ಶುಕ್ರವಾರ ಚುನಾವಣೆ ನಡೆಯಿತು. ಬಿರು ಬಿಸಿಲಿನ ನಡುವೆ ಉತ್ಸಾಹದಿಂದ ಮತದಾನ ನಡೆಯಿತು. ಒಟ್ಟಾರೆ ಶೇ.93.15
ರಷ್ಟು ಮತದಾನವಾಗಿದೆ. 1551 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
Advertisement
ಹಾಲಿ ಅಧ್ಯಕ್ಷರೂ ಆದ ಬಸವರಾಜ ಭೀಮಳ್ಳಿ, ಉದ್ಯಮಿ ಡಾ| ಭೀಮಾಶಂಕರ ಬಿಲಗುಂದಿ ಮಧ್ಯೆ ಸಮರ ನಡೆದಿದ್ದು, ಉಪಾಧ್ಯಕ್ಷಹಾಗೂ 13 ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕಾಗಿ 30 ಅಭ್ಯರ್ಥಿಗಳ ಹಣೆಬರಹ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.
ಇಂಜಿನಿಯರಿಂಗ್ ಕಾಲೇಜಿನಲ್ಲಿ ಐದು ಮತಗಟ್ಟೆ ಸೇರಿದಂತೆ ಒಟ್ಟು ಏಳು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಭೀಮಳ್ಳಿ ಪೆನಲ್: ಬಸವರಾಜ ಭೀಮಳ್ಳಿ (ಅಧ್ಯಕ್ಷ), ಡಾ| ಸೂರ್ಯಕಾಂತ ಪಾಟೀಲ (ಉಪಾಧ್ಯಕ್ಷ), ಆರ್.ಎಸ್.ಹೊಸಗೌಡ,
ಡಾ| ಶರದ್ ರಾಂಪುರೆ, ಜಿ.ಡಿ.ಅಣಕಲ್, ಶಿವರಾಜ ನಿಗ್ಗುಡಗಿ, ಎನ್.ಡಿ. ಪಾಟೀಲ, ಡಾ| ಎಸ್.ಎನ್.ಪಾಟೀಲ, ಉದಯಕುಮಾರ
ಚಿಂಚೋಳಿ, ಅರುಣಕುಮಾರ, ಎಂ.ವೈ. ಪಾಟೀಲ, ಡಾ| ಶರಣಬಸಪ್ಪ ಕಾಮರೆಡ್ಡಿ, ಚಂದ್ರಶೇಖರ ಹಿರೇಮಠ, ವೆಂಕಟೇಶ ಸಾರಡಾ, ಡಾ| ಬಸವರಾಜ ಜಿ.ಪಾಟೀಲ, ಎಂ.ವೀರಣಗೌಡ ಆಡಳಿತ ಮಂಡಳಿ ಸದಸ್ಯ ಸ್ಥಾನಗಳಿಗೆ ಸ್ಪರ್ಧೆಯಲ್ಲಿದ್ದಾರೆ.
Related Articles
Advertisement
ವ್ಯಾಪಕ ಬಂದೋಬಸ್ತ್: ಚುನಾವಣೆ ಹಿನ್ನೆಲೆಯಲ್ಲಿ ಸಂಸ್ಥೆಯ ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಕಾಲೇಜಿನ ಮುಖ್ಯದ್ವಾರದಲ್ಲಿ ಅನಗತ್ಯವಾಗಿ ಯಾರನ್ನೂ ಒಳಬಿಡಲಿಲ್ಲ. ಅಂಗವಿಕಲರು, ಅನಾರೋಗ್ಯಕ್ಕೆ ಒಳಗಾದವರಿಗೆ ವಾಹನದ ಮೂಲಕ ಒಳಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಕಾಲೇಜು ಎದುರಿನಲ್ಲಿ ಟೆಂಟ್ ವ್ಯವಸ್ಥೆ ಮಾಡಲಾಗಿತ್ತು. ಖಡಕ್ ಬಿಸಿಲು ಇದ್ದುದರಿಂದ ಜನ ಟೆಂಟ್ ಆಶ್ರಯ ಪಡೆದರು. ಬಿಸಿಲಿನ ನಡುವೆ ಸ್ಪರ್ಧಾ ಅಭ್ಯರ್ಥಿಗಳು ಮತಯಾಚಿಸುತ್ತಿರುವುದು ಹಾಗೂ ಬಿಸಿಲಿನ ನಡುವೆ ಮತದಾರರು ಉತ್ಸುಕತೆಯಿಂದ ಮತ ಚಲಾಯಿಸುತ್ತಿರುವುದು ಕಂಡು ಬಂತು.
ಶಾಂತಿಯುತ ಮತದಾನ: ಚುನಾವಣೆಯು ಅತ್ಯಂತ ಶಾಂತಿಯುತವಾಗಿ ನಡೆದಿದೆ. ಸೂಕ್ತ ಮತದಾನಕ್ಕೆ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿತ್ತಲ್ಲದೇ ಎಲ್ಲರೂ ಸಹಕರಿಸಿದ್ದಾರೆ ಎಂದು ಚುನಾವಣಾಧಿಕಾರಿ ಡಾ| ಪಿ.ಎಸ್.ಶಂಕರ ತಿಳಿಸಿದ್ದಾರೆ.
ಎಣಿಕೆಗೆ ಸಿದ್ಧತೆಮಾರ್ಚ್ 24ರಂದು ಬೆಳಗ್ಗೆ 8 ಗಂಟೆಯಿಂದ ಪಿಡಿಎ ಇಂಜಿನಿಯರಿಂಗ್ ಕಾಲೇಜ್‌ನ ಗ್ರಂಥಾಲಯ ಕಟ್ಟಡದಲ್ಲಿ ನಡೆಯಲಿದೆ. ಸಂಜೆ ಹೊತ್ತಿನ ನಂತರ ಮೊದಲು ಆಡಳಿತ ಮಂಡಳಿ ಸದಸ್ಯರ ಹಾಗೂ ತದನಂತರ ಅಧ್ಯಕ್ಷ-ಉಪಾಧ್ಯಕ್ಷರ ಫಲಿತಾಂಶ ಹೊರ ಬರಲಿದೆ.