Advertisement

ಗಾಂಧಿ ಗ್ರಾಮ ಪುರಸ್ಕಾರಕ್ಕೆ ಹಿಟ್ನೆ ಹೆಬ್ಟಾಗಿಲು ಗ್ರಾಪಂ ಆಯ್ಕೆ

04:18 PM Sep 22, 2021 | Team Udayavani |

ಪಿರಿಯಾಪಟ್ಟಣ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿವರ್ಷ ರೂಪಿಸಿರುವ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿ ಗ್ರಾಮಗಳನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಗ್ರಾಮ ಪಂಚಾಯಿತಿಗಳಿಗೆ ನೀಡುವ ಗ್ರಾಂಧಿ ಗ್ರಾಮ ಪುರಸ್ಕಾರಕ್ಕೆ 2020-21ನೇ ಸಾಲಿನಲ್ಲಿ ತಾಲೂಕಿನ ಹಿಟ್ನೆ ಹೆಬ್ಟಾ ಗಿಲು ಗ್ರಾಮ ಪಂಚಾಯಿತಿ ಭಾಜನವಾಗಿದೆ.

Advertisement

ಮೈಸೂರು ಜಿಲ್ಲೆಯಲ್ಲಿ ತಾಲೂಕಿಗೆ ಒಂದ ರಂತೆ 2020-21ನೇ ಸಾಲಿನಲ್ಲಿ 8 ಪಂಚಾಯಿತಿ ಗಳನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾ ಗಿದ್ದು, ಇದರಲ್ಲಿ ಪಿರಿಯಾಪಟ್ಟಣ ತಾಲೂಕಿ ನಿಂದ ಹಿಟ್ನೆ ಹೆಬ್ಟಾ ಗಿಲು ಗ್ರಾಪಂ ಆಯ್ಕೆಯಾಗಿದೆ. ತಾಲೂಕಿನಲ್ಲೇ ಅತೀ ದೊಡ್ಡ ಹಾಗೂ ಹೆಚ್ಚು ಜನಸಂಖ್ಯೆ ಹೊಂದಿ ರುವ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಿಕ್ಲೃಹೆಬ್ಟಾಗಿಲು ಪಂಚಾಯಿತಿ ವ್ಯಾಪ್ತಿಗೆ ಹಿಟ್ನೆ ಹೆಬ್ಟಾಗಿಲು, ಅವರೆ ಕಾಯಿಗುಡ್ಡ ಕಾವಲ್‌, ಹಿಟ್ನ ಹಳ್ಳಿ, ಬಿಲ್ಲ ಹಳ್ಳಿ, ಆಯತನಹಳ್ಳಿ, ಸೀಗೂರು ಸೇರಿದೆ. ಹಿಟ್ನೆ ಹೆಬ್ಟಾ ಗಿಲು ವಿಸ್ತೀರ್ಣ ಮತ್ತು ಜನಸಂಖ್ಯೆಯಲ್ಲಿ ಬಹು ದೊಡ್ಡ ಗ್ರಾಮವಾಗಿದ್ದು, 9 ಸದಸ್ಯರನ್ನು ಹೊಂದಿದೆ.

ಈ ಗ್ರಾಪಂನಲ್ಲಿ 18 ಸದಸ್ಯರು, 6,169 ಕುಟುಂಬ, ಒಟ್ಟು 10 ಸಾವಿರ ಜನಸಂಖ್ಯೆ ಹೊಂದಿದೆ. ಸರ್ಕಾರದ ಅನುದಾನ ಬಳಸಿ, ಗ್ರಾಮಗಳಿಗೆ ಅಗತ್ಯ ಸೌಕರ್ಯ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉದ್ಯಾನ, ಕಾಂಪೌಂಡ್‌, ಶೌಚಾಲಯ, ಶುದ್ಧ ನೀರಿನ ವ್ಯವಸ್ಥೆ, ಹೊಗೆಮುಕ್ತ ಗ್ರಾಮ, ಸಿಸಿ ರಸ್ತೆ, ನಮ್ಮ ಗ್ರಾಮ ನಮ್ಮ ರಸ್ತೆ ನಿರ್ಮಾಣ, ಗ್ರಂಥಾಲಯ ಸೇವೆ ಕಲ್ಪಿಸಲಾಗಿದೆ. ಹೀಗೆ ಹಲವಾರು ಯೋಜನೆ ಬಳಸಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿರುವುದರಿಂದ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ.

ಇದನ್ನೂ ಓದಿ:IPL : ಹೈದ್ರಾಬಾದ್ ಆಟಗಾರನಿಗೆ ಕೋವಿಡ್ ದೃಢ : 6 ಮಂದಿ ಐಸೋಲೇಶನ್

ಪುರಸ್ಕಾರ ಪ್ರದಾನ: 2020-21ನೇ ಸಾಲಿನ ಗಾಂಧಿ ಪುರಸ್ಕಾರ ಗ್ರಾಮವನ್ನಾಗಿ ಹಿಟ್ನೆ ಹೆಬ್ಟಾ ಗಿಲು  ಆಯ್ಕೆಯಾಗಿದ್ದು, ಅ.2ರಂದು ಗಾಂಧಿ ಜಯಂತಿ ದಿನ ದಂದು ಬೆಂಗಳೂರಿನ ಅರ ಮನೆ ಮೈದಾನದಲ್ಲಿ ಗ್ರಾಪಂ ಅಧ್ಯಕ್ಷರು, ಪಿಡಿಒ, ತಾಪಂ ಇಒ ಹಾಗೂ ಸದಸ್ಯರಿಗೆ ಪುರ ಸ್ಕರಿಸಿ 5 ಲಕ್ಷ ರೂ. ನಗದು ಮತ್ತು ಪಾರಿ ತೋಷಕವನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಪ್ರದಾನ ಮಾಡಲಿದ್ದಾರೆ.

Advertisement

14 ಮತ್ತು 15ನೇ ಹಣಕಾಸು ಯೋಜನೆ, ಸ್ಥಳೀಯ ಸಂಪನ್ಮೂಲಗಳ ಕ್ರೋಢೀಕರಣ ಹಾಗೂ ನರೇಗಾ ಕಾರ್ಯಕ್ರಮಗಳನ್ನು ಸದ್ಬಳಕೆ ಮಾಡಿಕೊಳ್ಳಲಾಗಿದೆ. ಜನಪ್ರತಿನಿಧಿಗಳು ಪಾರದರ್ಶಕ ಆಡಳಿತ ನಡೆಸುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಿ ಜನಮನ್ನಣೆಗೆ ಪಾತ್ರ ವಾಗಿರುವ ಕಾರಣ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ.
-ಸಿ.ಆರ್‌ಕೃಷ್ಣಕುಮಾರ್‌, ತಾಪಂ ಇಒ

ಹಿಟ್ನೆ ಹೆಬ್ಟಾ ಗಿಲು ಗ್ರಾಮದಲ್ಲಿ ಹಲವು ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಮೂಲಕ ಹಾಗೂ ಅವರ ಸ್ಪಂದನೆಯಿಂದ ಅಭಿ ವೃದ್ಧಿ ಪಥದತ್ತ ಸಾಗುತ್ತಿದೆ. ಈ ಸಾಲಿನ ಗಾಂಧಿಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗುವ ಮೂಲಕ ತಾಲೂಕಿನ ಇತರೆ ಎಲ್ಲ ಗ್ರಾಪಂಗಳಿಗೆ ಆದರ್ಶವಾಗಿದೆ.
-ಪ್ರಶಾಂತ್‌, ಪಿಡಿಒ ಹಿಟ್ನೆ ಹೆಬ್ಟಾಗಿಲು

ಹಿಟ್ನೆ ಹೆಬ್ಟಾಗಿಲು   ಗ್ರಾಪಂ ವ್ಯಾಪ್ತಿಯ ಜನತೆಯ ಆಶೀರ್ವಾದ ಮತ್ತು ಸಹಕಾರ, ಸದಸ್ಯರ ಸಲಹೆ ಮತ್ತು ಮಾರ್ಗದರ್ಶನ ಹಾಗೂ ಅಧಿಕಾರಿಗಳ ಸಹಕಾರದಿಂದ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. ನಮ್ಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿರುವುದು ಸಂತಸ ತಂದಿದ್ದು, ಇನ್ನೂ ಹೆಚ್ಚಿನ ಅಭಿವೃದ್ಧಿ ಗುರಿ ಹೊಂದಲಾಗಿದೆ.
-ಮೀನಾಕ್ಷಿ , ಬಸವಣ್ಣ, ಗ್ರಾಪಂ ಅಧ್ಯಕ್ಷೆ ಹಿಟ್ನೆ ಹೆಬ್ಟಾ ಗಿಲು

-ಪಿ.ಎನ್‌.ದೇವೇಗೌಡ

 

Advertisement

Udayavani is now on Telegram. Click here to join our channel and stay updated with the latest news.

Next