Advertisement

ಹಿಂದೂಸ್ತಾನ್‌ ಹೆರಿಟೇಜ್‌ ಸೆಂಟರ್‌

04:38 PM Feb 18, 2017 | Team Udayavani |

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ದೇಶದಲ್ಲಿ ವಿಮಾನದ ಕೊರತೆ ಉಂಟಾಯಿತು. ಆ ದಿನಗಳಲ್ಲಿ ಕೈಗಾರಿಕಾ ಉದ್ಯಮಿಗಳಾದ ವಾಲ್‌ ಚಂದ್‌ ಹೀರಾಚಂದ್‌ರವರು ವಿಮಾನ ಕಾರ್ಖಾನೆ ಸ್ಥಾಪಿಸುವ ಬಗ್ಗೆ ಸರಕಾರದ ಒಪ್ಪಿಗೆ ಪಡೆದು ಮೈಸೂರು ಸಂಸ್ಥಾನದ ಅರಸರಾದ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ನೆರವಿನಿಂದ ಭೂಮಿಯನ್ನು ಪಡೆದು 1940ರಲ್ಲಿ “ಹಿಂದೂಸ್ತಾನ್‌ ವಿಮಾನ ಕಾರ್ಖಾನೆ’ಯನ್ನು ಸ್ಥಾಪಿಸಿದರು.

Advertisement

ಹೀಗೆ ಎರಡನೇ ಮಹಾಯುದ್ಧದ ಕಾಲಘಟ್ಟದಲ್ಲಿ ಹುಟ್ಟಿದ ಕೈಗಾರಿಕಾ ಘಟಕವೂ ನಂತರದ ದಿನಗಳಲ್ಲಿ ಸರಕಾರದ ಸಂಯುಕ್ತ ಪಾಲುದಾರಿಕೆಯ ಉದ್ಯಮವಾಗಿ ಲಿಮಿಟೆಡ್‌ ಕಂಪನಿಯಾಗಿ ಇಂದಿನವರೆಗೂ ತನ್ನದೇ ಆದ ಕೊಡುಗೆಗಳನ್ನು ದೇಶಕ್ಕೆ ನೀಡುತ್ತಾ ಬಂದಿದೆ. ಈ ಸಂಸ್ಥೆಯ ಇತಿಹಾಸ, ಆಗು ಹೋಗು ಮತ್ತು ಅಲ್ಲಿನ ಉತ್ಪಾದನಾ ವಿವರಗಳನ್ನು ನೀಡುವ ಸಲುವಾಗಿ ಬೆಂಗಳೂರಿನ ಹೆಚ್‌. ಎ. ಎಲ… ಮಾರತ್‌ಹಳ್ಳಿಯ ಸಮೀಪ ನಾಲ್ಕು ಎಕರೆಯ ಜಾಗದಲ್ಲಿ ನೂತನ ತಂತ್ರಜ್ಞಾನದೊಂದಿಗೆ ಬೆಳೆದು ನಿಂತಿದೆ ಈ ಹಿಂದೂಸ್ತಾನ್‌ ಹೆರಿಟೇಜ್‌ ಸೆಂಟರ್‌ ಎಂದರೆ ತಪ್ಪಿಲ್ಲ. ವೈಮಾನಿಕ ಕ್ಷೇತ್ರದಲ್ಲಿ ಪ್ರಸಿದ್ಧವಾಗಿರುವ ಹಿಂದೂಸ್ತಾನ್‌ ಹೆರಿಟೇಜ್‌ ಮತ್ತು ಏರೋಸ್ಪೇಸ್‌ ಮ್ಯೂಸಿಯಂ 2001 ರಿಂದ ಸಾರ್ವಜನಿಕರಿಗೆ ಮುಕ್ತವಾಗಿದ್ದು ಎಲ್ಲ ವಯೋಮಾನದವರ ಅಚ್ಚುಮೆಚ್ಚಿನ ತಾಣವಾಗಿದೆ.

ಆವರಣದಲ್ಲಿ ಎರಡು ವಿಶಾಲವಾದ ಕೋಣೆಗಳಿವೆ. ಕೋಣೆಯ ಒಂದು ಭಾಗದಲ್ಲಿ ಇಲ್ಲಿಯವರೆಗೆ ತಯಾರಿಸಿದ ಎÇÉಾ ಯುದ್ಧವಿಮಾನಗಳ ವಿವರ, ಅದರ ವಿನ್ಯಾಸ ಮತ್ತು ತಾಂತ್ರಿಕ ವಿವರಣೆಗಳಿವೆ. ಮತ್ತೂಂದು ಕೋಣೆಯಲ್ಲಿ ಸಂಸ್ಥೆಯು ತಯಾರಿಸಿದ ಉತ್ಪನ್ನಗಳ ಮಾದರಿಗಳಿವೆ. ಇದರ ಜೊತೆಯಲ್ಲಿ ದೇಶದ ಪ್ರಸಿದ್ಧ ಯುದ್ಧವಿಮಾನಗಳ ಇಂಜಿನ್‌ಗಳನ್ನೂ ಪ್ರದರ್ಶನ ಮಾಡಲಾಗಿದೆ. ಹಲವಾರು ತಾಂತ್ರಿಕ ವಿದ್ಯಾರ್ಥಿಗಳ ಮಾರ್ಗದರ್ಶನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಗ್ರಂಥಾಲಯದ ವ್ಯವಸ್ಥೆಯನ್ನೂ ಮಾಡಿದೆ. ಚಿಕ್ಕ ಮಕ್ಕಳ ಜೊತೆಗೆ ದೊಡ್ಡವರಿಗೂ ಅಚ್ಚುಮೆಚ್ಚಿನ ತಾಣವಾದ ಹೆರಿಟೇಜ್‌ ಸೆಂಟರ್‌ನಲ್ಲಿ, ವಿಮಾನದಲ್ಲಿ ಕುಳಿತುಕೊಂಡ ಅನುಭವ ನೀಡುವಂತಹ simulatorನ್ನು ಹೊಂದಿದೆ. ವಾರದ ಎಲ್ಲಾ ದಿನಗಳಲ್ಲೂ ಬಾಗಿಲು ತೆರೆದಿರುತ್ತದೆ. 

ಬಿಡುವಿ¨ªಾಗ ಕುಟುಂಬದ ಸದಸ್ಯರೊಡನೆ ಭೇಟಿ ಕೊಡಬಹುದಾದ ಬೆಂಗಳೂರಿನ ಸ್ಥಳಗಳಲ್ಲಿ ಇದೂ ಒಂದು.

ತಲುಪುವುದು ಹೇಗೆ ?
ಕೆಂಪೇಗೌಡ ಸಿಟಿ ಬಸ್‌ ನಿಲ್ದಾಣದಿಂದ ಹೆರಿಟೇಜ್‌ ಸೆಂಟರ್‌ ತಲುಪಲು ಪ್ಲಾಟ ಫಾರಂ 18 ಮತ್ತು 19ರಿಂದ ಮಾರತ್‌ಹಳ್ಳಿಗೆ ಹೋಗುವ 333 ಮಾರ್ಗದ ಸಿಟಿ ಬಸ್‌ ಹತ್ತಿ ಹೆಚ್‌.ಎ. ಎಲ… ಪೋಲಿಸ್‌ ಸ್ಟೇಷನ್‌ ನಿಲ್ದಾಣದಲ್ಲಿ ಇಳಿದು ಎರಡು ಹೆಜ್ಜೆ ಹಿಂದೆ ಬಂದರೆ ವೈಮಾನಿಕ ಕ್ಷೇತ್ರದ ಸಾಧನಗಳನ್ನು ಸಾರುವ ಈ ಭವ್ಯ ಕಟ್ಟಡ ಸಿಗುತ್ತದೆ.

Advertisement

ಸ್ಥಳ ವಿಶೇಷ
ಹೆರಿಟೇಜ್‌ ಸೆಂಟರ್‌ನ ಆವರಣದಲ್ಲಿ ಮಾರುತ್‌ ಎಚ್‌ ಎಪ್‌ 24 ಟ್ರೈನರ್‌ ಏರ್‌ ಕ್ರಾಫ್ಟ್, ಮಿಗ್‌ 21 ಪೈಟರ್‌, ಎಚ್‌ ಜೆ ಟಿ 36, ಎಲ್ ಸಿ ಎ, ಲಕ್ಷÂ ಪೈಲಟ್‌ ಲೆಸ್‌ ಏರ್‌ ಕ್ರಾಫ್ಟ್‌, ಕ್ಯಾನ್‌ಬೆರಾ, ಸೀ ಕಿಂಗ್‌ ಎಂ ಕೆ 42, ಎ.ಎಲ್‌ ಎಚ್‌ ದ್ರುವ, ಹಂಸಾ, ಹಿಂದೂಸ್ತಾನ್‌ ಟ್ರೈನರ್‌,ಕಿರಣ ಏರ್‌ಕ್ರಾಫ್ಟ್‌ ಇನ್ನೂ ಹಲವಾರು ಯುದ್ಧವಿಮಾನಗಳ ಮಾದರಿಗಳನ್ನು ಪ್ರದರ್ಶನ ಮಾಡಲಾಗಿದೆ.

ಶುಲ್ಕ ವಿವರಣೆ
ಹೆರಿಟೇಜ್‌ ಸೆಂಟರ್‌, ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೂ ತೆರೆದಿರುತ್ತದೆ. ವಯಸ್ಕರಿಗೆ ತಲಾ 50 ರು.ಗಳಂತೆ ವಿದ್ಯಾರ್ಥಿಗಳಿಗೆ 30ರು.ಗಳಂತೆ ಪ್ರವೇಶ ಶುಲ್ಕ ನಿಗದಿಪಡಿಸಿದ್ದು, ಮೂರು ವರ್ಷದ ಕೆಳಗಿರುವ ಮಕ್ಕಳಿಗೆ ಮತ್ತು ಅಂಗವಿಕಲರಿಗೆ ಶುಲ್ಕ ರಿಯಾಯಿತಿ ಇದೆ. ಆವರಣದೊಳಗೆ ಸ್ಟಿಲ… ಕ್ಯಾಮೆರಾ ಬಳಸಲು 50 ರು., ವಿಡಿಯೋ ಮಾಡಲು 75ರು. ಪಾವತಿಸಬೇಕಾಗುತ್ತದೆ.

-ಕ. ಶೀ ಮೋಹನ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next