Advertisement

“ಐತಿಹಾಸಿಕ ಮಾಹಿತಿ ಡಿಜಿಟಲೀಕರಣ’

10:06 AM May 03, 2017 | Team Udayavani |

ಬೆಂಗಳೂರು: ರಾಜ್ಯ ಸರ್ಕಾರದ ಪತ್ರಾಗಾರ ಇಲಾಖೆ ಸುಮಾರು 60 ಲಕ್ಷ ಪುಟಗಳ ಐತಿಹಾಸಿಕ ಮಾಹಿತಿಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗಿದ್ದು ಆ ಪೈಕಿ ಮೊದಲ ಹಂತದಲ್ಲಿ ಐದು ಲಕ್ಷ ಪುಟಗಳ ದಾಖಲೆ ಅಂತ
ಜಾìಲದಲ್ಲಿ ವೀಕ್ಷಣೆಗೆ ಲಭ್ಯವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.

Advertisement

ವಿಕಾಸಸೌಧದಲ್ಲಿ ಇ- ಆಡಳಿತ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪತ್ರಾಗಾರ ಇಲಾಖೆಯಲ್ಲಿ ಈ
ವ್ಯವಸ್ಥೆ ಪ್ರಪ್ರಥಮ ಬಾರಿಗೆ ಅಳವಡಿ ಸಿದ್ದು ದೇಶದಲ್ಲೇ ಪ್ರಥಮ ಎಂದರು. ಇಲಾಖೆಯಲ್ಲಿ ಹಸ್ತಪ್ರತಿ ಆಧಾರಿತ 102 ಪುಸ್ತಕಗಳನ್ನು ಪ್ರಕಟಿಸಲಾ ಗಿದೆ. 100ಕ್ಕೂ ಹೆಚ್ಚು ನಾಡು – ನುಡಿ ಸಾಧಕರ ಸ್ವಾತಂತ್ರ್ಯ ಹೋರಾಟಗಾರರ, ಯೋಧರ,
ಆಡಳಿತಗಾರರ, ಕಲಾವಿದರ ಧ್ವನಿ ಸಂಗ್ರಹಿಸಲಾಗಿದ್ದು ಅಂತಜಾìಲದಲ್ಲಿ ಅಳವಡಿಸಲಾಗಿದೆ ಎಂದು ತಿಳಿಸಿದರು.

ಸುಮಾರು 60 ಸಾವಿರ ಪುಟಗಳಷ್ಟು ಕನ್ನಡ ಸೇರಿ ವಿವಿಧ ಭಾಷೆಗಳ ದಾಖಲೆ ಗಳನ್ನು ಭಾಷಾಂತರಕ್ಕೆ ಯೋಜನೆ
ಕೈಗೊಳ್ಳಲಾಗಿದೆ ಎಂದು ಹೇಳಿದರು. ಇಂಗ್ಲೆಂಡ್‌ನ‌ಲ್ಲಿರುವ ರಾಜ್ಯದ ಇತಿಹಾಸಕ್ಕೆ ಸಂಬಂಧಿಸಿದ 20 ಸಾವಿರ ಪುಟಗಳ
ದಾಖಲೆ ಸಂಗ್ರಹ ಮಾಡಲಾಗಿದ್ದು 72 ಸಂಪುಟಗಳಲ್ಲಿ ಸಂಶೋಧಕರಿಗೆ ಮಾಹಿತಿ ನೀಡಲಾ ಗಿದೆ ಎಂದು ಹೇಳಿದರು.

ಹೈದ್ರಾಬಾದ್‌ ಕರ್ನಾಟಕ ಭಾಗದ ಕಲಬುರಗಿ ಯಲ್ಲಿ ವಿಭಾಗೀಯ ಮಟ್ಟದ ಕಚೇರಿ ಆರಂಭಿಸಲು ರಾಜ್ಯ ಸರ್ಕಾರ
ಅನುಮತಿ ನೀಡಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತ ನ್ಯಾಯಾಧೀಶ ಕೋ. ಚೆನ್ನಬಸಪ್ಪ ಅವರ ಅನ್‌
ಸಂಗ್‌ μÅàಡಂ ಸ್ಟ್ರಗಲ್‌ ಪುಸ್ತಕ ಬಿಡುಗಡೆ ಮಾಡಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಚಕ್ರವರ್ತಿಮೋಹನ್‌, ನ್ಯಾಷನಲ್‌ ಇನ್‌ಫಾರ್‌ಮ್ಯಾಟಿಕ್ಸ್‌ ಸಂಸ್ಥೆಯ ಬಿ. ವಿನಯ, ಲಕ್ಷ್ಮೇಶ, ಪತ್ರಾಗಾರ ಇಲಾಖೆಯ ಉಪ ನಿರ್ದೇಶಕರಾದ ಅಂಬುಜಾಕ್ಷಿ, ಮಹದೇವಸ್ವಾಮಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next