Advertisement

“ಭಾರತ ವಿರುದ್ಧದ ತವರಿನ ಸೋಲು ಇನ್ನೂ ಕಾಡುತ್ತಿದೆ’

11:27 PM Apr 11, 2020 | Sriram |

ಸಿಡ್ನಿ: ಭಾರತ ವಿರುದ್ಧ ತವರಿನಲ್ಲಿ ಸೋತ ಟೆಸ್ಟ್‌ ಸರಣಿಯನ್ನು ಇನ್ನೂ ಮರೆಯಲಾಗುತ್ತಿಲ್ಲ ಎಂದು ಆಸ್ಟ್ರೇಲಿಯ ತಂಡದ ಮುಖ್ಯ ಕೋಚ್‌
ಜಸ್ಟಿನ್‌ ಲ್ಯಾಂಗರ್‌ ಹೇಳಿದ್ದಾರೆ.

Advertisement

ಲ್ಯಾಂಗರ್‌ 2018ರ ಮೇ ತಿಂಗಳಲ್ಲಿ ಆಸ್ಟ್ರೇಲಿಯ ತಂಡದ ಮುಖ್ಯ ಕೋಚ್‌ ಆಗಿ ನೇಮಕಗೊಂಡಿದ್ದರು. ಇದೇ ವೇಳೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿ ವೇಳೆ ಚೆಂಡು ವಿರೂಪ ಪ್ರಕರಣ ಸಂಬಂಧ ನಾಯಕ ಸ್ಟೀವನ್‌ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ ಒಂದು ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾದರು. ಈ ಇಬ್ಬರೂ ಪ್ರಮುಖ ಆಟಗಾರರನ್ನು ಕಳೆದುಕೊಂಡಿದ್ದ ಆಸ್ಟ್ರೇಲಿಯ ತಂಡ ಒಂದು ವರ್ಷದಲ್ಲಿ ಹಲವಾರು ಏರಿಳಿತಗಳನ್ನು ಕಂಡಿತ್ತು. ಇಂತಹ ಕಠಿನ ಸನ್ನಿವೇಶದಲ್ಲಿ ಆಸೀಸ್‌ ತಂಡವನ್ನು ಹಿಡಿತಕ್ಕೆ ತರಲು ಹರಸಾಹಸ ಪಡುತ್ತಿದ್ದ ಲ್ಯಾಂಗರ್‌ಗೆ ಮತ್ತೂಂದು ಹಿನ್ನಡೆ ಎದುರಾಯಿತು. ಅದು ತವರಿನಲ್ಲಿ ಭಾರತ ವಿರುದ್ಧ ಆಡಿದ್ದ ಮೊದಲ ಟೆಸ್ಟ್‌ ಸರಣಿಯನ್ನು ಸೋತು ಮುಖಭಂಗ ಅನುಭವಿಸಿತ್ತು.

ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ ವೇಳೆ ಲ್ಯಾಂಗರ್‌, ಭಾರತ ವಿರುದ್ಧದ ಟೆಸ್ಟ್‌ ಸರಣಿ ನಿಜಕ್ಕೂ ನನಗೆ ಎಚ್ಚರಿಕೆಯ ಕರೆಯಾಗಿತ್ತು ಮತ್ತು ಅದು ನನ್ನ ಜೀವನದ ಅತ್ಯಂತ ಕಠಿನ ಕ್ಷಣಗಳಲ್ಲಿ ಒಂದಾಗಿದೆ. ತರಬೇತಿಯ ವೃತ್ತಿ ಜೀವನದಲ್ಲಿ ಮುಂದೆ 10 ವರ್ಷ ಕಳೆದರೂ ಕೂಡ ಆ ಕಹಿ ಘಟನೆ ಮರೆಯಲಾರೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next