Advertisement
ಮಾರಾಪೂರ ಗ್ರಾಮದ ಉದಯೋನ್ಮುಖ ಸೈಕ್ಲಿಂಗ್ ಕ್ರೀಡಾಪಟು ಹೊನ್ನಪ್ಪ ಚಿದಾನಂದ ಧರ್ಮಟ್ಟಿ ಅ.8ರಂದು ಬೆಳಗಾವಿ ಜಿಲ್ಲೆ ಚಂದರಗಿ ಕ್ರೀಡಾವಸತಿ ಸಾಲೆಯಲ್ಲಿ ಜರುಗಿದ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಕ್ರೀಡಾಪಟುಗಳ ಆಯ್ಕೆಯ ಸ್ಪರ್ಧೆಯಲ್ಲಿ 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಭಾಗವಹಿಸಿದ್ದ ರಾಜ್ಯದ ವಿವಿಧ ಜಿಲ್ಲೆಗಳ ಹಲವು ಕ್ರೀಡಾಶಾಲೆಗಳ ಒಟ್ಟು 19 ಬಾಲಕರಲ್ಲಿ ಕೇವಲ 1 ನಿಮಿಷ 21 ಸೆಕೆಂಡ್‌ಗಳಲ್ಲಿ 1.ಕೀಮಿ ಕ್ರಮಿಸಿ ಪ್ರಥಮ ಸ್ಥಾನದೊಂದಿಗೆ ರಾಷ್ಟçಮಟ್ಟದ ಟ್ರಾಕ್ ಸೈಕ್ಲಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಇದೇ ಅ 30ರಿಂದ ನವೆಂಬರ್ 3ರವರೆಗೆ ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ರಾಷ್ಟçಮಟ್ಟದ ಸೈಕ್ಲಿಂಗ್ ಚಾಂಪಿಯನ್‌ಶಿಪ್ ನಡೆಯಲಿವೆ.
ಬಾಗಲಕೋಟೆ ಜಿಲ್ಲೆಯ ಗಡಿಗ್ರಾಮ ಮಾರಾಪೂರದ ಮಧ್ಯಮ ಕುಟುಂಬದ ಚಿದಾನಂದ ಮತ್ತು ಶಾಂತಾ ಧರ್ಮಟ್ಟಿ ದಂಪತಿಗಳ ಪುತ್ರನಾದ ಹೊನ್ನಪ್ಪ ಸದ್ಯ 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ. ಅಪ್ಪಟ ಗ್ರಾಮೀಣ ಭಾಗದ ಯುವಪ್ರತಿಭೆ ಹೊನ್ನಪ್ಪ 1 ರಿಂದ 5ನೇ ತರಗತಿವರೆಗೆ ಸೈದಾಪೂರ-ಸಮೀರವಾಡಿಯ ಸೋಮೈಯಾ ಸಿಬಿಎಸ್‌ಸಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ್ದಾರೆ. ನಂತರ 6ನೇ ತರಗತಿಯಿಂದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಲ್ಯಾಣ ಚಂದರಗಿಯ ಕ್ರೀಡಾ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರೆಸಿದ್ದಾನೆ. ಮೊದಲಿನಿಂದಲೂ ಬ್ಯಾಟ್ಮಿಟನ್ ಆಟದಲ್ಲಿ ಆಸಕ್ತಿ ಹೊಂದಿದ್ದರು ಸಹ, ಕೋವಿಡ್ ಕಾರಣ ಎರಡು ವರ್ಷ ಯಾವುದೇ ಸ್ಪರ್ಧೆಗಳು ನಡೆಯದಿರುವದು ಹಾಗೂ ಸರಿಯಾದ ಕೋಚ್ ಸಿಗದ ಕಾರಣ ಅನಿವಾರ್ಯವಾಗಿ ಕಳೆದ ಒಂದುವರೆ ವರ್ಷದಿಂದ ಸೈಕ್ಲಿಂಗ್ ತರಬೇತಿಯನ್ನು ಪಡೆಯುತ್ತಿದ್ದಾನೆ. ಒಂದುವರೆ ವರ್ಷದ ಸೈಕ್ಲಿಂಗ್ ಸಾಧನೆ
8ನೇ ತರಗತಿಯಲ್ಲಿ ಓದುತ್ತಿದ್ದಾಗ, 2022ರ ಜುಲೈ ತಿಂಗಳಿನಿಂದ ಚಂದರಗಿ ಕ್ರೀಡಾವಸತಿ ಶಾಲೆಯ ಸೈಕ್ಲಿಂಗ್ ಕೋಚ್ ಭೀಮಶಿ ವಿಜಯನಗರ ಅವರ ಮಾರ್ಗದರ್ಶನದಲ್ಲಿ ದಿನನಿತ್ಯ ಮುಂಜಾನೆ-ಸಂಜೆ ಸೇರಿ ನಿತ್ಯ 4 ಗಂಟೆಗಳ ಕಠಿಣ ಅಭ್ಯಾಸದ ಫಲವಾಗಿ ಇಂದು ರಾಷ್ಟ್ರಮಟ್ಟದ ಟ್ರಾಕ್ ಸೈಕ್ಲಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದು ಹೊನ್ನಪ್ಪನ ಅವಿರತ ಪರಿಶ್ರಮ, ಕ್ರೀಡಾಸಕ್ತಿಯೇ ಕಾರಣ. ಕಳೆದ ವರ್ಷವು ರಾಷ್ಟ್ರಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಗೆದ್ದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
Related Articles
ಹೊನ್ನಪ್ಪ ಕಳೆದ ಒಂದುವರೆ ವರ್ಷದಿಂದ ನಮ್ಮ ಶಾಲೆಯ ವಿದ್ಯಾರ್ಥಿ. ಸೈಕ್ಲಿಂಗ್ ಕ್ರೀಡೆಯಲ್ಲಿ ಆತ ತೊಡಗಿಸುಕೊಂಡಿರುವ ಆಸಕ್ತಿ, ಸಾಧಿಸಬೇಕೆಂಬ ಛಲ, ಕಠಿಣ ಪರಿಶ್ರಮ, ನಿರಂತರ ಅಭ್ಯಾಸ, ಶಾಲೆಯ ಸಹಕಾರ ಮತ್ತು ಪಾಲಕರ ಪ್ರೋತ್ಸಾಹದಿಂದಾಗಿ ಇಂದು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಆದರೆ ರಾಷ್ಟçಮಟ್ಟದ ಸೈಕ್ಲಿಂಗ್ ಚಾಂಪಿಯನ್‌ಸಿಪ್‌ನಲ್ಲಿ ಭಾಗವಹಿಸಲು ಇನ್ನು ಹೆಚ್ಚಿನ ಅತ್ಯಾಧುನೀಕ ಕ್ರೀಡಾಸೈಕಲ್ ಅಗತ್ಯವಿದೆ. ಮಧ್ಯಮ ವರ್ಗದ ಹೊನ್ನಪ್ಪ ಧರ್ಮಟ್ಟಿ ಅವರ ತಂದೆಯು ಕ್ರೀಡಾ ಸೈಕಲ್ ಕೊಡಿಸಲು ಕಳೆದ 6 ತಿಂಗಳಿನಿಂದ ಹರಸಾಹಸ ಪಡುತ್ತಿದ್ದಾರೆ. ಕ್ರೀಡಾ ಪ್ರೋತ್ಸಾಹಕರು, ದಾನಿಗಳು ಹೊನ್ನಪ್ಪನ ಸೈಕ್ಲಿಂಗ್ ಕ್ರೀಡೆಗೆ ಅಗತ್ಯ ಪ್ರೋತ್ಸಾಹ ನೀಡಿದರೆ ಪಿಯುಸಿ ಮುಗಿಯುವದರೊಳಗೆ ಭಾರತದ ಬೆಸ್ಟ್ ಸೈಕ್ಲಿಂಗ್ ರೈಡರ್ ಹೊನ್ನಪ್ಪ ಧರ್ಮಟ್ಟಿ ಆಗುತ್ತಾನೆ ಎಂಬ ವಿಶ್ವಾಸವಿದೆ.
-ಭೀಮಶಿ ವಿಜಯನಗರ. ಸೈಕ್ಲಿಂಗ್ ತರಬೇತಿದಾರರು. ಕ್ರೀಡಾ ವಸತಿ ಶಾಲೆ. ಕೆ.ಚಂದರಗಿ.
Advertisement
ಉದಯೋನ್ಮುಖ ಪ್ರತಿಭೆಗೆ ಪ್ರೋತ್ಸಾಹ ಅಗತ್ಯನಮ್ಮ ಗ್ರಾಮೀಣ ಭಾಗದ ಉದಯೋನ್ಮುಖ ಕ್ರೀಡಾಪಟು ಹೊನ್ನಪ್ಪನ ಸೈಕ್ಲಿಂಗ್ ಕ್ರೀಡಾ ಪ್ರತಿಭೆಯು ಅಮೋಘವಾಗಿದೆ. ಅತ್ಯಾಧುನೀಕ ಸೈಕಲ್ ಇಲ್ಲದ ಕೊರತೆಯ ನಡುವೆಯೂ ಇಂದು ದ್ವಿತೀಯ ಬಾರಿಗೆ ರಾಷ್ಟ್ರೀಯ ಟ್ರಾಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದು ಹೆಮ್ಮೆಯ ಸಂಗತಿ. ಹೊನ್ನಪ್ಪನ ಭವಿಷ್ಯದ ಕ್ರೀಡಾ ಸಾಧನೆಗೆ ಅಗತ್ಯವಾಗಿ ಬೇಕಾದ ಅತ್ಯಾಧುನೀಕ ಕ್ರೀಡಾ ಸೈಕಲ್ ಖರೀದಿಗೆ ನಾನು ವಯಕ್ತಿಯವಾಗಿ ಧನಸಹಾಯ ನೀಡುತ್ತಿದ್ದೇನೆ. ನಮ್ಮ ಜಿಲ್ಲೆಯ ಕ್ರೀಡಾ ಪ್ರೋತ್ಸಾಹಕರು, ಜನಪ್ರತಿನಿಧಿಗಳು, ಉದ್ಯಮಿಗಳು ಈ ಬಾಲಕನಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಆತನನ್ನು ರಾಷ್ಟ್ರಮಟ್ಟದ ಕ್ರೀಡಾಪಟುವನ್ನಾಗಿ ಬೆಳೆಸಬೇಕಾಗಿದ್ದು ಅಗತ್ಯವಾಗಿದೆ. -ಚಂದ್ರಶೇಖರ ಮೋರೆ