Advertisement

Navarathiri: ಉಚ್ಚಿಲ ದಸರಾ: ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

01:25 AM Oct 05, 2024 | Team Udayavani |

ಕಾಪು: ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ  ದೇವಸ್ಥಾನದಲ್ಲಿ 3ನೇ ವರ್ಷದ ಉಡುಪಿ ಉಚ್ಚಿಲ ದಸರಾ – 2024 ಪ್ರಯುಕ್ತ 10 ದಿನಗಳ ಕಾಲ ಹಮ್ಮಿಕೊಂಡಿರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಡಾ| ಜಿ. ಶಂಕರ್‌ ಅ. 3ರಂದು ಉದ್ಘಾಟಿಸಿದರು.

Advertisement

ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸುವರ್ಣ, ಉಚ್ಚಿಲ ದಸರಾ ಸಮಿತಿ ಅಧ್ಯಕ್ಷ ವಿನಯ್‌ ಕರ್ಕೇರ, ದ.ಕ. ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷ ಮೋಹನ್‌ ಬೇಂಗ್ರೆ, ಪ್ರಧಾನ ಕಾರ್ಯದರ್ಶಿ ಶರಣ್‌ ಕುಮಾರ್‌ ಮಟ್ಟು, ಜೀರ್ಣೋದ್ಧಾರ ಸಮಿತಿ ಮಾಜಿ ಅಧ್ಯಕ್ಷ ಗುಂಡು ಬಿ. ಅಮೀನ್‌, ಮಹಿಳಾ ಮಹಾಜನ ಸಂಘದ ಅಧ್ಯಕ್ಷೆ ಉಷಾ ರಾಣಿ, ನಾಲ್ಕು ಪಟ್ಣ ಮೊಗವೀರ ಮಹಿಳಾ ಸಭಾದ ಅಧ್ಯಕ್ಷೆ ಸುಗುಣ ಕರ್ಕೇರ, ಪ್ರಮುಖರಾದ ಸರ್ವೋತ್ತಮ ಕುಂದರ್‌, ದಿನೇಶ್‌ ಎರ್ಮಾಳು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ಸತೀಶ್‌ ಅಮೀನ್‌ ಪಡುಕೆರೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ
ಅ. 5ರಂದು ಬೆಳಗ್ಗೆ ಚಂಡಿಕಾ ಹೋಮ, ಶಾರದೆ ಮತ್ತು ನವದುರ್ಗೆಯರಿಗೆ ಮಂಗಳಾರತಿ, ಬೆಳಗ್ಗೆ 10.30ರಿಂದ ಮಕ್ಕಳಿಗಾಗಿ ಶ್ರೀ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ (ವಯೋಮಿತಿ : 3ರಿಂದ 9 ವರ್ಷ), ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಭಜನೆ, ಮಧ್ಯಾಹ್ನ 2ರಿಂದ ಚಿತ್ರಕಲಾ ಸ್ಪರ್ಧೆ, ಸಂಜೆ 5 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ, ಸಂಜೆ 5.45ರಿಂದ 6.15ರ ತನಕ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ಸಂಜೆ 6.15ರಿಂದ 7.30ರ ತನಕ ಸಾಮೂಹಿಕ ಕುಣಿತ ಭಜನೆ, ರಾತ್ರಿ 7.30ರಿಂದ ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಇದರ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8.30ರಿಂದ ಬೆಂಗಳೂರು ಎಂ. ಎಸ್‌. ನಾಟ್ಯ ಕ್ಷೇತ್ರದ ಗುರು ಕೌಸಲ್ಯಾ ಶ್ರೀನಿವಾಸ್‌ ಮತ್ತು ಬಳಗದಿಂದ ಶ್ರೀ ರಾಮ ಹನುಮಂತ ನೃತ್ಯ ರೂಪಕ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next