ಬೆಂಗಳೂರು: ಆರ್ಥಿಕ ಹೊರೆ ಜತೆಗೆ ಆಸ್ಪತ್ರೆಗಳ ಮೇಲಿನ ಒತ್ತಡ ತಗ್ಗಿಸುವ ನಿಟ್ಟಿನಲ್ಲಿ ಬಿಬಿಎಂಪಿ ಇನ್ನು ಮುಂದೆ ಸೋಂಕಿನ ಲಕ್ಷಣಗಳಿಲ್ಲದ “ಪಾಸಿಟಿವ್’ ಪ್ರಕರಣಗಳಿಗೆ ಅವರವರ ಮನೆಗಳಲ್ಲಿಯೇ ಚಿಕಿತ್ಸೆ ನೀಡಲು ಚಿಂತನೆ ನಡೆಸಿದೆ. ನಗರದಲ್ಲಿ ಸೋಂಕು ದೃಢಪಟ್ಟವರಲ್ಲಿ ಶೇ. 50ರಿಂದ 60ರಷ್ಟು ಜನರಲ್ಲಿ ಕೋವಿಡ್ 19 ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ. ಇವರೆಲ್ಲರಿಗೂ ಮನೆಗಳಲ್ಲೇ ಚಿಕಿತ್ಸೆ ನೀಡುವ ಸಂಬಂಧ ಚರ್ಚೆ ನಡೆದಿದೆ.
ಪ್ರಸ್ತುತ ಲಕ್ಷಣಗಳಿಲ್ಲದ ಪಾಸಿಟಿವ್ ಪ್ರಕರಣಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ, ಇವರ ಪ್ರಾಥಮಿಕ ಹಾಗೂ ದ್ವಿತೀಯ ಸಂರ್ಪಕಿತರನ್ನೂ ಕ್ವಾರಂಟೈನ್ ಮಾಡಲಾ ಗುತ್ತಿದೆ. ಇದಕ್ಕೆಲ್ಲ ಹಣ ಖರ್ಚಾಗುತ್ತಿದ್ದು, ಪಾಲಿಕೆ ಮತ್ತು ಸರ್ಕಾರಕ್ಕೂ ಆರ್ಥಿಕವಾಗಿ ಹೊರೆಯಾಗುತ್ತಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಮನೆಗಳಲ್ಲಿ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಿಕೊಳ್ಳಲಾಗುತ್ತಿದೆ.
ಅಪಾಯ ಕಡಿಮೆ: ಕೋವಿಡ್ 19ಗೆ ನಿರ್ದಿಷ್ಟ ಔಷಧಿ ಇಲ್ಲ. ಸದ್ಯ ಆಸ್ಪತ್ರೆಗಳಲ್ಲಿ ಸೋಂಕಿನ ಲಕ್ಷಣಗಳು (ಕೆಮ್ಮು, ಜ್ವರ, ಶೀತ ಹಾಗೂ ಉಸಿರಾಟದ ಸಮಸ್ಯೆ) ಇರುವವರಿಗೆ ಆಯಾ ಸಮಸ್ಯೆ ತಪ್ಪಿಸುವ ನಿಟ್ಟಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಲಕ್ಷಣ ಇಲ್ಲದವರಿಗೆ ಅಂತಹ ಸಮಸ್ಯೆಗಳೇ ಇರುವುದಿಲ್ಲ. ಅಲ್ಲದೆ, ಇವರಿಂದ ಬೇರೆಯವರಿಗೆ ಸೋಂಕು ಹರಡುವ ಸಾಧ್ಯತೆಯೂ ಶೇ. 10ರಷ್ಟು ಮಾತ್ರ ಇರು ತ್ತದೆ. ಹೀಗಾಗಿ, ಹೆಚ್ಚು ಅಪಾಯ ಇರುವು ದಿಲ್ಲ ಎಂದು ಬಿಬಿಎಂಪಿ ಆರೋಗ್ಯಾ ಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಪದೇ ಪದೆ ಪರೀಕ್ಷಿಸುವ ಅವಶ್ಯ ಕತೆಯೂ ಇರುವುದಿಲ್ಲ.
ಹೀಗಾಗಿ, ಇವರಿಗೆ ಮನೆಗಳಲ್ಲೇ ಚಿಕಿತ್ಸೆ ನೀಡುವುದು ಹಾಗೂ ಮನೆಯವರಿಗೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲು ಪಾಲಿಕೆ ಮುಂದಾಗಿದೆ. ಯಾರಿಗೆ ಮನೆಯಲ್ಲಿ ಪ್ರತ್ಯೇಕವಾಗಿ ಕ್ವಾರಂಟೈನ್ ಆಗಲು ಸೌಲಭ್ಯ ಇರುವುದಿಲ್ಲ, ಕೊಳೆ ಗೇರಿ ಹಾಗೂ ಕೆಲವು ಪ್ರದೇಶಗಳಲ್ಲಿನ ಲಕ್ಷಣ ರಹಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಸಂಬಂಧ ಚರ್ಚೆ ನಡೆದಿದೆ. ಇದೇ ಮಾದರಿಯಲ್ಲಿ ಗರ್ಭಿಣಿಯರು, ವಯಸ್ಸಾದವರು ಮತ್ತು ಮಕ್ಕಳಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಚಿಂತನೆ ಇದೆ ಎಂದು ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಮನೆ ಮಾತ್ರ ಕಂಟೈನ್ಮಂಟ್: ಯಾರಲ್ಲಾದರೂ ಕೋವಿಡ್ 19 ಕಾಣಿಸಿಕೊಂಡರೆ ಅವರು ವಾಸವಿರುವ ನಿರ್ದಿಷ್ಟ ಪ್ರದೇಶವನ್ನು ಕಂಟೈನ್ಮೆಂಟ್ ಮಾಡಲಾಗುತ್ತಿದೆ. ಆದರೆ, ಲಕ್ಷಣಗಳಿಲ್ಲದ ಸೋಂಕಿತರಿಗೆ ಮನೆಗಳಲ್ಲೇ ಕಂಟೈನ್ಮೆಂಟ್ ಮಾಡಿದರೆ, ಆ ಪ್ರದೇಶವನ್ನು ಮಾತ್ರ ಕಂಟೈನ್ಮೆಂಟ್ ಎಂದು ಪರಿಗಣಿಸುವುದು ಹಾಗೂ ಸೋಂಕು ದೃಢಪಟ್ಟ ವ್ಯಕ್ತಿಯ ಕುಟುಂಬಸ್ಥರು ಹೊರಗೆ ಬರದಂತೆ ಎಚ್ಚರಿಕೆ ವಹಿಸುವಂತೆ ನೋಡಿಕೊಳ್ಳಲು ಸಾಧ್ಯವೇ ಎಂಬುದರ ಬಗ್ಗೆಯೂ ಪಾಲಿಕೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.