Advertisement

ಭರತ್‌ ರೆಡ್ಡಿ-ವೈಜಯಂತಿ ಸರಳ ವಿವಾಹ

12:36 PM May 25, 2020 | Naveen |

ಹೊಸಪೇಟೆ: ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ರಾಣಿ ಸಂಯುಕ್ತ ಅವರ ಪುತ್ರಿ ವೈಜಯಂತಿ ಹಾಗೂ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ನಾರಾ ಸೂರ್ಯನಾರಾಯಣ ರೆಡ್ಡಿ ಅವರ ಕಿರಿಯ ಪುತ್ರ ಎನ್‌.ಭರತ್‌ ರೆಡ್ಡಿ ವಿವಾಹ ನಗರದಲ್ಲಿ ಕೋವಿಡ್ ಭೀತಿಯ ನಡುವೆ ಭಾನುವಾರ ನಡೆಯಿತು.

Advertisement

ಪೂರ್ವ ನಿಯೋಜಿತ ವಿವಾಹ ಮಹೋತ್ಸವಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದ ಹಿನ್ನೆಲೆಯಲ್ಲಿ ನಗರದ ವಿವೇಕಾನಂದ ನಗರದಲ್ಲಿರುವ ರಾಣಿ ಸಂಯುಕ್ತ ಅವರ ನಿವಾಸದಲ್ಲಿ ವಧು-ವರರ ಎರಡೂ ಕುಟುಂಬಗಳ ಸಮಕ್ಷಮದಲ್ಲಿ ವಿವಾಹ ನಡೆಯಿತು. ಅಪಾರ ಜನರು, ಬೆಂಬಲಿಗರನ್ನು ಹೊಂದಿದ ಎರಡೂ ಕುಟುಂಬಗಳ ಅದ್ಧೂರಿ ವಿವಾಹಕ್ಕೆ ಕೋವಿಡ್‌-19 ಬ್ರೇಕ್‌ ಹಾಕಿತ್ತು. ಕಡಿಮೆ ಜನರ ನಡುವೆಯೂ ಗಣ್ಯರು, ಶಾಸಕರು ಹಾಗೂ ಸಚಿವರು ಸಾಕ್ಷಿಯಾದರು.

ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ, ಅರಣ್ಯ ಸಚಿವ ಆನಂದ ಸಿಂಗ್‌, ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ, ನಗರ ಶಾಸಕ ಸೋಮಶೇಖರ ರೆಡ್ಡಿ, ಮುಖಂಡರಾದ ವೆಂಕಟೇಶ್‌ ಪ್ರಸಾದ್‌ ಸೇರಿದಂತೆ ಇತರೆ ಗಣ್ಯರು ವಿವಾಹಕ್ಕೆ ಸಾಕ್ಷಿಯಾದರು. ವಧು ತಂದೆ ಕೆ.ಬಿ. ಶ್ರೀನಿವಾಸ ರೆಡ್ಡಿ ಈ ಹಿಂದೆ ನಡೆದ ಎಂಎಲ್ಸಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.