Advertisement

ಕೋಟೆನಾಡಿನ ಹಿಂದೂ ಮಹಾಗಣಪತಿ ವಿಸರ್ಜನೆ ಯಾತ್ರೆ ಆರಂಭ

02:30 PM Oct 02, 2021 | Team Udayavani |

ಚಿತ್ರದುರ್ಗ: ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳದಿಂದ ನಗರದ ಬಿ.ಡಿ.ರಸ್ತೆಯ ಜೈನಧಾಮದಲ್ಲಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಗಣಪತಿ  ವಿಸರ್ಜನಾ ಯಾತ್ರೆ ಶನಿವಾರ ಮಧ್ಯಾಹ್ನ ಆರಂಭವಾಯಿತು.

Advertisement

ಸೆ.10ರಂದು ಸ್ಥಾಪಿಸಿದ್ದ ಸುಮಾರು ಹತ್ತು ಅಡಿ ಎತ್ತರದ ಹಿಂದೂ ಮಹಾ ಗಣಪತಿಯನ್ನು 21 ದಿನಗಳ ಬಳಿಕ ವಿಸರ್ಜನೆ ಮಾಡಲಾಗುತ್ತಿದೆ. ಮೆರವಣಿಗೆ ಅಂಗವಾಗಿ ಇಡೀ ನಗರ ಕೇಸರಿಮಯವಾಗಿದೆ. ಪ್ರಮುಖ ವೃತ್ತ ಹಾಗೂ ಮಾರ್ಗವನ್ನು ಕೇಸರಿ ಬಂಟಿಂಗ್ಸ್ ಗಳಿಂದ ಅಲಂಕರಿಸಲಾಗಿದೆ. ಜೈನಧಾಮದಿಂದ ಹೊರಟ ಮೆರವಣಿಗೆ ಬಿ.ಡಿ ರಸ್ತೆಯಲ್ಲಿ ಸಾಗಲಿದೆ. ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಕನಕ ವೃತ್ತದ ಮೂಲಕ ಚಂದ್ರವಳ್ಳಿ ತಲುಪಲಿದೆ.

ಜಿಲ್ಲಾಡಳಿತ ವಿಧಿಸಿದ ಹಲವು ನಿರ್ಬಂಧದ ನಡುವೆಯೇ ಮೆರವಣಿಗೆ ಅದ್ದೂರಿಯಾಗಿ ಶುರುವಾಗಿದೆ. ಮೆರವಣಿಗೆಗೆ ನಿರೀಕ್ಷೆ ಮೀರಿ ಸಾವಿರಾರು ಜನ ಸೇರಿದ್ದಾರೆ.

ಇದನ್ನೂ ಓದಿ:ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಬೇಡಿ: ಎಚ್.ಡಿ.ಕುಮಾರಸ್ವಾಮಿ

ಮೆರವಣಿಗೆಗೂ ಮುನ್ನ ಜೈನಧಾಮದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಈ ವೇಳೆ ಗಣಪತಿಯ ಹೂವಿನ ಹಾರಗಳ ಹರಾಜು ನಡೆಯಿತು.

Advertisement

ಕಾರ್ಯಕ್ರಮದಲ್ಲಿ ಬಸಮವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಕುಂಚಿಟಿಗ ಗುರುಪೀಠದ ಶಾಂತವೀರ ಸ್ವಾಮೀಜಿ, ತಮಿಳುನಾಡಿನ ಮಂಜುನಾಥ ಸ್ವಾಮೀಜಿ, ಬಸವಪ್ರಭು ಮಡಿವಾಳ ಮಾಚಿದೇವ ಸ್ವಾಮೀಜಿ, ಛಲವಾದಿ ಗುರುಪೀಠದ ಬಸವನಾಗೀದೇವ ಸ್ವಾಮೀಜಿ, ಬಂಜಾರ ಗುರುಪೀಠದ ಸೇವಾಲಾಲ್ ಸ್ವಾಮೀಜಿ, ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಆರೆಸ್ಸೆಸ್ಸ್ ನ ಗಿರೀಶ್, ಬಜರಂಗದಳದ ಪ್ರಭಂಜನ್ ಇದ್ದರು.

ಮೆರವಣಿಗೆಯಲ್ಲಿ ನಾಸಿಕ್ ಡೋಲು,‌ ಕೇರಳಾದ ಚಂಡೆ, ಟ್ರ್ಯಾಶ್ ಮತ್ತಿತರೆ ಕಲಾ ತಂಡಗಳು ಭಾಗವಹಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next