Advertisement

ಮಹಿಳೆಯರು ಪ್ರಗತಿ ಸಾಧಿಸಿ: ಅಪರ್ಣಾ

04:02 PM May 30, 2020 | Naveen |

ಹೊಸಪೇಟೆ: ಮಹಿಳೆಯರು ಆರ್ಥಿಕ ಪ್ರಗತಿ ಸಾಧಿಸಲು ಉತ್ಪಾದನಾ ಸಕ್ರಿಯವಾಗಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಬಳ್ಳಾರಿ ನಬಾರ್ಡ್‌ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ ಅಪರ್ಣಾ ಕೋಲ್ತೆ ಸಲಹೆ ನೀಡಿದರು.

Advertisement

ತಾಲೂಕಿನ ವೆಂಕಟಾಪುರ 76 ಕ್ಯಾಂಪಿನಲ್ಲಿ ಪೇಪರ್‌ ಬ್ಯಾಗ್‌, ಮಾಸ್ಕ್, ವಯರ್‌ ಬ್ಯಾಗ್‌ ತಯಾರಿಕೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿ, ಮಹಿಳೆಯರು ಉತ್ಪಾದನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಆರ್ಥಿಕ ಉನ್ನತಿ ಹಾಗೂ ದೇಶದ ಏಳಿಗೆಗೆ ಕಾರಣವಾಗಬೇಕಿದೆ ಎಂದರು. ಸ್ಥಿರಾ ಸಂಸ್ಥೆಯ ಕಾರ್ಯದರ್ಶಿ ಬಿ. ರೇಣುಕಾ ಮಾತನಾಡಿ, ತರಬೇತಿ ಅವಧಿಯಲ್ಲಿ ಮಹಿಳೆಯರಿಗೆ ಸಾಮಾಜಿಕ ಅಂತರದ ಮೂಲಕ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಸ್ಯಾನಿಟೈಸರ್‌ ಬಳಕೆ ಕೋವಿಡ್ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು.

ಉದಯ್‌ ಪೇಪರ್‌ ಕ್ರಾಫ್ಟ್‌ ಡಿ.ಲಕ್ಷ್ಮಣ, ಕೊಟ್ಟೂರಿನ ಸುರಕ್ಷಾ ಅಸೋಷಿಯೇಷನ್‌ ಬಿ.ನಿಂಗಮ್ಮ, ಸುರಕ್ಷಿತ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಆಂಜನೇಯ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೊಜನೆ ರಾಮಾಸಾಗರ ವಲಯದ ಮೇಲ್ವಿಚಾರಕ ಬಸಯ್ಯಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next