Advertisement

ಬಂಡೀಮಠ: ಶಿಲಾಶಾಸನ ಪತ್ತೆ

02:30 AM Dec 21, 2018 | Team Udayavani |

ಉಡುಪಿ: ಬಾರಕೂರು ಬಂಡೀಮಠದ ಮಂಜುನಾಥ ಪೂಜಾರಿ ಹಾಗೂ ಕುಶಲ ಶೆಟ್ಟಿ ಅವರ ಗದ್ದೆಯ ದಾರಿಯಲ್ಲಿ ಶಿಲಾಶಾಸನ ಕಂಡು ಬಂದಿದೆ. ಇದರಲ್ಲಿ ಈಶ್ವರ ಲಿಂಗ, ಬಸವ, ಸೂರ್ಯ ಚಂದ್ರ, ಕಾಲು ದೀಪ ಇದೆ. ಸುಮಾರು 2 ಅಡಿ ಅಗಲ, 3 ಅಡಿ ಎತ್ತರವಿದೆ. ಪಕ್ಕದಲ್ಲಿ ರಂಗನಕೆರೆಗೆ ನೀರುಣಿಸುವ ಕೆರೆ ಇದ್ದು (ಬಾವಿ), ಅನತಿ ದೂರದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಶ್ರೀ ಕ್ಷೇತ್ರ ನಾಗರಡಿ ಪಕ್ಕದಲ್ಲಿ ನಾಗಬನ ಇದೆ.  ಶಿಲಾಶಾಸನದಲ್ಲಿ ಹಳೆಗನ್ನಡದ ಬರವಣಿಗೆ ಇದೆ. ದೇವಸ್ಥಾನದ ಒಳಭಾಗದಲ್ಲಿ ಎರಡು ಶಿಲಾಶಾಸನಗಳಿವೆ. ಉನ್ನತಮಟ್ಟದ ಡಿಜಿಟಲೀಕರಣಗೊಳಿಸಿದರೆ ಇನ್ನಷ್ಟು ಹೆಚ್ಚು ಗತಕಾಲದ ವಿಷಯವನ್ನು ತಿಳಿಯಬಹುದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next