ನಿಂತು ದುರ್ವಾಸನೆ ಬೀರುತ್ತಿದೆ.
Advertisement
ಚರಂಡಿಗಳು ಕಸದಿಂದ ಭರ್ತಿಯಾಗಿರುವ ಕಾರಣ ಕೊಳಚೆ ನೀರು ರಸ್ತೆ ಮೇಲೆ ಹಾಗೂ ರಸ್ತೆ ಪಕ್ಕದಲ್ಲಿ ಹರಿದು ಹೋಗುತ್ತಿದೆ. ಪಪಂ ಅಧಿಕಾರಿಗಳ ಕಣ್ಣಿಗೆ ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆ. ಇದನ್ನು ನೋಡಿದರೆ ಪಪಂ ಆರೋಗ್ಯಾಧಿಕಾರಿ ಎಲ್ಲಿದ್ದಾರೆ ಎಂಬ ಸಂಶಯ ಪಟ್ಟಣದ ಜನರನ್ನು ಕಾಡುತ್ತಿದೆ.
Related Articles
Advertisement
ಮುಖ್ಯ ರಸ್ತೆ ಅಕ್ಕಪಕ್ಕದಲ್ಲಿರುವ ಹೂವು, ಹಣ್ಣು, ತರಕಾರಿ, ಬಾಳೆಹಣ್ಣು, ಫಾಸ್ಟ್‌ಫುಡ್, ಬೇಕರಿ, ಮಟನ್, ಚಿಕನ್, ಮೀನು ಮಾರಾಟ ಅಂಗಡಿಗಳಿಂದ ಬರುವಂತ ಕಸವನ್ನು ಸೂಕ್ತವಾಗಿ ವಿಲೆ ಮಾಡುವ ವ್ಯವಸ್ಥೆ ಇಲ್ಲದೆ ರಸ್ತೆಯ ಮೇಲೆ ಎಸೆಯುತ್ತಿದ್ದಾರೆ. ಇದರಿಂದ ಪಟ್ಟಣದ ರಸ್ತೆಗಳೆಲ್ಲ ಕಸಮಯವಾಗಿದ್ದು ಪರಿಸರವೆಲ್ಲ ಕಲುಷಿತವಾಗುತ್ತಿದೆ. ಶುದ್ಧ ಪರಿಸರ, ಸ್ವತ್ಛ ಪರಿಸರಕ್ಕಾಗಿ ನಾಗರಿಕರು ಹಲವಾರು ಬಾರಿ ಪಪಂಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಹೊನ್ನಕೆರೆ ಎನ್ನುವ ಹೊಳಲ್ಕೆರೆ ಈಗ ಹೊಸಲುಕೆರೆ ಎನ್ನುವಂತಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೂ ಸೂಕ್ತ ಕ್ರಮ ಕೈಗೊಂಡು ಸ್ವತ್ಛ ಹೊಳಲ್ಕೆರೆ ಮಾಡವರೇ ಎಂದು ಕಾದುನೋಡಬೇಕಿದೆ.
ಪಟ್ಟಣವನ್ನು ವೀಕ್ಷಿಸಲು ಸಮಯ ಸಮಯದ ಅಭಾವದ ಕೊರತೆಯಾಗಿದೆ. ಚುನಾವಣೆ ಕರ್ತವ್ಯದಲ್ಲಿ ಬಿಜೆಯಾಗಿದ್ದೇನೆ. ಕೊಳಚೆ ನಿರ್ಮೂಲನೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.ನಾಗರಾಜ್, ತಹಶೀಲ್ದಾರ್. ಪಟ್ಟಣದಲ್ಲಿರುವ ಕೊಳಚೆಯನ್ನು ಪೌರಕಾರ್ಮಿಕರು ನಿತ್ಯ ತೆಗೆಯುತ್ತಿದ್ದಾರೆ. ಅದರೂ ಕೆಲವಡೆ ಹೆಚ್ಚಾಗಿದೆ. ಅದನ್ನು ಹಂತಹಂತವಾಗಿ ಸ್ವತ್ಛಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ಉಮೇಶ್, ಮುಖ್ಯಾಧಿಕಾರಿ ಪಪಂ, ಹೊಳಲ್ಕೆರೆ. ಸ್ವತ್ಛತೆಗೆ ಮೊದಲ ಆದ್ಯತೆ ನೀಡುವುದು ಪಟ್ಟಣ ಪಂಚಾಯತ್‌ನ ಕರ್ತವ್ಯವಾಗಬೇಕು. ನಾಗರಿಕರು ಪಪಂಗೆ ಹಲವಾರು ಬಾರಿ ಮನವಿ ಸಲ್ಲಿದರೂ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸಿರುವುದು ಪ್ರಜಾಪ್ರಭುತ್ವದ ದುರಂತ.
ಎಸ್.ಅರ್. ಮೋಹನ್ ನಾಗರಾಜ್, ತಾಪಂ ಮಾಜಿ ಅಧ್ಯ ಎಸ್. ವೇದಮೂರ್ತಿ