Advertisement

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಕಿಷ್ಕಿಂದಾ ಅಂಜನಾದ್ರಿ ಮೃತ್ತಿಕೆ, ಪಂಪಾ ಸರೋವರದ ಜಲ

04:30 PM Jul 24, 2020 | keerthan |

ಗಂಗಾವತಿ: ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಕಿಷ್ಕಿಂದಾ ಪ್ರದೇಶದಿಂದ ಮೃತ್ತಿಕೆ (ಮಣ್ಣು) ಮತ್ತು‌ಪವಿತ್ರ ಪಂಪಾ ಸರೋವರದ ಜಲ ಕಳುಹಿಸಲಾಗುತ್ತಿದೆ.

Advertisement

ಕಿಷ್ಕಿಂದಾ ಪ್ರದೇಶ ರಾಮಾಯಣ ಮಹಾಭಾರತದಲ್ಲಿ ಉಲ್ಲೇಖಿತವಾಗಿದ್ದು ಶ್ರೀರಾಮಚಂದ್ರ,ಲಕ್ಷ್ಮಣ ಸೀತೆಯವರು ವನವಾಸ ಸಂದರ್ಭದಲ್ಲಿ ಕಿಷ್ಕಿಂದಾ ಋಷಿಮುಖ ಪರ್ವತ ಪ್ರದೇಶಕ್ಕೆ ಆಗಮಿಸಿ ಸುಗ್ರೀವಾ, ಆಂಜನೇಯನನ್ನು ಸಂದಿಸಿದ ಪ್ರದೇಶವಾಗಿದೆ. ಆದ್ದರಿಂದ ಅಯೋಧ್ಯಾದಲ್ಲಿ ಶ್ರೀರಾಮಮಂದಿರ ನಿರ್ಮಾಣದ ಸಂದರ್ಭದಲ್ಲಿ ದೇಶದ ಚಾರಧಾಮ ಕ್ಷೇತ್ರಗಳಿಂದ ಪವಿತ್ರ ಜಲ ಮತ್ತು ಮೃತ್ತಿಕೆ ತರಿಸಲಾಗುತ್ತಿದ್ದು ಕಿಷ್ಕಿಂದಾ ಅಂಜನಾದ್ರಿ ಬೆಟ್ಟದ ಮಣ್ಣು ಮತ್ತು ಪಂಪಾ ಸರೋವರದ ಜಲ ಬಳಕೆ ಮಾಡುತ್ತಿದ್ದು ಶುಕ್ರವಾರ ಆನೆಗೊಂದಿ ರಾಜ ಮನೆತನದವರ ನೇತೃತ್ವದಲ್ಲಿ ಮೃತ್ತಿಕೆ ಜಲವನ್ನು ಕಳಿಸಿಕೊಡಲಾಯಿತು

ಈ ಸಂದರ್ಭದಲ್ಲಿ ರಾಜಮನೆತನದ ಪದ್ಮನಾಭರಾಜ, ಗೋವರ್ಧನ ರಾಜ, ಭಜರಂಗದಳ  ಹೊಸಪೇಟೆ ಘಟಕದ ಗಂಗಾಧರ ಬಜರಂಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next