Advertisement
ಹಳದಿ ಹಲ್ಲುಗಳು ವ್ಯಕ್ತಿಯಲ್ಲಿ ಕೀಳರಿಮೆಗೆ ಕಾರಣವಾಗಿ ಆತ ಮಾನಸಿಕವಾಗಿ ನೊಂದುಕೊ ಳ್ಳುವಂತೆ ಮಾಡುತ್ತವೆ. ಅಲ್ಲದೆ ಹಳದಿ ಹಲ್ಲು ಹೊಂದಿರುವ ವ್ಯಕ್ತಿ ಇತರರೊಂದಿಗೆ ಮಾತನಾಡಲು, ಬೆರೆಯಲು ಹಿಂಜರಿಯುತ್ತಾರೆ. ಆದ್ದರಿಂದ ಹಳದಿ ಹಲ್ಲುಗಳಿಂದ ಮುಕ್ತಿ ಹೊಂದಲು ಕೆಲವೊಂದು ಮನೆ ಮದ್ದುಗಳನ್ನು ಬಳಸುವುದು ಉತ್ತಮ.
· ಅಡುಗೆ ಸೋಡ, ಉಪ್ಪು, ಮಾವಿನ ಎಲೆ, ಗೇರು ಎಲೆ ಇತ್ಯಾದಿಗಳನ್ನು ಬಳಸಿ ಹಲ್ಲು ಉಜ್ಜುವುದರಿಂದ ಹೊಳಪು ಲಭಿಸುವುದು.
· ಉಪ್ಪು, ಸೋಡಾ, ಪುದೀನ ಎಲೆಗಳನ್ನು ಬೆರೆಸಿ ಪೇಸ್ಟ ಮಾಡಿಕೊಳ್ಳಿ. ಇದನ್ನು ಹಲ್ಲುಗಳ ಮೇಲೆ ಹಚ್ಚಿ 20 ನಿಮಿಷ ಬಿಡಿ, ಅನಂತರ ಬಿಸಿನೀರಿನಲ್ಲಿ ಬಾಯಿ ಮುಕ್ಕಳಿಸಿ. ಇದು ಹಲ್ಲು ಹಳದಿಯಾಗಿರುವುದನ್ನು ನಿವಾರಿಸುತ್ತದೆ.
· ಬೇವಿನ ಎಲೆಯನ್ನು ನೀರೊಳಗೆ ಹಾಕಿ ಕುದಿಸಿ, ಕಷಾಯ ಮಾಡಿ ಮೌತ್‌ವಾಶ್‌ನಂತೆ ಬಳಸಿ.
· ಕಬ್ಬನ್ನು ಜಗಿದು ತಿನ್ನುವುದರಿಂದ ಹಲ್ಲುಗಳು ಗಟ್ಟಿಯಾಗುತ್ತವೆ. ಹಲ್ಲಿನ ಮೇಲಿನ ಕಲೆ, ಹಲ್ಲು ಹಳದಿಯಾಗುವುದನ್ನು ತಡೆಯಬಹುದು.
· ಕ್ಯಾಲ್ಷಿಯಂ ಹೇರಳವಾಗಿರುವ ಆಹಾರ ಪದಾರ್ಥಗಳನ್ನು ಸೇವಿಸಿ.
· ನಿಂಬೆ ರಸವನ್ನು ಉಪ್ಪಿನೊಂದಿಗೆ ಮಿಶ್ರ ಮಾಡಿ ಹಲ್ಲುಜ್ಜುವುದರಿಂದ ಹೊಳಪು ಲಭಿಸುತ್ತದೆ.
· ನಿಂಬೆಹಣ್ಣಿನ ಸಿಪ್ಪೆಯಿಂದ ಉಜ್ಜಿದರೂ ಹಲ್ಲುಗಳು ಬೆಳ್ಳಗಾಗುತ್ತವೆ.
· ವಿವಿಧ ಜೀವಸತ್ವಗಳಿರುವ ತರಕಾರಿಗಳ ಸೇವನೆ ಉತ್ತಮ.
· ಹಲ್ಲುಗಳ ವರ್ಣ ಬದಲಾಯಿಸುವ ಆಂಟಿ ಬಯೋಟಿಕ್‌ಗಳ ಅನಗತ್ಯ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ.
· ಸ್ಟ್ರಾಬೆರಿಯಿಂದ ಉಜ್ಜುವುದರಿಂದಲೂ ಹಳದಿ ಹಲ್ಲಿನಿಂದ ಮುಕ್ತಿ ಪಡೆಯಬಹುದು.
· ಪುದೀನ ಬಳಸಿರುವ ಟೂತ್ ಪೇಸ್ಟ್ ಬಳಕೆ ಉಪಯುಕ್ತ.
· ತೆಂಗಿನೆಣ್ಣೆ ಒಂದು ಚಮಚ ಬಾಯಿಗೆ ಹಾಕಿ 5 ನಿಮಿಷಗಳ ಬಳಿಕ ಬಾಯಿ ಮುಕ್ಕಳಿಸಿ.
· ಬೇವಿನ ಎಣ್ಣೆ ಬಳಸಿ ಮೌತ್‌ವಾಶ್ ಮಾಡಿ.
· ತುಳಸಿ ಎಲೆಗಳನ್ನು ನೆರಳಲ್ಲಿ ಇಟ್ಟು ಒಣಗಿಸಿ ಪುಡಿಮಾಡಿ ಹಲ್ಲುಜ್ಜಲು ಉಪಯೋಗಿಸಿ.
· ಸ್ವಲ್ಪ ತೆಂಗಿನೆಣ್ಣೆಗೆ ಚಿಟಿಕೆಯಷ್ಟು ಅರಿಸಿ ನ ಪುಡಿ ಮಿಶ್ರ ಮಾಡಿ ಹಲ್ಲುಜ್ಜಿ.
· ಅರಿಸಿನವನ್ನು ಹಾಲಿನೊಂದಿಗೆ ಚೆನ್ನಾಗಿ ಮಿಶ್ರ ಮಾಡಿ ಹಲ್ಲುಜ್ಜಲು ಬಳಸಬಹುದು. ಜಿಕೆ