Advertisement

ಮಾಸ್ಕ್ ಧರಿಸದವರಿಗೆ ಬಿತ್ತು ದಂಡ

02:53 PM May 09, 2020 | Naveen |

ಹಿರಿಯೂರು: ಮಾಸ್ಕ್ ಧರಿಸದೇ ರಸ್ತೆಯಲ್ಲಿ ಸಂಚರಿಸುತ್ತಿದ್ದವರಿಗೆ ನಗರಸಭೆ ಅಧಿಕಾರಿಗಳು ಹಾಗೂ ನಗರ ಪೊಲೀಸ್‌ ಠಾಣೆ ಪಿಎಸ್‌ಐ ದಂಡ ವಿಧಿಸಿದರು.

Advertisement

ಮಾಸ್ಕ್ ಧರಿಸದ ವಾಹನ ಸವಾರರಿಗೆ ಮೊದಲ ಉಲ್ಲಂಘನೆಗೆ 50 ರೂ., ಎರಡನೇ ಉಲ್ಲಂಘನೆಗೆ 100 ರೂ., ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ಹಾಗೂ ಗುಟಕಾ, ತಂಬಾಕು ಮಾರುವವರಿಗೆ ಮೊದಲ ಉಲ್ಲಂಘನೆಗೆ 250 ರೂ., ಎರಡನೇ ಉಲ್ಲಂಘನೆಗೆ 500 ರೂ. ದಂಡ ವಿಧಿಸಲಾಗುತ್ತಿದೆ.

ಅಗತ್ಯವಿಲ್ಲದ ಅಂಗಡಿ ತೆರೆದರೆ ಮತ್ತು ಯಾವುದೇ ವಸ್ತುಗಳನ್ನು ನಿಗದಿತ ದರಕ್ಕಿಂತ ಹೆಚ್ಚು ಬೆಲೆಗೆ ಮಾರಾಟ ಮಾಡಿದಲ್ಲಿ ಮೊದಲ ಉಲ್ಲಂಘನೆಗೆ 500 ರೂ., ಎರಡನೇ ಉಲ್ಲಂಘನೆಗೆ 1000 ರೂ. ದಂಡ ವಿಧಿಸಲಾಗುತ್ತದೆ ಎಂದು ಪೌರಾಯುಕ್ತ ಶಿವಪ್ರಸಾದ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next