Advertisement

ಶಾಂತಿಗಾಗಿ ಬೇಕು ಧರ್ಮ: ಖರ್ಗೆ

11:37 AM Jan 19, 2018 | Team Udayavani |

ವಾಡಿ: ಶಾಂತಿ, ನೆಮ್ಮದಿಗಾಗಿ ಹಂಬಲಿಸಿ ಜನರು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಆದರೆ ಇತ್ತೀಚೆಗೆ ಧರ್ಮಗಳ ಹೆಸರಿನಲ್ಲಿ ಜನರನ್ನು ಒಡೆದು ಅಶಾಂತಿ ಮೂಡಿಸುವ ಷಡ್ಯಂತ್ರಗಳು ನಡೆಯುತ್ತಿವೆ. ಮನಃಶಾಂತಿಗಾಗಿ ಧರ್ಮ ಬೇಕೇ ವಿನಃ ಸಂಘರ್ಷಕ್ಕಲ್ಲ ಎಂದು ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Advertisement

ನಾಲವಾರ ಮಠದಲ್ಲಿ ಶ್ರೀಕೋರಿಸಿದ್ಧೇಶ್ವರ ಜಾತ್ರೆ ನಿಮಿತ್ತ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ
ಅವರು ಮಾತನಾಡಿದರು. ಪ್ರತಿಯೊಬ್ಬರಿಗೂ ಶಾಂತಿ ಬೇಕು. ನಮ್ಮಲ್ಲಿ ಹಣ ಮತ್ತು ವಿದ್ಯಾಬಲ ಇದ್ದರೂ ಶಾಂತಿ ಪಡೆಯಲು ಸಾಧ್ಯವಿಲ್ಲ. ಶಾಂತಿ ಸಹಜವಾಗಿಯೆ ಪಡೆಯುವ ವಸ್ತುವಾಗಿದೆ. ಯಾವ ಸ್ಥಳದಲ್ಲಿ ನಮಗೆ ನೆಮ್ಮದಿ ಸಿಗುತ್ತದೋ ಅಂತಹ ಸ್ಥಳಕ್ಕೆ ನಾವು ಪದೇ ಪದೇ ಹೋಗುತ್ತೇವೆ. ಅಂಥಹ ಸ್ಥಳ ನಾಲವಾರ ಮಠವಾಗಿದ್ದು,
ಭಕ್ತರು ಇಲ್ಲಿ ಪ್ರತಿ ವರ್ಷ ಹೆಚ್ಚುಹೆಚ್ಚು ಬರುವುದನ್ನು ಗಮನಿಸಿದರೆ, ಬಹುಷ್ಯ ಜೀವನದಲ್ಲಿ ಅವರಿಗೆ ಶಾಂತಿ ಹಾಗೂ
ನೆಮ್ಮದಿ ಸಿಗುತ್ತಿರಬಹುದು ಎಂದು ಹೇಳಿದರು.

ಧರ್ಮದ ಹೆಸರಿನಲ್ಲಿ ಗೊಂದಲ ಮೂಡಿಸಲಾಗುತ್ತಿದೆ. ಇಂಥ ಗೊಂದಲಕಾರಿ ವಾತಾವಣರದಲ್ಲಿ ದೇಶದ ಜನರು ಒಂದಾಗಿ ಇರಲು ಸಾಧ್ಯವಿಲ್ಲ. ಜಾತಿ ಮತ ಮರೆತು ನಾವೆಲ್ಲ ಒಂದು ಎಂದು ತಿಳಿದಾಗ ಮಾತ್ರ ದೇಶದಲ್ಲಿ ಒಗ್ಗಟ್ಟು ಮೂಡಲು ಸಾಧ್ಯವಾಗುತ್ತದೆ. ರೈತರ ಬೆಳೆಗೆ ಸೂಕ್ತ ಬೆಲೆ ಸಿಗಬೇಕು. ಈ ಬಗ್ಗೆ ನಾನು ಸಂಸತ್‌ನಲ್ಲಿ ವಿಷಯ ಪ್ರಾಸ್ತಾವಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಡಾ| ಸಿದ್ದ ತೋಟೇಂದ್ರ ಸ್ವಾಮೀಜಿ, ಶ್ರೀ ಸಿದ್ದಲಿಂಗ ದೇವರು, ಚನ್ನರುದ್ರಮುನಿ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ವೀರಣ್ಣಗೌಡ ಪರಸರೆಡ್ಡಿ, ಭಾಗಣ್ಣಗೌಡ ಸಂಕನೂರ, ತಿಪ್ಪಣ್ಣಪ್ಪ ಕಮಕನೂರ, ಅಲ್ಲಮಪ್ರಭು ಪಾಟೀಲ, ಕಲಬುರಗಿ ಮಹಾಪೌರ ಶರಣು ಮೋದಿ, ಹೈ.ಕ.ಶಿ. ಸಂಸ್ಥೆ ಅಧ್ಯಕ್ಷ ಬಸವರಾಜ ಭೀಮನಳ್ಳಿ, ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಭೀಮಣ್ಣ ಸಾಲಿ, ಶಿವರಾಜ ಶಾಸ್ತ್ರಿ ರಾಂಪುರ, ಆಂಧ್ರದ ಮಾಜಿ ಸಚಿವ ಚಂದ್ರಶೇಖರರಾವ, ಮಾಪಣ್ಣ ಗಂಜಗೇರಿ, ಕರವೇ ಮುಖಂಡ ಸೋಮನಾಥ ಕಟ್ಟಿಮನಿ, ಡಾ|ಚಂದ್ರಶೇಖರ ಪಾಟೀಲ, ಉದಯಶೆಟ್ಟಿ, ರಾಜು ಭೀಮನಳ್ಳಿ ಪಾಲ್ಗೊಂಡಿದ್ದರು. ಶರಣಕುಮಾರ ಜಾಲಹಳ್ಳಿ ಪ್ರಾರ್ಥಿಸಿದರು. ಯೋಗಾನಂದ ಮಳ್ಳಿಮಠ ಸ್ವಾಗತಿಸಿದರು. ನವಲಿಂಗ ಪಾಟೀಲ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next