Advertisement

ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪಾಠ

06:48 PM May 15, 2020 | Naveen |

ಹೊಸಪೇಟೆ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಠಿಯಿಂದ ವಿಜಯನಗರ ಕಾಲೇಜಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ತರಗತಿಗಳ ಬಾಕಿ ಉಳಿದಿರುವ ಪಠ್ಯಕ್ರಮವನ್ನು ಆನ್‌ಲೈನ್‌ ಮೂಲಕ ನೀಡಲಾಗುತ್ತಿದೆ ಎಂದು ಕಾಲೇಜಿನ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ ಹಾಗೂ ಪ್ರಾಂಶುಪಾಲ ಪ್ರಭಯ್ಯ ತಿಳಿಸಿದರು.

Advertisement

ನಗರದ ವಿಜಯನಗರ ಕಾಲೇಜಿನಲ್ಲಿ ಮಂಗಳವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೊರೊನಾ ನಿಯಂತ್ರಣಕ್ಕಾಗಿ ಮಾ.14 ರಿಂದ ಮೇ 17ರ ಮುಂದಿನ ಆದೇಶದ ವರೆಗೆ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಈ ಸಮಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ತರಗತಿಗಳ ಬಾಕಿ ಉಳಿದಿರುವ ಪಠ್ಯಕ್ರಮವನ್ನುಆನ್‌ಲೈನ್‌ ಮೂಲಕ  ನೀಡಲಾಗುತ್ತಿದೆ. ಕಾಲೇಜಿನ ಬಿಎ, ಬಿಕಾಂ, ಬಿಎಸ್‌ಸಿ, ಬಿಸಿಎ, ಪಿಜಿಐ ಪಿಜಿ ಸುಮಾರು 3276 ವಿದ್ಯಾರ್ಥಿಗಳಿದ್ದು, ಇದರಲ್ಲಿ 2274 ವಿದ್ಯಾರ್ಥಿಗಳಿಗೆ ಶೇ.69 ರಷ್ಟು ಆನ್‌ ಲೈನ್‌ ಮೂಲಕ ಬೋಧನೆ ಮಾಡಿಸಿ, ಪಠ್ಯಕ್ರಮ ಪೂರ್ಣಗೊಳಿಸುವ ಪ್ರಯತ್ನ ಮಾಡಲಾಗಿದೆ. ಕಾಯಂ ಮತ್ತು ಅತಿಥಿ ಬೋಧಕ ಸಿಬ್ಬಂದಿ ಹಾಗೂ ಬೋಧಕೇತರ ಸಿಬ್ಬಂದಿ ಪೂರ್ಣ ಪ್ರಮಾಣದಲ್ಲಿ ಆನ್‌ಲೈನ್‌ ಮೂಲಕ ಬೋಧನೆ ಮಾಡುತ್ತಿದೆ ಎಂದರು.

ಯುಜಿಸಿ, ಕಾಲೇಜ್‌ ಶಿಕ್ಷಣ ಆಯುಕ್ತರು ಹಾಗೂ ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಇನ್ನುಳಿದ ಶೇ.31 ರಷ್ಟು ವಿದ್ಯಾರ್ಥಿಗಳಿಗೆ ಲಾಕ್‌ಡೌನ್‌ ತೆರವು ನಂತರ ವಿಶ್ವವಿದ್ಯಾಲಯದ ಆದೇಶದಂತೆ ನಡೆಸಲಾಗುವುದು. ಜುಲೈ/ ಆಗಸ್ಟ್‌ ತಿಂಗಳಲ್ಲಿ ಪರೀಕ್ಷೆ ನಡೆಯುವ ಸಂಭವವಿದೆ ಎಂದರು. ಪ್ರಾಧ್ಯಾಪಕ ಮೃತ್ಯುಂಜಯ ರುಮಾಲೆ, ವೆಂಕಟೇಶ ಬೋವಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next