ಕಲಬುರಗಿ: ಭಾರತವನ್ನು ವಿಶ್ವದಲ್ಲಿ ಕೈಗಾರಿಕೆ, ಆರ್ಥಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಮರ್ಥ ರಾಷ್ಟ್ರವನ್ನಾಗಿ ಮಾಡುವಲ್ಲಿ ಯುವ ಇಂಜಿನಿಯರ್‌ಗಳ ಪಾತ್ರ ಮುಖ್ಯವಾಗಿದೆ ಎಂದು ಕೇಂದ್ರಿಯ ವಿವಿ ಉಪಕುಲಪತಿ ಪ್ರೊ| ಎಚ್.ಎಂ. ಮಹೇಶ್ವರಯ್ಯ ಹೇಳಿದರು.
ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ 2018-19ನೇ ಸಾಲಿನ ಪ್ರಥಮ ವರ್ಷದ ಹೊಸ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿರುವ ಟೆಕ್ವಿಪ್ ಪ್ರಾಯೋಜಿತ ಮೂರು ವಾರಗಳ ಇಂಡಕ್ಷನ್ ಪ್ರೋಗ್ರಾಂ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರಕ್ಕೆ ಆಸ್ತಿಯಾಗಬಲ್ಲ ಇಂಜಿನಿಯರ್ ಆಗಬೇಕಾದರೆ, ಪರಿಶ್ರಮ, ಸತತ ಓದು, ಜ್ಞಾನ ಸಂಪಾದನೆ, ಅಗತ್ಯ. ರಾಜ್ಯದ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಮುಖ್ಯ ಕೊಡುಗೆ ಕೊಟ್ಟ ಸಂಸ್ಥೆಗಳಲ್ಲಿ ಹೈ.ಕ. ಶಿಕ್ಷಣ ಸಂಸ್ಥೆಯೂ ಒಂದು. ಇದರಲ್ಲಿ ಪಿಡಿಎ ತಾಂತ್ರಿಕ ಕಾಲೇಜು ಮುಂಚೂಣಿಯಲ್ಲಿದೆ ಎಂದರು.
ಹೈ.ಕ.ಶಿ. ಸಂಸ್ಥೆ ಅಧ್ಯಕ್ಷ ಡಾ| ಭೀಮಾಶಂಕರ ಬಿಲಗುಂದಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಉಪಾಧ್ಯಕ್ಷ ಡಾ| ಶಿವಾನಂದ ದೇವರಮನಿ, ಕಾರ್ಯದರ್ಶಿ ಡಾ| ನಾಗೇಂದ್ರ ಮಂಠಾಳೆ, ಆಡಳಿತ ಮಂಡಳಿ ಸದಸ್ಯರಾದ ಡಾ| ಸಂಪತ್‌ಕುಮಾರ ಲೋಯಾ, ಸತೀಶ ಚಂದ್ರ ಹಡಗಲಿಮಠ, ಪ್ರಾಚಾರ್ಯ ಡಾ| ಎಸ್.ಎಸ್. ಆವಂತಿ, ಡಾ| ಸಿದ್ರಾಮ ಆರ್. ಪಾಟೀಲ, ಡಾ| ಎ.ಬಿ. ಹರವಾಳಕರ, ಪ್ರೊ| ರವಿಂದ್ರ ಎಂ. ಲಠೆ, ಟೆಕ್ವಿಪ್ ಸಂಯೋಜಕರಾದ ಡಾ| ಸಿ.ಎಚ್. ಬಿರಾದಾರ, ಕಾರ್ಯಕ್ರಮದ ಸಂಯೋಜಕರಾದ ಪ್ರೊ| ಮಹೇಶ ಅಲ್ಲದ,
ಶರಣಗೌಡ ಪಾಟೀಲ, ಡಾ| ನಾಗಭೂಷಣ ಪಾಟೀಲ ಭಾಗವಹಿಸಿದ್ದರು. ಡಾ| ಓ.ಡಿ. ಹೆಬ್ಟಾಳ, ಡಾ| ಎಸ್.ಆರ್. ಹೊಟ್ಟಿ, ಪ್ರೊ| ಪವನ ರಂಗದಾಳ, ಡಾ| ಬಾಬುರಾವ ಶೇರಿಕಾರ ಹಾಗೂ ಕಾಲೇಜಿಗೆ ಪ್ರವೇಶ ಪಡೆದ 800 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಭಾಗವಹಿಸಿದ್ದರು.