Advertisement

ಸಂತ ಸೇವಾಲಾಲ್‌ ಜಯಂತಿ ಸಂಪನ್ನ

02:17 PM Feb 16, 2022 | Team Udayavani |

ಹೊನ್ನಾಳಿ: ಬಂಜಾರ ಸಮಾಜದ ಜಗದ್ಗುರು ಸಂತಸೇವಾಲಾಲ್‌ ಅವರ 283ನೇ ಜಯಂತಿಯನ್ನುಕೋವಿಡ್‌ ಹಿನ್ನೆಲೆಯಲ್ಲಿ ಮಂಗಳವಾರಸೂರಗೊಂಡನಕೊಪ್ಪ ಗ್ರಾಮದ ಭಾಯಘಡ್‌ಪುಣ್ಯ ಕ್ಷೇತ್ರದಲ್ಲಿ ಸರಳವಾಗಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಹೋಮದ ಕುಂಡ (ಭೋಗ್‌)ಪೂಜೆ, ಪೂರ್ಣಾಹುತಿಯೊಂದಿಗೆ ಸರಳವಾಗಿಆಚರಿಸಲಾಯಿತು.

Advertisement

ಮಂಗಳವಾರ ಬೆಳಿಗ್ಗೆ ಗಂಗಾಪೂಜೆಯೊಂದಿಗೆಸೇವಾಲಾಲ್‌ರ ಉತ್ಸವಮೂರ್ತಿ ಮೆರವಣಿಗೆನಡೆಯಿತು. ನಂತರ ವಿವಿಧ ಧಾರ್ಮಿಕಕೈಂಕರ್ಯಗಳೊಂದಿಗೆ ಹೋಮಕುಂಡವನ್ನುಸಿದ್ಧಗೊಳಿಸಿ ಕರ್ಪೂರದಿಂದ ಬೆಳಗಿಸಲಾಯಿತು.ನೆರೆದಿದ್ದ ಕೆಲವೇ ಭಕ್ತರ ಮತ್ತು ಮಾಲಾಧಾರಿಗಳಜಯ ಘೋಷದೊಂದಿಗೆ ಸೇವಾಲಾಲ್‌ ಮತ್ತುಮರಿಯಮ್ಮನ ಅರ್ಚಕರು ಪೂಜೆ ನೆರವೇರಿಸಿಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು.

ಸಂತ ಸೇವಾಲಾಲ್‌ರ ಜನ್ಮಸ್ಥಾನ ಮಹಾಮಠಸಮಿತಿ ಅಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿ,ಕೋವಿಡ್‌-19 ಹಿನ್ನೆಲೆಯಲ್ಲಿ ಸರ್ಕಾರ ಮತ್ತುಜಿಲ್ಲಾಡಳಿತ ಹಾಗೂ ಮಹಾಮಠ ಸಮಿತಿಯವರುಸೇವಾಲಾಲ್‌ ಜಯಂತಿ ಆಚರಣೆ ರದ್ದುಪಡಿಸುವತೀರ್ಮಾನ ಕೈಗೊಂಡಿದ್ದರಿಂದ ಇಂದು ಸರಳವಾಗಿಸಮಿತಿಯವರು ಆಚರಣೆ ಮಾಡಿದ್ದೇವೆ.

ಆದರೂದೂರದಿಂದ ಭಕ್ತರು ಆಗಮಿಸುತ್ತಿದ್ದು ದೇವರದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆಎಂದರು.ಬೋಗ್‌ ಕಾರ್ಯಕ್ರಮದಲ್ಲಿ ಮಠಸಮಿತಿ ಅಧ್ಯಕ್ಷ ಡಾ| ಈಶ್ವರ ನಾಯ್ಕ, ಪ್ರಧಾನಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಖಜಾಂಚಿತಾವರ ನಾಯ್ಕ, ತಾಂಡಾ ಅಭಿವೃದ್ಧಿ ನಿಗಮದನಿರ್ದೇಶಕ ಮಾರುತಿ ನಾಯ್ಕ, ಮುಖಂಡರಾದಹೀರಾ ನಾಯ್ಕ, ಡಾ| ರಾಜ ನಾಯ್ಕ, ಸುರೇಂದ್ರನಾಯ್ಕ, ಓಂಕಾರ ನಾಯ್ಕ, ಜುಂಜ್ಯಾ ನಾಯ್ಕಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next