ಕಾಸರಗೋಡು: ಇದು ಕಳೆದ ಬಾರಿ, 2014ರ ಲೋಕಸಭಾ ಚುನಾವಣೆ ಪ್ರಚಾರ ತಾರಕಕ್ಕೆ ಏರಿದ್ದ ಸಂದರ್ಭದಲ್ಲಿ ನಡೆದ ಪ್ರಸಂಗ.
ಆ ವರ್ಷ ಎ. 5ರಂದು ಕಾಂಗ್ರೆಸ್‌ನಿಂದ ರಾಹುಲ್ ಗಾಂಧಿಯವರು ಸ್ಟಾರ್ ಪ್ರಚಾರಕರಾಗಿ ಆಗಮಿಸಿ ಕಾಸರಗೋಡಿನಲ್ಲಿ ಭರ್ಜರಿ ರ್ಯಾಲಿ ನಡೆಸಿದ್ದರು. ಅವರ ಆಗಮನಕ್ಕಾಗಿ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು.
ಇದಾಗಿ ಮೂರೇ ದಿನಗಳಲ್ಲಿ ಅಂದರೆ, ಎ. 8ರಂದು ಬಿಜೆಪಿಯಿಂದ ನರೇಂದ್ರ ಮೋದಿ ಅವರ ಪ್ರಚಾರ ಭಾಷಣ ನಿಗದಿಯಾಗಿತ್ತು. ರಾಹುಲ್ ಕಾಪ್ಟರ್ ಇಳಿಯಲೆಂದು ನಿರ್ಮಿಸಿದ್ದ ಹೆಲಿಪ್ಯಾಡನ್ನೇ ಮೋದಿಯವರ ಹೆಲಿಕಾಪ್ಟರ್ ಇಳಿ ಯಲು ಬಳಸುವುದು ಎಂದು ತೀರ್ಮಾನಿಸಲಾಗಿತ್ತು. ಭದ್ರತಾ ಪಡೆ ಆಗಮಿಸಿ ಹೆಲಿಪ್ಯಾಡನ್ನು ಪರಿಶೀಲಿಸಿ ಭದ್ರತೆಯನ್ನು ಖಾತರಿಪಡಿಸಿತ್ತು.
ಆದರೆ ಇದು ನಾವು ನಿರ್ಮಿಸಿದ ಹೆಲಿಪ್ಯಾಡ್, ನಾವದನ್ನು ತೆರವುಗೊಳಿ ಸುತ್ತೇವೆ ಎಂದು ರಾಹುಲ್‌ಗಾಗಿ ಹೆಲಿಪ್ಯಾಡ್ ನಿರ್ಮಿಸಿದವರು ಜಿಲ್ಲಾಧಿಕಾರಿ ಅನುಮತಿ ಪಡೆದು ಕಿತ್ತೂಗೆದರು. ಬಳಿಕ ಬಿಜೆಪಿಯು ನಿರ್ವಾಹವಿಲ್ಲದೆ ಅಲ್ಲೇ ಬಳಿಯಲ್ಲಿ ಹೊಸ ಹೆಲಿಪ್ಯಾಡ್ ನಿರ್ಮಿಸಿತು!