Advertisement
ಬಿಜೆಪಿಯ ರಥದ ಸಾರಥಿಯಾಗಿದ್ದ ಅವರು ಮಂಗಳವಾರ ಅಯೋಧ್ಯೆಯ ಕುರಿತಾಗಿ ಮಾತನಾಡಿದ್ದಾರೆ.
Related Articles
Advertisement
ಮುಂದುವರಿದು ಮಾತನಾಡಿರುವ ಅವರು, ರಾಮನ ಭವ್ಯ ದೇವಾಲಯದ ನಿರ್ಮಾಣ ಕಾರ್ಯ ಭಾರತೀಯ ಜನತಾ ಪಕ್ಷದ ಕನಸು ಹಾಗೂ ಮಿಷನ್ ಆಗಿದೆ. 1990ರಲ್ಲಿ ನಡೆದ ರಾಮ ಜನ್ಮಭೂಮಿ ಚಳವಳಿಯ ಸಂದರ್ಭದಲ್ಲಿ ಸೋಮನಾಥದಿಂದ ಅಯೋಧ್ಯೆಯ ವರೆಗಿನ ರಾಮ ರಥಯಾತ್ರೆಯ ಜವಾಬ್ದಾರಿಯನ್ನು ನಾನು ಹೊತ್ತುಕೊಂಡಿದ್ದೆ. ಈ ಕ್ಷಣ ನಾನು ಅದಕ್ಕೆ ವಿನಮ್ರನಾಗಿದ್ದೇನೆ. ಈ ರಥಯಾತ್ರೆಗೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಬೆಂಬಲ ನೀಡಿದ್ದರು. ಇದು ಈ ಮಹತ್ಕಾರ್ಯಕ್ಕೆ ಹೆಚ್ಚಿನ ಶಕ್ತಿ ಮತ್ತು ಪ್ರೇರಣೆ ನೀಡಿತ್ತು.
ಈ ಶುಭ ಸಂದರ್ಭದಲ್ಲಿ ರಾಮ ಜನ್ಮಭೂಮಿ ಚಳವಳಿಗೆ ಸಹಕರಿಸಿದ ದೇಶದ ಮತ್ತು ವಿದೇಶದ ಎಲ್ಲ ಸಂತರು, ಮುಖಂಡರು ಹಾಗೂ ಜನರಿಗೆ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ. 2019ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ರಾಮ ಮಂದಿರದ ನಿರ್ಮಾಣ ಕಾರ್ಯಗಳು ಶಾಂತಿಯುತ ವಾತಾವರಣದಲ್ಲಿ ಪ್ರಾರಂಭವಾಗುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ.
ಭಾರತೀಯ ನಾಗರಿಕತೆ ಮತ್ತು ಸಂಸ್ಕೃತಿಯಲ್ಲಿ ಶ್ರೀರಾಮನಿಗೆ ಅಗ್ರಸ್ಥಾನವಿದೆ. ಈ ದೇವಾಲಯವು ಶ್ರೀ ರಾಮ ನ ಎಲ್ಲಾ ಗುಣಗಳನ್ನು ಅಳವಡಿಸಿಕೊಳ್ಳಲು ಭಾರತೀಯರೆಲ್ಲರಿಗೂ ಪ್ರೇರಣೆ ನೀಡುತ್ತದೆ ಎಂದು ಭಾವಿಸುತ್ತೇನೆ. ರಾಮ ಮಂದಿರ ಶಾಂತಿಯುತ ಭಾರತವನ್ನು ಪ್ರತಿನಿಧಿಸಲಿದೆ, ಇಲ್ಲಿ ಎಲ್ಲರಿಗೂ ನ್ಯಾಯ ಇರುತ್ತದೆ. ಪ್ರತಿಯೊಬ್ಬರೂ ರಾಮನಿಂದ ಆಶೀರ್ವದಿಸಲಿ.ʼ
ಜೈ ಶ್ರೀರಾಮ್.