ಹೊಸದಿಲ್ಲಿ: ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್ ವಿರುದ್ಧ ನಡೆಯ ಲಿರುವ 2021-22ನೇ ಸಾಲಿನ ಕೊನೆಯ ಸುತ್ತಿನ ಎಫ್ಐಎಚ್ ಪ್ರೊ ಲೀಗ್ ಹಾಕಿ ಪಂದ್ಯಾವಳಿಯಲ್ಲಿ ಡಿಫೆಂಡರ್ ಅಮಿತ್ ರೋಹಿದಾಸ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಡ್ರ್ಯಾಗ್‌ಫ್ಲಿಕರ್ ಹರ್ಮನ್‌ಪ್ರೀತ್ ಸಿಂಗ್ ಉಪನಾಯಕರಾಗಿದ್ದಾರೆ.
ವಿಶ್ವದ ನಂ.2 ತಂಡವಾದ ಬೆಲ್ಜಿಯಂ ವಿರುದ್ಧ ಭಾರತ ಜೂನ್ 11 ಮತ್ತು 12ರಂದು ಆಡಲಿದೆ. ಆಂಟೆÌರ್ಪ್‌ನಲ್ಲಿ ಈ ಪಂದ್ಯಗಳು ನಡೆಯಲಿವೆ. ನೆದರ್ಲೆಂಡ್ಸ್ ಎದುರಿನ ಮುಖಾಮುಖೀ ಜೂ. 18 ಮತ್ತು 19ರಂದು ರೋಟರ್‌ಡ್ಯಾಮ್‌ನಲ್ಲಿ ನಡೆಯಲಿದೆ.
ಈ ಪಂದ್ಯಾವಳಿಯಲ್ಲಿ ಭಾರತ 12 ಪಂದ್ಯಗಳಿಂದ 27 ಅಂಕ ಸಂಪಾದಿ ಸಿದ್ದು, ಅಗ್ರಸ್ಥಾನ ಅಲಂಕರಿಸಿದೆ. ಆರ್ಜೆಂಟೀನಾ ದ್ವಿತೀಯ ಸ್ಥಾನಿ ಯಾಗಿದೆ (24 ಅಂಕ).
ಭಾರತ ಹಾಕಿ ತಂಡ :
ಗೋಲ್ ಕೀಪರ್: ಸೂರಜ್ ಕರ್ಕೇರ, ಪಿ.ಆರ್. ಶ್ರೀಜೇಶ್. ಡಿಫೆಂಡರ್: ಸುರೇಂದರ್ ಕುಮಾರ್, ಹರ್ಮನ್‌ಪ್ರೀತ್ ಸಿಂಗ್, ವರುಣ್ ಕುಮಾರ್, ಅಮಿತ್ ರೋಹಿದಾಸ್, ಜುಗ್ರಾಜ್ ಸಿಂಗ್, ಜರ್ಮನ್‌ಪ್ರೀತ್ ಸಿಂಗ್. ಮಿಡ್ ಫೀಲ್ಡರ್: ಮನ್‌ಪ್ರೀತ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಆಕಾಶ್ ದೀಪ್ ಸಿಂಗ್, ನೀಲಕಂಠ ಶರ್ಮ.
ಫಾರ್ವರ್ಡ್ಸ್: ಗುರ್ಜಂತ್ ಸಿಂಗ್, ಮನ್‌ದೀಪ್ ಸಿಂಗ್, ಶೈಲೇಂದ್ರ ಲಾಕ್ರಾ, ಸುಖಜೀತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಅಭಿಷೇಕ್.