Advertisement

ಹಾಕಿ ಪದಕ: ಶ್ರೀಜೇಶ್‌ ವಿಶ್ವಾಸ

06:56 AM Jul 18, 2020 | mahesh |

ಹೊಸದಿಲ್ಲಿ: ಇತ್ತೀಚೆಗೆ ಬಹಳಷ್ಟು ಸುಧಾರಣೆ ಕಂಡಿರುವ ಭಾರತೀಯ ಹಾಕಿ ತಂಡ ಟೋಕಿಯೊದಲ್ಲಿ ಒಲಿಂಪಿಕ್ಸ್‌ ಪದಕದ ಬರವನ್ನು ನೀಗಿಸಿಕೊಳ್ಳಲಿದೆ ಎಂಬುದಾಗಿ ಗೋಲ್‌ಕೀಪರ್‌ ಪಿ.ಆರ್‌. ಶ್ರೀಜೇಶ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

“ಈ ವರ್ಷದ ಪ್ರೊ ಲೀಗ್‌ ಪಂದ್ಯ ಗಳಲ್ಲಿ ತಂಡದ ಸಾಮರ್ಥ್ಯ ಏನೆಂ ಬುದು ಅರಿವಿಗೆ ಬಂದಿದೆ. ನಾವು ಯಾವುದೇ ಎದುರಾಳಿಯನ್ನು ಮಣಿ ಸಬಲ್ಲೆವು; ಅಷ್ಟೇ ಅಲ್ಲ, ನಮ್ಮದೇ ಶೈಲಿಯ ಆಟದ ಮೂಲಕ ಪ್ರಭುತ್ವ ವನ್ನೂ ಸಾಧಿಸಬಲ್ಲೆವು’ ಎಂಬುದಾಗಿ ಶ್ರೀಜೇಶ್‌ ಹೇಳಿದರು.

“ನಮ್ಮವರ ತಯಾರಿಗೆ ಇನ್ನೂ ಒಂದು ವರ್ಷ ಅವಕಾಶ ಸಿಕ್ಕಿದೆ. ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಿದರೆ ಇದು ಖಂಡಿತ ಸಾಧ್ಯವಿದೆ’ ಎಂಬುದಾಗಿ ಹಿಂದಿನೆರಡು ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ, 32 ವರ್ಷದ ಅನುಭವಿ ಹೇಳಿದರು. 2016ರ ರಿಯೋ ಕೂಟದ ವೇಳೆ ಶ್ರೀಜೇಶ್‌ ಭಾರತದ ನಾಯಕರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next