Advertisement

ಸುಳ್ಳಿನ ಕಂತೆ: ಹಿಂದೂಗಳು ಕ್ರೂರಿಗಳು: ಪಾಕ್‌ ಪಠ್ಯ

09:20 AM Aug 05, 2017 | Team Udayavani |

ಇಸ್ಲಾಮಾಬಾದ್‌: ಭಾರತದ ವಿರುದ್ಧ ಸದಾ ದ್ವೇಷಕಾರುವ ಅಂಶಗಳನ್ನೇ ಶಾಲಾಮಕ್ಕಳ ತಲೆಗೆ ಪಠ್ಯದ ಮೂಲಕ ತುರುಕುತ್ತಿರುವ ಪಾಕಿಸ್ಥಾನ ಇದೀಗ, ಹಿಂದೂಗಳನ್ನು ಕೊಲೆಗಡುಕರು ಎಂದು ಕರೆದಿದೆ. ಅಲ್ಲದೇ ದೇಶ ವಿಭಜನೆಯ ಆರೋಪವನ್ನೂ ಹಿಂದೂಗಳ ಮೇಲೆ ಹೊರಿಸಲಾಗಿದೆ.

Advertisement

ದೇಶ ವಿಭಜನೆ ಬಗ್ಗೆ ಭಾರತ ಶಾಲಾ ಪಠ್ಯದಲ್ಲಿ ಒಂದು ರೀತಿ ಇದ್ದರೆ, ಪಾಕಿಸ್ಥಾನದ ಪಠ್ಯ ಸಂಪೂರ್ಣ ಭಿನ್ನ. ಇದು ಭಾರತ ವಿರುದ್ಧ ದ್ವೇಷ ಕಾರುವುದಕ್ಕೆ ಸೀಮಿತವಾಗಿದೆ. ಶಾಲಾ ಮಕ್ಕಳ ಮನಸ್ಸಿನ ಮೇಲೆ ಇದು ಪ್ರತಿಕೂಲ ಪರಿಣಾಮ ಬೀರುತ್ತಿದ್ದು, ಎರಡೂ ದೇಶಗಳ ಮಧ್ಯೆ ಸಾಮರಸ್ಯ ಮೂಡಿಸುವ ಯತ್ನಕ್ಕೆ ತೀವ್ರ ಹಿನ್ನಡೆಯಾಗುತ್ತದೆ ಅಲ್ಲದೇ ಸೇಡಿನ ಮನೋಭಾವನೆ ಬಿತ್ತುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

70 ವರ್ಷಗಳ ಹಿಂದೆ ದೇಶ ವಿಭಜನೆ ವೇಳೆ ಹಿಂದೂಗಳು ಪಾಕ್‌ನಿಂದ ಭಾರತಕ್ಕೆ, ಭಾರತದಿಂದ ಮುಸ್ಲಿಮರು ಪಾಕ್‌ಗೆ ವಲಸೆ ಹೋಗಿದ್ದಾರೆ. ಇದು ಶತಮಾನದ ಅತಿ ದೊಡ್ಡ ವಲಸೆ ಎಂದು ಗುರುತಿಸಿಕೊಂಡಿದೆ. ಈ ವೇಳೆ ವ್ಯಾಪಕ ಹಿಂಸಾಚಾರ ಸಂಭವಿಸಿದ್ದು, ಲೆಕ್ಕವಿಲ್ಲದಷ್ಟು ಸಾವುನೋವುಗಳಾಗಿವೆ. ದೇಶ ವಿಭಜನೆಗೆ ರಾಜಕೀಯ ಕಾರಣವನ್ನು ಬರೆದೇ ಇಲ್ಲ.

ಇತಿಹಾಸವನ್ನು ಸಂಪೂರ್ಣ ತಿರುಚಲಾಗಿದೆ. ಈ ಘಟನೆಯನ್ನು ಪಾಕ್‌ ಪಠ್ಯದಲ್ಲಿ ‘ಹಿಂದೂಗಳು ಮುಸ್ಲಿಮರನ್ನು ಹತ್ಯೆಗೈದರು, ಆಸ್ತಿ ಪಾಸ್ತಿ ನಾಶ ಮಾಡಿದರು, ಭಾರತದಿಂದ ಬಲವಂತವಾಗಿ ಮುಸ್ಲಿಮರನ್ನು ಹೊರದೂಡಿದರು’ ಎಂದು ಬರೆಯಲಾಗಿದೆ. ಅಲ್ಲದೇ ಮುಸ್ಲಿಮರನ್ನು ಹೀನಾಯವಾಗಿ ನೋಡಿದ್ದರಿಂದಲೇ, ನಾವು ಪಾಕ್‌ ಅನ್ನು ರಚಿಸಿದೆವು ಎಂದು ಬರೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next