Advertisement
ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ನೂತನ ಸಾರಿಗೆ ಸಚಿವ ಎಚ್.ಎಂ.ರೇವಣ್ಣಅವರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರೇವಣ್ಣ ಅವರು ಕುರುಬ ಸಮುದಾಯಕ್ಕೆ ಸೀಮಿತವಲ್ಲ. ಎಲ್ಲ ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಹೊಂದಿರುವ ನಾಯಕ. ಅವರು ಈ ಹಿಂದೆಯೇ ಸಚಿವ ಸಂಪುಟ ದರ್ಜೆ ಸಚಿವರಾಗಬೇಕಿತ್ತು. ಆದರೆ, ಅವರು ವಂಚಿತರಾದರು. ಆಗ ನನಗೂ ಬೇಸರವಾಗಿತ್ತು ಎಂದರು.
ಸ್ಥಾನಮಾನ ಸಿಗುವಲ್ಲಿ ತಡವಾಗುತ್ತದೆ. ರೇವಣ್ಣ ಅವರು ತಡವಾಗಿಯಾದರೂ ಸಚಿವರಾಗಿರುವುದು ಸಂತಸ ತಂದಿದೆ.
ಹಿಂದುಳಿದ ಜನಾಂಗದ ಪ್ರಗತಿಗೆ ಅವರು ಶ್ರಮಿಸಲಿ ಎಂದು ಹೇಳಿದರು. ಒಕ್ಕೂಟದ ಅಧ್ಯಕ್ಷ ಡಾ.ಬಿ.ಕೆ.ರವಿ, ಡಿ.ದೇವರಾಜ ಅರಸು ಶತಮಾನೋತ್ಸವ ಸಮಿತಿ ಉಪಾಧ್ಯಕ್ಷ ಕೆ.ಎಂ.ನಾಗರಾಜ…, ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ದಲಿತ ಕವಿ ಸಿದ್ದಲಿಂಗಯ್ಯ, ಒಕ್ಕೂಟದ ಕಾರ್ಯಾಧ್ಯಕ್ಷ ಸುರೇಶ್ ಮಹಾಲಿಂಗಪ್ಪ ಲಾತೂರ ಉಪಸ್ಥಿತರಿದ್ದರು.