Advertisement

ವಸತಿ ನಿಲಯದ ಸಮಸ್ಯೆ: ವಾರ್ಡ್‌ ಸದಸ್ಯ ಪರಿಶೀಲನೆ

12:40 PM Dec 18, 2021 | Team Udayavani |

ಚಿತ್ತಾಪುರ: ಪಟ್ಟಣದ ವಾರ್ಡ್‌ ಸಂಖ್ಯೆ 4ರಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ಪೂರ್ವ ಬಾಲಕರ ವಸತಿ ನಿಲಯಕ್ಕೆ ಪುರಸಭೆ ಸದಸ್ಯ ವಿನೋದ ಗುತ್ತೇದಾರ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಕುರಿತು ಪರೀಶಿಲನೆ ನಡೆಸಿದರು.

Advertisement

ನಂತರ ಮಾತನಾಡಿದ ಅವರು, ಶಾಸಕ ಪ್ರಿಯಾಂಕ್‌ ಖರ್ಗೆ ಕೋಟ್ಯಂತರ ರೂ. ಅನುದಾನ ಬಿಡುಗಡೆಗೊಳಿಸಿ ಬಾಲಕರ ವಸತಿ ನಿಲಯ ನಿರ್ಮಿಸಿದ್ದಾರೆ. ಆದರೆ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿದ್ದರಿಂದ ವಸತಿ ನಿಲಯದಲ್ಲಿ ಹಲವು ಸಮಸ್ಯೆಗಳು ಉದ್ಭವವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಳೆ ಬಂದರೆ ವಸತಿ ನಿಲಯದ ಕೋಣೆಗಳಲ್ಲಿ ನೀರು ಸಂಗ್ರಹವಾಗುತ್ತಿದೆ. ವಿದ್ಯಾರ್ಥಿಗಳು ಸ್ನಾನ ಮಾಡಿದ ನೀರು, ಊಟ ಮಾಡಿ ಕೈ ತೊಳೆದುಕೊಳ್ಳುವ ನೀರು, ಅಡುಗೆ ಮಾಡಿದ ನೀರು ಒಂದೇ ಪೈಪ್‌ನಲ್ಲಿ ಹೋಗುತ್ತಿದೆ. ಇದರಿಂದ ವಸತಿ ನಿಲಯದ ಆವರಣದಲ್ಲಿ ಈ ನೀರು ಜಮಾವಣೆ ಆಗುತ್ತಿದೆ. ವಸತಿ ನಿಲಯದ ಆವರಣದಿಂದ ನೀರು ಹೊರಗೆ ಹೋಗಲು ಪೈಪ್‌ ಅಳವಡಿಸಿಲ್ಲ. ಇದರಿಂದ ಸೊಳ್ಳೆಗಳ ಕಾಟ, ಗಬ್ಬು ವಾಸನೆ ಹರಡಿದೆ ಎಂದು ಸಿಡಿಮಿಡಿಗೊಂಡರು.

ಈ ಕುರಿತು ಗುತ್ತಿಗೆದಾರರನ್ನು ಪ್ರಶ್ನಿಸಿದರೆ ಅದು ನಮ್ಮ ಎಸ್ಟಿಮೆಂಟ್‌ನಲ್ಲಿ ಇಲ್ಲ ಎನ್ನುತ್ತಿದ್ದಾರೆ. ಕೂಡಲೇ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಕೈಗೊಂಡು ಅವರ ಪರವಾನಗಿ ರದ್ದು ಮಾಡಬೇಕು ಎಂದು ಪುರಸಭೆಗೆ ಒತ್ತಾಯಿಸಿದರು. ನಂತರ ಸ್ಥಳಕ್ಕೆ ಪುರಸಭೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಕರೆಸಿ ವಸತಿ ನಿಲಯದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next