Advertisement

ಪತ್ನಿ ಇರಿತಕ್ಕೆ ಹಾಕಿ ಪಟು ಬಲಿ

06:40 AM Aug 21, 2017 | Team Udayavani |

ಮುಂಬೈ: ಕರ್ನಾಟಕ ಮೂಲದ ಮಾಜಿ ಕಿರಿಯರ ವಿಭಾಗದ ಅಂ.ರಾ ಹಾಕಿ ಆಟಗಾರನನ್ನು ಚಾಕುವಿನಿಂದ ಪತ್ನಿಯೇ ಇರಿದು ಕೊಂದ ಘಟನೆ ಮುಂಬೈನ ಮಲಾಡ್‌ನ‌ಲ್ಲಿ ಶನಿವಾರ ನಡೆದಿದೆ. ಮಡಿಕೇರಿಯ ಅಪ್ಪಯ್ಯ ಚೇನಂಡ ದುರಂತ ಸಾವಿಗೀಡಾದವರು. ಅವರಿಗೆ 52 ವರ್ಷ ವಯಸ್ಸಾಗಿತ್ತು. ಪತಿ- ಪತ್ನಿಯರ ನಡುವಿನ ಕೌಟುಂಬಿಕ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

Advertisement

ಪತ್ನಿ ಅಮೃತಾ 7 ಬಾರಿ ಚಾಕುವಿನಿಂದ ಅಪ್ಪಯ್ಯ ಅವರಿಗೆ ಇರಿದಿದ್ದಾರೆ. ಅಮೃತಾ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಘಟನೆ?: ಪಶ್ಚಿಮ ಮಲಾಡ್‌ನ‌ ಅಗರ್ವಾಲ್‌ ಟ್ರಿನಿಟಿ ಟವರ್‌ ಅಪಾರ್ಟ್‌ಮೆಂಟ್‌ನ 27ನೇ ಮಹಡಿಯಲ್ಲಿ ಅಪ್ಪಯ್ಯ ಹಾಗೂ ಅವರ ಪತ್ನಿ ಅಮೃತಾ ಹಲವು ವರ್ಷಗಳಿಂದ ವಾಸವಿದ್ದರು. ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಇಬ್ಬರ ನಡುವೆ ಕ್ಷುಲಕ ವಿಷಯಕ್ಕೆ ಜಗಳವಾಗಿದೆ. ಮಾತಿಗೆ ಮಾತು ಬೆಳೆದಿದೆ. ಇವರಿಬ್ಬರ ಜಗಳ ನೋಡಿ ಅಕ್ಕಪಕ್ಕದ ಮನೆಯವರು ಓಡಿಬಂದಿದ್ದಾರೆ.

ಇವರು ತಲುಪುವುದಕ್ಕೂ ಮೊದಲು ಅಮೃತಾ ಪತಿ ಅಪ್ಪಯ್ಯ ಅವರ ಹೊಟ್ಟೆ, ಎದೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ. ರಕ್ತದ ಮಡುವಿನಲ್ಲಿ ಇದ್ದ ಅಪ್ಪಯ್ಯರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ಬದುಕಲಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಇದೇ ವೇಳೆ ಮಾತನಾಡಿದ ಪೊಲೀಸರು, ಸುಮಾರು 7ಕ್ಕೂ ಹೆಚ್ಚು ಬಾರಿ ಅಪ್ಪಯ್ಯಗೆ ಚಾಕುವಿನಿಂದ ಚುಚ್ಚಿದ್ದಾರೆ. ಇಬ್ಬರ ನಡುವಿನ ಜಗಳದ ವೇಳೆ ಅಮೃತಾಗೂ ಗಾಯವಾಗಿದೆ. ಸದ್ಯ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಯಿಂದ ಬಿಡುಗಡೆಯಾದ ತಕ್ಷಣ ಅವರನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.