Advertisement

ಹಾಸ್ಟೆಲ್‌ ಮಕ್ಕಳಿಗೆ ನೆರವಿಗೆ ಮನವಿ

06:53 AM Jul 10, 2020 | Lakshmi GovindaRaj |

ಕೋಲಾರ: ಕೋವಿಡ್‌ 19ನಿಂದ ಮನೆಯಲ್ಲಿರುವ ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಆಹಾರ ಪದಾರ್ಥ, ಇತರೆ ಸೌಲಭ್ಯವನ್ನು ಅವರ ಮನೆಗೆ ಪೂರೈಸ ಬೇಕೆಂದು ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಬೆಳಮಾರನಹಳ್ಳಿ ಆನಂದ್‌, ಜಿಪಂ ಸಿಇಒಗೆ ಹಾಗೂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಅರುಣಪ್ರಸಾದ್‌ಗೆ ಮನವಿ ಸಲ್ಲಿಸಿದರು.

Advertisement

ಜಿಪಂ ಅಧೀನದಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳು ಎರಡು ಮೂರು ತಿಂಗಳಿನಿಂದ ಕೋವಿಡ್‌ 19 ಲಾಕ್‌ಡೌನ್‌ ಇದ್ದುದ್ದರಿಂದ ಮನೆಗಳಲ್ಲಿಯೇ ಉಳಿದಿದ್ದಾರೆ.  ಈಗ ಆನ್‌ಲೈನ್‌ನಲ್ಲಿ ತರಗತಿ ನಡೆಯುವ ಕಾರಣ ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನ ಕೂಲವಾಗುವಂತೆ ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಸರ್ಕಾರದ ಅನುದಾನದಿಂದ ಮನೆಗೆ ಆಹಾರ ಧಾನ್ಯ,  ಇತರೆ ಸೌಲಭ್ಯ ಒದಗಿಸಬೇಕೆಂದು ಮನವಿ ಮಾಡಿದರು.

ಇತ್ತೀಚಿನ ದಿನಗಳಲ್ಲಿ ಕೋವಿಡ್‌ 19 ಲಾಕ್‌ ಡೌನ್‌ ಕಾರಣ ಗ್ರಾಮೀಣ ಭಾಗದ ಜನತೆ ಕೂಲಿ ಸಿಗದೆ ಆಹಾರಕ್ಕೆ ಹಾಹಾಕಾರ ಪಡುವಂತಹ ಪರಿಸ್ಥಿತಿ ಇದೆ. ಆದ್ದರಿಂದ ಬಡ ವಿದ್ಯಾರ್ಥಿಗಳ ಕ್ಲಿಷ್ಟ ಪರಿಸ್ಥಿತಿ ಅರ್ಥ ಮಾಡಿಕೊಂಡು ಆಹಾರ ಪೂರೈಸುವುದಾಗಲಿ ಅಥವಾ ವಿದ್ಯಾರ್ಥಿಗಳಿಗೆ  ರುವ ಹಣವನ್ನು ಅವರ ಬ್ಯಾಂಕ್‌ ಖಾತೆಗೆ ಜಮಾ ಮಾಡಲು ಕ್ರಮ ವಹಿಸಬೇಕೆಂದು ಒತ್ತಾಯಿಸಿದ್ದಾರೆ.

ಜಿಪಂ ಡೆಪೂಟಿ  ಸೆಕ್ರೆಟರಿ ಸಂಜೀವಪ್ಪ, ಸಹಾಯಕ ಕಾರ್ಯದರ್ಶಿ ವೆಂಕಟಾಚಲಪತಿ ಉಪಸ್ಥಿತಿಯಲ್ಲಿ ಮನವಿ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next