Advertisement

National Champion: ಸ್ಕ್ವಾಷ್‌ ಆಟಗಾರ ರಾಜ್‌ ಮನ್‌ಚಂದ ಇನ್ನಿಲ್ಲ

01:42 AM Dec 04, 2024 | Team Udayavani |

ಹೊಸದಿಲ್ಲಿ: ಭಾರತದ ಖ್ಯಾತ ಸ್ಕ್ವಾಷ್‌ ಆಟಗಾರ ರಾಜ್‌ ಮನ್‌ಚಂದ (79) ಇನ್ನಿಲ್ಲ. ಅವರು ರವಿವಾರ ನಿಧನ ಹೊಂದಿದರು ಎಂಬುದಾಗಿ ಅವರ ಕುಟುಂಬದ ಸಮೀಪದವರು ಮಾಹಿತಿ ನೀಡಿದ್ದಾರೆ.

Advertisement

1977ರಿಂದ 1982ರ ತನಕ ಸತತ 6 ಸಲ ರಾಷ್ಟ್ರೀಯ ಚಾಂಪಿಯನ್‌ ಆಗಿದ್ದ ಮನ್‌ಚಂದ, 1983ರಲ್ಲಿ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದರು. ಸರ್ವೀಸಸ್‌ ತಂಡಕ್ಕೆ 11 ಸಲ ಪ್ರಶಸ್ತಿ ತಂದುಕೊಡುವಲ್ಲಿ ಇವರ ಪಾತ್ರ ಮಹತ್ವದ್ದಾಗಿತ್ತು.

ಭಾರತೀಯ ಸೇನೆಯ ಇಎಂಇ ವಿಭಾಗದ ಕ್ಯಾಪ್ಟನ್‌ ಆಗಿದ್ದ ರಾಜ್‌ ಮನ್‌ಚಂದ, ತಮ್ಮ ಮೊದಲ ರಾಷ್ಟ್ರೀಯ ಪ್ರಶಸ್ತಿಯನ್ನು 33ನೇ ವರ್ಷದಲ್ಲಿ ಜಯಿಸಿದ್ದರು. 1981ರ ಕರಾಚಿ ಏಷ್ಯನ್‌ ಟೀಮ್‌ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತ ಭಾರತ ತಂಡದ ಸದಸ್ಯರೂ ಆಗಿದ್ದರು.

ಜೋರ್ಡನ್‌ನಲ್ಲಿ ನಡೆದ 1984ರ ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಮನ್‌ಚಂದ್‌ ಭಾರತ ತಂಡದ ನಾಯಕರಾಗಿದ್ದರು. ಇಲ್ಲಿ ಭಾರತಕ್ಕೆ ಕಂಚಿನ ಪದಕ ಒಲಿದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next