ದಿಲ್ಲಿಯಲ್ಲಿ ಶುಕ್ರವಾರ ನಡೆದ ಕಾರ್ಯಕಾರಿಣಿಯಲ್ಲಿ ಈ ಬಗ್ಗೆ ನಿರ್ಣ ಯವನ್ನು ಅಂಗೀಕರಿಸಿರುವ ಕಾಂಗ್ರೆಸ್, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಗಳು ಸಾಂವಿಧಾನಿಕ ಬದ್ಧತೆಯಾ ಗಿದೆ. ಆದರೆ ಚುನಾವಣ ಆಯೋಗದ ಪಕ್ಷಪಾ ತದ ಚಟು ವಟಿಕೆ ಯಿಂದಾಗಿ ಹಲವು ಗಂಭೀ ರ ಪ್ರಶ್ನೆಗಳು ಎದ್ದಿವೆ ಎಂದು ಹೇಳಿದೆ.
Advertisement
ಕಾಂಗ್ರೆಸ್ ನಾಯಕರಾದ ಜೈರಾಂ ರಮೇಶ್, ಕೆ.ಸಿ.ವೇಣುಗೋಪಾಲ್ ಮತ್ತು ಪವನ್ ಖೇರಾ ಜಂಟಿ ಸುದ್ದಿಗೋಷ್ಠಿ ನಡೆಸಿ, ಮೋದಿ ಹಠಮಾರಿ ಧೋರಣೆಯಿಂದಾಗಿ ಸಂಸತ್ತಿನ ಕಲಾಪಗಳು ನಡೆಯುತ್ತಿಲ್ಲ ಎಂದು ಆರೋಪಿಸಿದರು. ಅಲ್ಲದೇ ದೇಶದ ರಾಜಕೀಯ ಪರಿಸ್ಥಿತಿಯನ್ನು ಚರ್ಚಿಸಲಾ ಗಿದ್ದು, ಪಕ್ಷವು ಹಲವು ನಿರ್ಣಯಗಳನ್ನು ಎಐಸಿಸಿ ಅಂಗೀಕರಿಸಿದೆ. ಪಕ್ಷದ ಸಂಘಟನೆ ಹಾಗೂ ಚುನಾವಣಾ ಸೋಲುಗಳ ಕುರಿತು ಚರ್ಚಿಸಲು ಆಂತರಿಕ ಸಮಿತಿಯನ್ನು ರಚಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಹೊಸದಿಲ್ಲಿ: ನಮ್ಮಲ್ಲಿನ ಒಗ್ಗಟ್ಟಿನ ಕೊರತೆ ಪಕ್ಷಕ್ಕೆ ಸಾಕಷ್ಟು ಹಾನಿ ಮಾಡುತ್ತಿವೆ ಎಂದು ಎಐ ಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಯಲ್ಲಿ ಮಾತನಾಡಿ, “ನಾವು ಒಗ್ಗ ಟ್ಟಾಗಿ ಇರದಿ ದ್ದರೆ ಚುನಾವಣೆ ಎದು ರಿಸುವುದು ಕಷ್ಟ. ಪಕ್ಷದ ನಾಯಕರು ಪರಸ್ಪರ ವಿರುದ್ಧ ಹೇಳಿಕೆ ನೀಡು ತ್ತಿದ್ದರೆ ಚುನಾವಣೆ ಜಯಿಸುವುದು ಹೇಗೆ? ನಮ್ಮ ಎದುರಾಳಿಗಳನ್ನು ಮಣಿಸಲು ಹೇಗೆ ಸಾಧ್ಯ’ ಎಂದಿ ದ್ದಾರೆ. ಇವಿಎಂಗಳ ಮೇಲೆ ಅನು ಮಾನ ವ್ಯಕ್ತಪಡಿಸಿ, ಆಯೋ ಗ ಸಂವಿ ಧಾನ ಬದ್ಧ ಸಂಸ್ಥೆ ಅದು ನಿಷ್ಪಕ್ಷಪಾತ ಚುನಾವಣೆ ನಡೆಸಲಿ ಎಂದಿದ್ದಾರೆ.
Related Articles
ಮಹಾರಾಷ್ಟ್ರ ಚುನಾವಣೆಗೆ ಸಂಬಂಧಿಸಿ ದಂತೆ ಅನುಮಾನ ಹೊಂದಿರುವ ಕಾಂಗ್ರೆಸ್ ಚುನಾವಣ ಆಯೋಗಕ್ಕೆ ಮನವಿಯನ್ನು ಸಲ್ಲಿಸಿ ದ್ದು, ಮತ ಚಲಾವಣೆ ಮತ್ತು ಮತ ಎಣಿಕೆ ಪ್ರಕ್ರಿಯೆ ಗೆ ಸಂಬಂಧಿಸಿದಂತೆ ತನ್ನ ಆತಂಕವನ್ನು ಹೊರ ಹಾಕಿದೆ. 12 ಪುಟಗಳ ಮನವಿಯನ್ನು ಆಯೋಗಕ್ಕೆ ಸಲ್ಲಿಸಿರುವ ಕಾಂಗ್ರೆಸ್, ಮುಖಾಮುಖೀ ಸಭೆಗೆ ಆಗ್ರಹಿಸಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಮತ ದಾರ ಪಟ್ಟಿಯಿಂದ ಭಾರೀ ಪ್ರಮಾಣದಲ್ಲಿ ಹೆಸರು ಕಿತ್ತು ಹಾಕಿರುವುದು ಮತ್ತು 10 ಸಾವಿರಕ್ಕೂ ಅಧಿಕ ಮತದಾರರನ್ನು ಸೇರಿಸಿರುವುದು, ಮತದಾನ ಪ್ರಮಾಣದಲ್ಲಿ ಹೆಚ್ಚಳವಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. ಪ್ರತೀ ಕ್ಷೇತ್ರದಲ್ಲೂ ಅಘಾಡಿ ಪರ ಸಹಾನುಭೂತಿ ಹೊಂದಿರುವ ಮತ ದಾರರನ್ನು ಕೈ ಬಿಡಲಾಗಿದೆ ಈ ಬಗ್ಗೆ ತನಿಖೆ ನಡೆಸಿ ಎಂದಿದೆ.
Advertisement