ್ನತ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಪದವೀಧರರಿಗೆ ಸಮಾಜದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. 

ಬುರಣಾಪುರದ ಆರೂಢ ಆಶ್ರಮದ ಯೋಗೇಶ್ವರಿ ಮಾತಾಜಿ ಮಾತನಾಡಿ, ಸಮಾಜದ ಪ್ರಗತಿಗೆ ಸಂಘದಿಂದ ಒಳ್ಳೆ ಕಾರ್ಯಗಳನ್ನು ಹಮ್ಮಿಕೊಂಡಿರುವುದು ಅನುಕರಣೀಯ ಹಾಗೂ ಶ್ಲಾಘನೀಯ. ಸಾಮಾಜಿಕ ಸಮಸ್ಯೆ ಎನಿಸಿರುವ ನಿರುದ್ಯೋಗ ನಿವಾರಣೆಗೆ ಪಂಚಮಸಾಲಿ ಸಮಾಜ ಕೈಗೊಂಡಿರುವ ಮಾಹಿತಿ ಕೇಂದ್ರ ಸ್ಥಾಪನೆ ಅನುಕರಣೀಯವಾಗಿದೆ. ಸಮಾಜದ ಏಳ್ಗೆಗೆ ಪ್ರಮುಖರು ಕೈಗೊಳ್ಳುವ ಇಂಥ ಕಾರ್ಯಕ್ರಮಗಳಿಗೆ ಸಮಾಜ ಎಲ್ಲ ಜನರು ಸೂಕ್ತ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಎಂಜನೀಯರ್‌ ಬಿ.ಪಿ. ಕೆಂಗನಾಳ ಮಾತನಾಡಿ, ನಿರುದ್ಯೋಗಿ ಯುವಕರು ವಿಜಯಪುರ ನಗರದ ಬಿಎಲ್‌ಡಿಇ ರಸ್ತೆಯ ಯಳಮೇಲಿ ಕಾಂಪ್ಲೆಕ್‌ ನಲ್ಲಿರುವ ಬಸವ ಸೌಹಾರ್ದ ಸಹಕಾರಿ ಬ್ಯಾಂಕ್‌ ಹಾಗೂ ಆಶ್ರಮ ರಸ್ತರೆಯಲ್ಲಿರುವ ಕಿತ್ತೂರ ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ಹೆಸರು ನೋಂದಾಯಿಸಬೇಕು. ಇದಕ್ಕಾಗಿ ನೇಮಿತವಾಗಿರುವ ಸಂಚಾಲಕ ಮಲ್ಲಿಕಾರ್ಜುನ  ಬಿರಾದಾರ 9972932547 ಹಾಗೂ 988630281 ಇವರನ್ನು ಸಂಪರ್ಕಿಸಬೇಕು ಎಂದು ಮನವಿ ಮಾಡಿದರು.

ಸುರೇಶ ಬಿರಾದಾರ, ಕಿತ್ತೂರ ರಾಣಿ ಚನ್ನಮ್ಮ ಸಂಸ್ಥೆಯ ನಿರ್ದೇಶಕ ಸಿದ್ದಣ್ಣ ಕರೂರ, ಪ್ರಕಾಶ ಆಲೂರ, ಬಾಬು ಶಿರಶ್ಯಾಡ, ಬಸವರಾಜ ಬೆ„ಚಬಾಳ, ಸದಾಶಿವ ಅಳ್ಳಿಗಿಡದ, ಹರೀಶ ಬರಟಗಿ, ರಾಜುಗೌಡ ಪಾಟೀಲ- ಕುದರಿ ಸಾಲವಾಡಗಿ, ಡಾ.ಬಿ.ಎಸ್‌.ಪಾಟೀಲ-ನಾಗರಾಳ ಹುಲಿ, ಅರವಿಂದ ಗೊಬ್ಬೂರ, ಕುಮಾರ ಶಿರಶ್ಯಾಡ, ನಾಗರಾಜ ಬಿರಾದಾರ, ಅಮಿತ್‌ ಬಿರಾದಾರ, ಪಿಂಟು ದೇಸಾಯಿ, ಸಂತೋಷ ಜಾಲಿಹಾಳ ಕಾರ್ಯಕ್ರಮದಲ್ಲಿ
ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next