Advertisement
ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ 5 ವಿಕೆಟಿಗೆ 218 ರನ್ ಪೇರಿಸಿದರೆ, ವೆಸ್ಟ್ ಇಂಡೀಸ್ 19 ಓವರ್ಗಳಲ್ಲಿ 5 ವಿಕೆಟಿಗೆ 221 ರನ್ ಬಾರಿಸಿತು. ಇದು ಇಂಗ್ಲೆಂಡ್ ವಿರುದ್ಧ ವಿಂಡೀಸ್ ಸಾಧಿಸಿದ ಅತ್ಯಧಿಕ ಮೊತ್ತದ ಯಶಸ್ವಿ ಚೇಸಿಂಗ್ ಆಗಿದೆ.32 ಸಿಕ್ಸರ್ ಮತ್ತು 25 ಬೌಂಡರಿ ಸಿಡಿಯಲ್ಪಟ್ಟಿದ್ದು ಈ ಪಂದ್ಯದ ಬ್ಯಾಟಿಂಗ್ ಅಬ್ಬರಕ್ಕೆ ಸಾಕ್ಷಿ.
ಬಳಿಕ ನಾಯಕ ಪೊವೆಲ್ (38) ಮತ್ತು ಶಫೇನ್ ರುದರ್ಫೋರ್ಡ್ (ಔಟಾಗದೆ 29) ಸೇರಿಕೊಂಡು ತಂಡವನ್ನು ಯಶಸ್ವಿಯಾಗಿ ದಡ ಮುಟ್ಟಿಸಿದರು. ಲೂಯಿಸ್ 31 ಎಸೆತಗಳಿಂದ 68 ರನ್ (4 ಬೌಂಡರಿ, 7 ಸಿಕ್ಸರ್) ಹೊಡೆದರೆ, ಹೋಪ್ ಕೇವಲ 24 ಎಸೆತಗಳಿಂದ 54 ರನ್ ಸಿಡಿಸಿ (7 ಬೌಂಡರಿ, 3 ಸಿಕ್ಸರ್) ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಇಂಗ್ಲೆಂಡ್ ಪರ ಫಿಲ್ ಸಾಲ್ಟ್ 55, ಜೇಕಬ್ ಬೆಥೆಲ್ ಔಟಾಗದೆ 62 ರನ್ ಹೊಡೆದರು (32 ಎಸೆತ, 4 ಬೌಂಡರಿ, 5 ಸಿಕ್ಸರ್). ಮೊದಲ 3 ಪಂದ್ಯಗಳನ್ನು ಇಂಗ್ಲೆಂಡ್ 8 ವಿಕೆಟ್, 7 ವಿಕೆಟ್, 3 ವಿಕೆಟ್ಗಳಿಂದ ಜಯಿಸಿತ್ತು.
Related Articles
Advertisement