Advertisement

ತಂದೆ-ತಾಯಿ ಮೇಲಿನ ಗೌರವ ಕ್ಷೀಣ: ಬಳಿಗಾರ

01:04 PM Nov 19, 2018 | |

ರಾಯಚೂರು: ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ತಂದೆ-ತಾಯಿಯನ್ನು ಗೌರವದಿಂದ ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇಂದು ವೃದ್ಧಾಶ್ರಮಗಳ ಹೆಚ್ಚಾಗುತ್ತಿವೆ ಹಾಗೂ ಅವಶ್ಯಕತೆ ಹೆಚ್ಚಾಗಿದೆ ಎಂದು ಇಲಕಲ್‌ನ ವಿಶ್ರಾಂತ ಪ್ರಾಚಾರ್ಯ ಡಾ| ಶಂಭು ಬಳಿಗಾರ ಕಳವಳ ವ್ಯಕ್ತಪಡಿಸಿದರು.

Advertisement

ಮಾತೋಶ್ರೀ ಮಹಾಂತಮ್ಮ ಶಿವಬಸಪ್ಪ ಗೋನಾಳ ಪ್ರತಿಷ್ಠಾನದಿಂದ ಪ್ರತಿಭಾ ಸುಗಮ ಸಂಗೀತ ಸಂಸ್ಥೆಯ 9ನೇ ವಾರ್ಷಿಕೋತ್ಸವ ಅಂಗವಾಗಿ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ರವಿವಾರ ಆಯೋಜಿಸಿದ್ದ ಮಹಾಂತ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ದಂಪತಿಗಳು ಉದ್ಯೋಗಸ್ಥರಾಗಿರುವುದರಿಂದ ತಂದೆ- ತಾಯಿಗಳ ಮೇಲೆ ವಾತ್ಸಲ್ಯ ಕಡಿಮೆಯಾಗುತ್ತಿದೆ. ಒಂದು ಕುಟುಂಬದ ಸಂಬಂಧಗಳು ಹದಗೆಟ್ಟು ಹೋಗುತ್ತಿರುವುದು ಹೆಚ್ಚಾಗುತ್ತಿವೆ. ಸಂಪಾದನೆ ಭರದಲ್ಲಿ ಪತಿ-ಪತ್ನಿ ವಿಚ್ಛೇದನಗಳ ಪ್ರಮಾಣವೂ ಹೆಚ್ಚಾಗುತ್ತಿವೆ ಎಂದು ವಿಷಾದಿಸಿದ ಅವರು, ಪ್ರತಿಯೊಬ್ಬರು ಮಕ್ಕಳಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರ ಕಲಿಸಬೇಕು. ಮೊದಲು ತಾವು ಉತ್ತಮ ಪೋಷಕರಾಗಬೇಕು. ನಂತರ ಮಕ್ಕಳಿಗೂ ಅದೇ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.

ಇಂದಿನ ದಿನಮಾನಗಳಲ್ಲಿ ವಿವಿಧ ಮಠಾಧೀಶರುಗಳ ಪೂಜೆ ಪುನಸ್ಕಾರಗಳಂಥ ಧಾರ್ಮಿಕ ಕಾರ್ಯಗಳು ಕಡಿಮೆಯಾಗುತ್ತಿವೆ. ಸ್ವಾಮಿಗಳು ಕೂಡ ಹೈಟೆಕ್‌ ಆಗುತ್ತಿದ್ದಾರೆ. ಸ್ವಾಮೀಜಿಗಳು ಪೂಜೆ, ಪುನಸ್ಕಾರ ಬಿಟ್ಟು ಉಳಿದೆಲ್ಲವನ್ನು ಮಾಡುತ್ತಿದ್ದಾರೆ ಎಂದ ಅವರು, ಆದರೂ ಕೆಲ ಸ್ವಾಮೀಜಿಗಳು ನಿರಂತರ ಪೂಜೆ, ಪುನಸ್ಕಾರ ಮಾಡಿಕೊಂಡು ಬರುತ್ತಿದ್ದಾರೆ. ಅಂಥ ಸ್ವಾಮೀಜಿಗಳಲ್ಲಿ ಚಿತ್ತರಗಿ ಸಂಸ್ಥಾನ ಮಠದ ಸ್ವಾಮೀಜಿ ಒಬ್ಬರಾಗಿದ್ದಾರೆ ಎಂದರು.

ಜಿಪಂ ಸದಸ್ಯ ಮಹಾಂತೇಶ ಪಾಟೀಲ ಅತ್ತನೂರು ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಗೋನಾಳ ಪ್ರತಿಷ್ಠಾನದಿಂದ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸುತ್ತಿರುವ ಕಾರ್ಯ ಶ್ಲಾಘನೀಯ. ಸಾಧಕರಿಗೆ ಇನ್ನಷ್ಟು ಪ್ರೋತ್ಸಾಹಿಸುವ ಕಾರ್ಯ ಇದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ನಗರಸಭೆ ಸದಸ್ಯ ಜಯಣ್ಣ ಮಾತನಾಡಿ, ಪ್ರಶಸ್ತಿಯಿಂದ ಸಾಧಕರ ಜವಾಬ್ದಾರಿಯೂ ಹೆಚ್ಚುತ್ತದೆ. ಈ ಬಗ್ಗೆ ಪ್ರಶಸ್ತಿ ಪುರಸ್ಕೃತರು ತಮ್ಮ ಜವಾಬ್ದಾರಿ ಬಗ್ಗೆ ಅವಲೋಕನ ಮಾಡಿಕೊಂಡು ಸಮಾಜದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಹೇಳಿದರು.

Advertisement

ಸಾನಿಧ್ಯ ವಹಿಸಿದ್ದ ಇಲಕಲ್‌ ಚಿತ್ತರಗಿ ಸಂಸ್ಥಾನ ಮಠದ ಡಾ| ವಿಜಯ ಮಹಾಂತ ಸ್ವಾಮೀಜಿ ಮಾತನಾಡಿ, ಆಧ್ಯಾತ್ಮಿಕ ಚಿಂತನೆಯಿಂದ ಬೇಧ ಭಾವನೆ ಹೋಗಲಾಡಿಸಲು ಸಾಧ್ಯ. ಆಧ್ಯಾತ್ಮ ಅಧ್ಯಯನದಿಂದ ಸತ್ಯವನ್ನು ಕಾಣಬಹುದಾಗಿದೆ. ಪ್ರತಿಯೊಬ್ಬರು ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಬೇಕು ಎಂದರು. ಚಿಕ್ಕಸುಗೂರು ಚೌಕಿಮಠದ ಡಾ| ಸಿದ್ಧಲಿಂಗ ಸ್ವಾಮೀಜಿ ಆರ್ಶೀವಚನ ನೀಡಿದರು.

ಬಿಜೆಪಿ ಮುಖಂಡ ಆರ್‌.ಕೆ. ಅಮರೇಶ, ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಏಗನೂರು, ಪೂರ್ಣಿಮಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್‌.ಎಲ್‌. ಕೇಶವರೆಡ್ಡಿ, ಶಿವಪಾರ್ವತಿ ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ವಿ. ಸೂಗಾ, ನಗರಸಭೆ ಸದಸ್ಯರಾದ ಕೆ.ಎನ್‌.ನಾಗರಾಜ, ದಂಡಪ್ಪ ಬಿರಾದಾರ, ಈಶ್ವರ ದೇವಸ್ಥಾನ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಪ್ರತಿಷ್ಠಾನದ ಅಧ್ಯಕ್ಷ ಶರಣಪ್ಪ ಗೋನಾಳ, ಕಾರ್ಯದರ್ಶಿ ಪ್ರತಿಭಾ ಗೋನಾಳ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next