Advertisement

Shootout: ಜರ್ಮನಿಗೆ ಹಾಕಿ ಟೆಸ್ಟ್‌ ಸರಣಿ ದ್ವಿತೀಯ ಪಂದ್ಯ; ಭಾರತ 5-3 ಗೆಲುವು

09:18 AM Oct 25, 2024 | Team Udayavani |

ಹೊಸದಿಲ್ಲಿ: ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಮತ್ತು ಸುಖ್‌ ಜೀತ್‌ ಸಿಂಗ್‌ ಅವರ ಅವಳಿ ಗೋಲುಗಳ ನೆರವಿನಿಂದ ಭಾರತ ತಂಡವು ಹಾಕಿ ಟೆಸ್ಟ್‌ ಸರಣಿಯ ಗುರುವಾರ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಜರ್ಮನಿಯನ್ನು 5-3 ಗೋಲುಗಳಿಂದ ಸೋಲಿಸಿ ಜಯಭೇರಿ ಬಾರಿಸಿತು. ಆದರೆ ಭಾರತ ಶೂಟೌಟ್‌ನಲ್ಲಿ ಎರಡು ಪಂದ್ಯಗಳ ಸರಣಿಯಲ್ಲಿ ಸೋಲನ್ನು ಕಂಡಿದೆ.

Advertisement

ಜರ್ಮನಿಯ ಎಲಿಯನ್‌ ಮಜ್‌ಕೌರ್‌ (7 ಮತ್ತು 57ನೇ) ಅವಳಿ ಗೋಲು ದಾಖಲಿಸಿ ಮುನ್ನಡೆ ಒದಗಿಸಿದರೆ ಹೆನ್ರಿಕ್‌ ಮಾರ್ಟ್‌ಗೆನ್ಸ್‌ 60ನೇ ನಿಮಿಷದಲ್ಲಿ ಇನ್ನೊಂದು ಗೋಲು ಹೊಡೆದಿದ್ದರು. ದ್ವಿತೀಯ ಅವಧಿಯಲ್ಲಿ ಭರ್ಜರಿ ಗೋಲು ಬಾರಿಸಿದ ಭಾರತ ಮೇಲುಗೈ ಸಾಧಿಸಿತು. ಸುಖ್‌ಜೀತ್‌ 34 ಮತ್ತು 48ನೇ ನಿಮಿಷದಲ್ಲಿ ಮತ್ತು ನಾಯಕ ಹರ್ಮನ್‌ಪ್ರೀತ್‌ ಬೆನ್ನುಬೆನ್ನಿಗೆ (42 ಮತ್ತು 43ನೇ) ಅವಳಿ ಗೋಲು ಹೊಡೆದು ತಂಡಕ್ಕೆ ಮುನ್ನಡೆ ಒದಗಿಸಿದ್ದರು. 45ನೇ ನಿಮಿಷದಲ್ಲಿ ಅಭಿಷೇಕ್‌ ತಂಡದ ಐದನೇ ಗೋಲು ದಾಖಲಿಸಿದ್ದರು.

ಜರ್ಮನಿ ಬುಧವಾರ ನಡೆದ ಮೊದಲ ಪಂದ್ಯದಲ್ಲಿ 2-0 ಗೆಲುವು ದಾಖಲಿಸಿತ್ತು. ಶೂಟೌಟ್‌ನಲ್ಲಿ ಭಾರತ 1-3 ಗೋಲುಗಳಿಂದ ಸೋತಿತ್ತು. ಹರ್ಮನ್‌ಪ್ರೀತ್‌ ಅಭಿಷೇಕ್‌ ಮತ್ತು ಮೊಹಮ್ಮದ್‌ ರಹೀಲ್‌ ಗೋಲು ದಾಖಲಿಸಲು ವಿಫ‌ಲರಾದರೆ ಆದಿತ್ಯ ಮಾತ್ರ ಗೋಲು ಹೊಡೆದಿದ್ದರು.

ಪಂದ್ಯದ ವೇಳೆ ಎರಡು ಬಾರಿ ಚೆಂಡನ್ನು ರಕ್ಷಣೆ ಮಾಡಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗೋಲ್‌ಕೀಪರ್‌ ಬಹದೂರ್‌ ಪಾಠಕ್‌ ಅವರು ಶೂಟೌಟ್‌ನಲ್ಲಿ ಜರ್ಮನಿಯ ಗೋಲು ಹೊಡೆಯುವ ಪ್ರಯತ್ನವನ್ನು ತಡೆಯಲು ಪೂರ್ಣ ವಿಫ‌ಲರಾದರು.

Advertisement

Udayavani is now on Telegram. Click here to join our channel and stay updated with the latest news.

Next