Advertisement
ಆ್ಯತ್ಲೀಟ್ಸ್ ಆಯೋಗ, ಕಾಂಟಿನೆಂಟಲ್ ಸಂಸ್ಥೆಗಳ ಅಧ್ಯಕ್ಷರು ಮತ್ತು ಕೌನ್ಸಿಲ್‌ನ ಸಲಹೆ ಪಡೆದ ಬಳಿಕ ವಿಶ್ವ ಆ್ಯತ್ಲೆಟಿಕ್ಸ್ ಎ.6ರಿಂದ ನ. 30ರ ನಡುವಣ ಅವಧಿಯನ್ನು ಅಮಾನತುಗೊಳಿಸಲು ನಿರ್ಧರಿಸಿದೆ. ಈ ಅವಧಿಯ ನಡುವೆ ಜರಗುವ ಯಾವುದೇ ಸ್ಪರ್ಧೆಗಳ ಫಲಿತಾಂಶವನ್ನು ಟೋಕಿಯೊ ಒಲಿಂಪಿಕ್ಸ್‌ನ ಪ್ರವೇಶ ಗುಣಮಟ್ಟ ಅಥವಾ ವಿಶ್ವ ರ್‍ಯಾಂಕಿಂಗಿಗೆ ಪರಿಗಣಿಸುವಂತಿಲ್ಲ ಮತ್ತು ಈ ಸಂಬಂಧ ಯಾವುದೇ ಪ್ರಕಟನೆಯನ್ನು ಕೂಡ ಹೊರಡಿಸುವಂತಿಲ್ಲ.
ಇದೇ ವೇಳೆ 2021ರ ಒಲಿಂಪಿಕ್ಸ್‌ಗೆ ಈಗಾಗಲೇ ಅರ್ಹತೆ ಗಳಿಸಿದ ಸುಮಾರು 6,500 ಆ್ಯತ್ಲೀಟ್‌ಗಳು ಇಂಟರ್‌ನ್ಯಾಶನಲ್ ಒಲಿಂಪಿಕ್ ಸಮಿತಿ (ಐಒಸಿ) ಪುನರ್ ಪ್ರಕಟಿಸಿದ ಅರ್ಹತಾ ನಿಯಮಗಳ ಅಡಿಯಲ್ಲಿ ಇದ್ದಾರೆ. ಇನ್ನುಳಿದವರು ಗೇಮ್ಸ್‌ಗೆ ಹೇಗೆ ಅರ್ಹತೆ ಗಳಿಸಬೇಕೆಂಬ ಮಾರ್ಗಸೂಚಿಯನ್ನು ಇದೀಗ ಐಒಸಿ ಪ್ರಕಟಿಸಿದೆ. 2021ರ ಜೂ. 29 ಅರ್ಹತೆ ಗಳಿಸಲು ಕೊನೆಯ ದಿನವೆಂದು ತಿಳಿಸಿದೆ. ಟೋಕಿಯೊ ಒಲಿಂಪಿಕ್ಸ್ 2021ರ ಜುಲೈ 23ರಂದು ಆರಂಭವಾಗಿ ಆ. 8ರಂದು ಅಂತ್ಯಗೊಳ್ಳಲಿದೆ.