Advertisement
ಅತಿಥಿ ಉಪನ್ಯಾಸಕರ ನೇಮಕ ರದ್ದಾದ ಬೆನ್ನಲ್ಲೇ ಕಾಲೇಜಿನಲ್ಲಿ ಪಾಠ ಪ್ರವಚನಕ್ಕೆ ಉಪನ್ಯಾಸಕರೇ ಇಲ್ಲದಂತಾಗಿದೆ. ಹೊಸ ದಾಗಿ ಉಪನ್ಯಾಸಕರ ನೇಮಕ ಆಗುವ ತನಕ ವಿದ್ಯಾರ್ಥಿಗಳಿಗೆ ತರಗತಿ ನಡೆಸುವಂತಿಲ್ಲ. ಕ್ಯಾಂಪಸ್‌ಗೆ ಬಂದರೂ ಪ್ರಯೋಜನವಿಲ್ಲ. ಹಾಗಾಗಿ ಎರಡು ದಿನ ತರಗತಿ ಇಲ್ಲ ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿದೆ.
ಕಾಲೇಜಿಗೆ ಮಂಜೂರಾಗಿರುವ ಹುದ್ದೆಗಳು 13. ಅದರಲ್ಲಿ ಪ್ರಾಂಶುಪಾಲರು ಮತ್ತು ಅರ್ಥಶಾಸ್ತ್ರ ಬೋಧಕರಿದ್ದಾರೆ. ಕೆಲವು ದಿನಗಳ ಹಿಂದೆ ಅರ್ಥಶಾಸ್ತ್ರ ಉಪನ್ಯಾಸಕರೂ ವರ್ಗಾವಣೆ ಗೊಂಡಿದ್ದು, ಅವರು ತರಬೇತಿಗೆ ತೆರಳಿದ್ದಾರೆ. ಪ್ರಸ್ತುತ ಮಂಜೂರಾತಿ ಹುದ್ದೆಯಲ್ಲಿ ಪ್ರಾಂಶುಪಾಲರನ್ನು ಹೊರತುಪಡಿಸಿ, ಉಳಿದೆಲ್ಲ ಹುದ್ದೆ ಖಾಲಿಯಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಕಾಲೇಜಿಗೆ ಬಂದರೂ ಪಾಠ ಪ್ರವಚನ ನಡೆಯುವುದಿಲ್ಲ. ಅನಿವಾರ್ಯ ವಾಗಿ ವಿದ್ಯಾರ್ಥಿಗಳಿಗೆ ರಜೆ ದೊರೆತಿದೆ. ಖಾಯಂ ಉಪನ್ಯಾಸಕರೇ ಇಲ್ಲ
ಮಂಜೂರಾಗಿರುವ ಕನ್ನಡ, ಇಂಗ್ಲಿಷ್, ಹಿಂದಿ, ಇತಿಹಾಸ, ಅರ್ಥಶಾಸ್ತ್ರ – (2 ಹುದ್ದೆ), ರಾಜ್ಯಶಾಸ್ತ್ರ, ಸಮಾಜ ಕಾರ್ಯ-2, ವಾಣಿಜ್ಯ ಶಾಸ್ತ್ರ-3, ದೈಹಿಕ ಶಿಕ್ಷಣ ನಿರ್ದೇಶಕ ಹುದ್ದೆಗಳು ಖಾಲಿ ಇವೆ. ಪ್ರಭಾರ ನೆಲೆ ಯಲ್ಲಿನ ಪ್ರಾಂಶುಪಾಲರು ಸಮಾಜಶಾಸ್ತ್ರ ಪಾಠ ಮಾಡುತ್ತಾರೆ. ಜು. 30ರೊಳಗೆ ಅತಿಥಿ ಉಪನ್ಯಾಸಕರು ಇನ್ನುಳಿದ ಎಲ್ಲÉ ಪಠ್ಯಗಳನ್ನು ಬೋಧಿಸುತ್ತಿದ್ದರು. ಆ. 1ರಿಂದ ಅವರ ನೇಮಕಾತಿ ರದ್ದುಗೊಳಿಸಿದ ಕಾರಣ ಅವರು ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ.
Related Articles
ಕಳೆದ ಶೈಕ್ಷಣಿಕ ಅವಧಿಯಲ್ಲಿ ಪೂರ್ಣ ಕಾಲಿಕ ಹಾಗೂ ಅತಿಥಿ ಶಿಕ್ಷಕರು 48 ಮಂದಿ ಉಪ ನ್ಯಾಸಕರು ಕರ್ತವ್ಯದಲ್ಲಿದ್ದರು. ಖಾಯಂ ಉಪನ್ಯಾಸಕರ ಪೈಕಿ ಕನ್ನಡ, ರಾಜ್ಯ ಶಾಸ್ತ್ರ ಉಪ ನ್ಯಾಸಕರು ಪುತ್ತೂರು ಮಹಿಳಾ ಕಾಲೇಜಿಗೆ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರು ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿಗೆ ವರ್ಗಾವಣೆಗೊಂಡು ತೆರಳಿ ದ್ದಾರೆ. ಅರ್ಥಶಾಸ್ತ್ರ ಉಪನ್ಯಾಸಕರು ವರ್ಗಾ ವಣೆ ಗೊಂಡಿದ್ದು, ರಿಲೀವ್‌ಗೆ ಬಾಕಿ ಇದೆ. ಅತಿಥಿ ಉಪನ್ಯಾಸಕರ ಆಯ್ಕೆ ರದ್ದಾ ಗಿರುವ ಕಾರಣ, ಈಗ ಉಳಿದಿರುವುದು ಪ್ರಾಂಶುಪಾಲರು ಹಾಗೂ ರಿಲೀವ್‌ಗೆ ಬಾಕಿ ಇರುವ ಓರ್ವ ಉಪನ್ಯಾಸಕ ಮಾತ್ರ. ಈಗಿನ ಅಂಕಿ-ಅಂಶದ ಆಧಾರದಲ್ಲಿ 21 ಅತಿಥಿ ಉಪನ್ಯಾಸಕರು, ಉಳಿದ 12 ಪೂರ್ಣಕಾಲಿಕ ಉಪನ್ಯಾಸಕರ ನೇಮಕ ಅಗತ್ಯವಿದೆ. ಈ ಹುದ್ದೆ ಭರ್ತಿ ಮಾಡದೆ ಕಾಲೇಜಿನಲ್ಲಿ ಪಠ್ಯ ಚಟುವಟಿಕೆಗಳನ್ನು ನಡೆಸಲು ಅಸಾಧ್ಯವಾಗಿದೆ.
Advertisement
472 ವಿದ್ಯಾರ್ಥಿಗಳುಕಡಲ ತಡಿಯ ಭಾರ್ಗವ ಡಾ| ಶಿವರಾಮ ಕಾರಂತ ಅವರ ಹೆಸರಿನಲ್ಲಿ ಪೆರುವಾಜೆಯಲ್ಲಿ ಸ್ಥಾಪಿಸಲಾಗಿರುವ ಬೆಳ್ಳಾರೆ ಸರಕಾರಿ ಪ್ರಥಮ ದರ್ಜೆ ಕಾಲೇಜು ತಾಲೂಕಿನ ಮೊದಲ ಸರಕಾರಿ ಪದವಿ ಕಾಲೇಜು ಎಂಬ ಹೆಗ್ಗಳಿಕೆ ಹೊಂದಿದೆ. ಬಿ.ಎ, ಬಿ.ಕಾಂ., ಬಿಎಸ್.ಡಬುÉ é. ಹಾಗೂ ಸ್ನಾತಕೋತ್ತರ ಪದವಿಗಳಾದ ಎಂ.ಕಾಂ, ಎಂ.ಎಸ್.ಡಬುÉ é. ತರಗತಿಗಳು ಇಲ್ಲಿವೆ. ಪ್ರಸ್ತಕ ಸಾಲಿನಲ್ಲಿ 310 ಪದವಿ ವಿದ್ಯಾರ್ಥಿ ಗಳು, 162 ಪಿ.ಜಿ. ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜು ಆರಂಭಗೊಂಡು ಒಂದೂವರೆ ತಿಂಗಳಾಗಿದ್ದು, ಮೊದಲ ಇಂಟರ್‌ನಲ್ ಪರೀಕ್ಷೆ ಆಗಿದೆ. ಈಗ ಉಪ ನ್ಯಾಸಕರ ಕೊರತೆಯಿಂದ ವಿದ್ಯಾರ್ಥಿಗಳು ಮನೆಯಲ್ಲಿ ಕೂರಬೇಕಾದ ಸ್ಥಿತಿ ಉಂಟಾ ಗಿದೆ. ಅತಿಥಿ ಉಪನ್ಯಾಸಕರ ಮರು ನೇಮಕ ಅಥವಾ ಪೂರ್ಣಕಾಲಿಕ ಉಪ ನ್ಯಾಸಕರ ನೇಮಕ ಮಾಡದೇ ಸಮಸ್ಯೆ ಬಗೆಹರಿಯುವುದು ಅಸಾಧ್ಯ. ಮಂಜೂರಾತಿ ಹುದ್ದೆಯಲ್ಲಿ ಇಬ್ಬರು ಕರ್ತವ್ಯದಲ್ಲಿದ್ದು, ಓರ್ವ ಉಪನ್ಯಾಸಕ ಟ್ರೈನಿಂಗ್‌ನಲ್ಲಿದ್ದಾರೆ. ಅವರಿಗೆ ವರ್ಗಾವಣೆ ಆಗಿದ್ದು, ರಿಲೀವ್ ಆಗಬೇಕಷ್ಟೆ. ಉಪನ್ಯಾಸಕರ ಕೊರತೆಯಿಂದ ಮೊದಲ ಅವಧಿಯಲ್ಲಿ ಪಾಠ ಮಾಡಿ, ವಿದ್ಯಾರ್ಥಿಗಳನ್ನು ಬಿಡಲಾಗಿದೆ. ಉಪನ್ಯಾಸಕರು ಬರುವ ನಿರೀಕ್ಷೆ ಇದ್ದು, ಅನಂತರ ಪಾಠ ಪ್ರವಚನ ನಡೆಯಲಿದೆ.
– ಚಂದ್ರಶೇಖರ ಕಾಂತಮಂಗಲ
ಪ್ರಭಾರ ಪ್ರಾಂಶುಪಾಲರು, ಬೆಳ್ಳಾರೆ ಪ್ರ. ಕಾಲೇಜು - ಕಿರಣ್ ಪ್ರಸಾದ್ ಕುಂಡಡ್ಕ