Advertisement

ಹಾಲ್ಟ್ ಸ್ಟೇಷನ್‌ ವಾರದಲ್ಲಿ ಸೇವೆಗೆ

12:14 PM Dec 06, 2020 | Suhan S |

ಬೆಂಗಳೂರು: ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುವ ಪ್ರಯಾಣಿಕರಿಗೆ ಸಂತಸದ ಸುದ್ದಿ. ರಾಜಧಾನಿಯಿಂದ ಏರ್‌ಪೋರ್ಟ್‌ಗೆ ಹೋಗುವ ಮತ್ತು ನಗರಕ್ಕೆ ಆಗಮಿಸುವ ಪ್ರಯಾಣಿಕರಿಗೆ ವೇಗದ ಸೇವೆ ನೀಡಲು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹಾಲ್ಟ್ ಸ್ಟೇಷನ್ ವಾರದಲ್ಲಿ ಸೇವೆಗೆ ಮುಕ್ತವಾಗಲಿದೆ.

Advertisement

ಈ ಕುರಿತು ಪ್ರತಿಕ್ರಿಯಿಸಿದ ಬೆಂಗಳೂರು ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅಶೋಕ್‌ ಕುಮಾರ್‌ ವರ್ಮ, ಹಾಲ್ಟ್ಸ್ಟೇಷನ್‌ ನಿರ್ಮಾಣಕ್ಕೆ ಬಿಐಎಎಲ್‌ ಸಂಪೂರ್ಣ ವೆಚ್ಚ ಭರಿಸಿದ್ದು, ನಗರದಿಂದ ಹಾಲ್ಟ್ ಸ್ಟೇಷನ್ ಗೆ ಬಂದಿಳಿಯುವ ಪ್ರಯಾಣಿಕರಿಗೆ ಶೆಟಲ್‌ ಸರ್ವಿಸ್‌ಗಳನ್ನೂ ಸ್ವತಃ ಬಿಐಎಎಲ್‌ ಕಲ್ಪಿಸುತ್ತಿದೆ. ಒಂದು ವಾರದಲ್ಲಿ ಸೇವೆಗೆ ಮುಕ್ತಗೊಳ್ಳುವ ಸಾಧ್ಯತೆ ಇದೆ. ಆದರೆ, ಎಷ್ಟು ರೈಲುಗಳು ಮತ್ತು ವೇಳಾಪಟ್ಟಿಯು ರೈಲ್ವೆ ಮಂಡಳಿಯಿಂದ ಅನುಮೋದನೆಗೊಂಡ ಬಳಿಕ ಪ್ರಕಟಿಸಲಾಗುವುದು ಎಂದರು.

ಕೋಲಾರದಿಂದ ಹೌರಾಗೆ ಟೊಮೊಟೊ ಸಾಗಣೆ: ಸಾಮಾನ್ಯ ಪ್ರಯಾಣಿಕರ “ಪರಿವರ್ತಿತ ರೈಲು’ಗಳಲ್ಲಿ ಕೋಲಾರದಿಂದ ಹೌರಾಕ್ಕೆ ಟೊಮೆಟೊ ಸಾಗಣೆಗೆ ಬೆಂಗಳೂರು ವಿಭಾಗೀಯ ರೈಲ್ವೆ ಮುಂದಾಗಿದ್ದು, ಮುಂದಿನಒಂದುವಾರದಲ್ಲಿಈಯೋಜನೆ ಕಾರ್ಯರೂಪಕ್ಕೆ ಬರಲಿದೆ. ಪ್ರಯಾಣಿಕರನ್ನು ಕೊಂಡೊಯ್ಯುವ ಎರಡನೇ ದರ್ಜೆಯ ಬೋಗಿ (ಜಿಎಸ್‌ಕೋಚ್‌)ಗಳನ್ನು ಪರಿವರ್ತನೆ ಮಾಡಿ, ಟೊಮೆಟೊ ಸಾಗಣೆಗೆ ಬಳಕೆ ಮಾಡಲು ಉದ್ದೇಶಿಸಲಾಗಿದೆ. ಕನಿಷ್ಠ ಹತ್ತು ಬೋಗಿಗಳನ್ನು ಬಳಸಲು ರೈಲ್ವೆ ಮಂಡಳಿ ಅವಕಾಶ ನೀಡಿದ್ದು, ಒಂದು ಶೈತ್ಯಾಗಾರವನ್ನೂ ಒಳಗೊಂಡ 15 ಬೋಗಿಗಳನ್ನು ಪ್ರಾಯೋಗಿಕವಾಗಿ ಈ ಯೋಜನೆಗೆ ಪರಿಚಯಿಸಲು ನಿರ್ಧರಿಸಲಾಗಿದೆ. ಮುಂದಿನ ವಾರ ಸಾಗಣೆಕಾರ್ಯಆರಂಭ ಸಾಧ್ಯತೆಇದೆಎಂದು ಬೆಂಗಳುರು ರೈಲ್ವೆವಿಭಾಗೀಯವ್ಯವಸ್ಥಾಪಕಅಶೋಕ್‌ಕುಮಾರ್‌ ವರ್ಮ ವರ್ಚುವಲ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೈಯಪ್ಪನಹಳ್ಳಿ ಟರ್ಮಿನಲ್‌ಗೆ ಸರ್‌ಎಂವಿ ಹೆಸರು ಬೈಯಪ್ಪನಹಳ್ಳಿಯಲ್ಲಿ ತಲೆಯೆತ್ತಲಿರುವ ರೈಲ್ವೆ ಟರ್ಮಿನಲ್‌ ಬರುವ ಫೆಬ್ರವರಿಯಲ್ಲಿ ಲೋಕಾರ್ಪಣೆಗೊಳ್ಳಲಿದ್ದು, ಇದಕ್ಕೆ ಭಾರತ ರತ್ನ ಸರ್‌ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ ಎಂದು ನಾಮಕರಣ ಮಾಡಿ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ. ಇದರೊಂದಿಗೆ ನಗರ ವ್ಯಾಪ್ತಿಯಲ್ಲಿ ರೈಲ್ವೆ ಟರ್ಮಿನಲ್‌ಗ‌ಳ ಸಂಖ್ಯೆ ಮೂರಕ್ಕೆ ಏರಲಿದೆ. ರೈಲು ದಟ್ಟಣೆ ತಗ್ಗಿಸಲು ಹಾಗೂ ಉಪನಗರ ರೈಲುಗಳ ಸೇವೆಗೆ ಈ ವಿಶ್ವೇಶ್ವರಯ್ಯ ಟರ್ಮಿನಲ್‌ ನೆರವಾಗಲಿದೆ.

ಬೈಯಪ್ಪನಹಳ್ಳಿ ಟರ್ಮಿನಲ್‌ಗೆ ಸರ್‌ಎಂವಿ ಹೆಸರು : ಬೈಯಪ್ಪನಹಳ್ಳಿಯಲ್ಲಿ ತಲೆಯೆತ್ತಲಿರುವ ರೈಲ್ವೆ ಟರ್ಮಿನಲ್‌ ಬರುವ ಫೆಬ್ರವರಿಯಲ್ಲಿ ಲೋಕಾರ್ಪಣೆಗೊಳ್ಳಲಿದ್ದು, ಇದಕ್ಕೆ ಭಾರತ ರತ್ನ ಸರ್‌ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ ಎಂದು ನಾಮಕರಣ ಮಾಡಿ ಸರ್ಕಾರ ಶುಕ್ರವಾರ ಅಧಿಸೂಚನೆಹೊರಡಿಸಿದೆ. ಇದರೊಂದಿಗೆ ನಗರ ವ್ಯಾಪ್ತಿಯಲ್ಲಿ ರೈಲ್ವೆ ಟರ್ಮಿನಲ್‌ಗ‌ಳ ಸಂಖ್ಯೆ ಮೂರಕ್ಕೆ ಏರಲಿದೆ. ರೈಲು ದಟ್ಟಣೆ ತಗ್ಗಿಸಲು ಹಾಗೂ ಉಪನಗರ ರೈಲುಗಳ ಸೇವೆಗೆ ಈ ವಿಶ್ವೇಶ್ವರಯ್ಯ ಟರ್ಮಿನಲ್‌ ನೆರವಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next