Advertisement

ಸ್ವಿಜರ್‌ಲ್ಯಾಂಡ್‌ಗೆ ಹಾಪ್‌ಮನ್‌ ಕಪ್‌ ಪ್ರಶಸ್ತಿ

12:35 AM Jan 06, 2019 | Team Udayavani |

ಪರ್ತ್‌: ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ “ಹಾಪ್‌ಮನ್‌ ಕಪ್‌’ ಟೂರ್ನಿಯಲ್ಲಿ ಸ್ವಿಜರ್‌ಲ್ಯಾಂಡ್‌ ತಂಡ ಪ್ರಶಸ್ತಿ ಜಯಿಸಿದೆ.

Advertisement

ಶನಿವಾರ ನಡೆದ ಮಿಶ್ರ ತಂಡ ವಿಭಾಗದ ಫೈನಲ್‌ನಲ್ಲಿ ರೋಜರ್‌ ಫೆಡರರ್‌-ಬೆಲಿಂಡಾ ಬೆನ್ಸಿಕ್‌ ಜೋಡಿ 2-1 ಗೇಮ್‌ಗಳಿಂದ ಜರ್ಮನಿಯ ಅಲ್ಸೆಕಾಂಡರ್‌ ಜ್ವೆರೇವ್‌-ಆ್ಯಂಜೆಲಿಕ್‌ ಜೆಂಲಿಕಾ ಕೆರ್ಬರ್‌ ಜೋಡಿ ವಿರುದ್ಧ ಜಯಿಸುವುದರೊಂದಿಗೆ ಸ್ವಿಸ್‌ ಈ ಸಾಧನೆ ಮಾಡಿತು.

ಈ ಜಯದೊಂದಿಗೆ ಹಾಪ್‌ಮನ್‌ ಕಪ್‌ನ ಇತಿಹಾಸದಲ್ಲಿ ರೋಜರ್‌ ಫೆಡರರ್‌ ಅತ್ಯಂತ ಯಶಸ್ವಿ ಆಟಗಾರ ಎಂಬ ಹೆಗ್ಗಳಿಕೆಗಾ ಪಾತ್ರರಾಗಿದ್ದಾರೆ. ಸ್ವಿಸ್‌ ತಂಡದ 3 ಪ್ರಶಸ್ತಿ ಗೆಲುವಿನ ವೇಳೆ ಫೆಡರರ್‌ ತಂಡದ ಸದಸ್ಯರಾಗಿದ್ದರು. ಇದು ಸ್ವಿಜರ್‌ಲ್ಯಾಂಡ್‌ಗೆ ಒಲಿದ 4ನೇ ಪ್ರಶಸ್ತಿ. ಅಮೆರಿಕ 6 ಸಲ ಪ್ರಶಸ್ತಿ ಗೆದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next