ಬೆಂಗಳೂರು: ಶಬರಿಮಲೆಗೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ನೀಡಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಮತ್ತು ವಿವಿಧ ವಿಚಾರಗಳಿಗೆ ಸಂಬಂಧಿಸಿ ರಾಷ್ಟ್ರೀಯ ಹಿಂದೂ ಆಂದೋಲನ ಸಮಿತಿಯ ಸದಸ್ಯರು ಭಾನುವಾರ ಬೆಂಗಳೂರಿನ ಮೌರ್ಯ ಸರ್ಕಲ್‌ನಲ್ಲಿರುವ ಗಾಂಧಿ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಿದರು.
ಹಾಸನಾಂಬಾ ದೇವಾಲಯದಲ್ಲಿ ಯಾವುದೇ ಕಾರಣಕ್ಕೆ ಬುದ್ದಿ ಜೀವಿಗಳಿಗೆ ದೇವಿಯ ಮಹಾತ್ಮೆ ಪರೀಕ್ಷೆ ಮಾಡಲು ಅವಕಾಶ ನೀಡಬೇಡಿ ಎಂದು ಪ್ರತಿಭಟನಾ ಕಾರರು ಆಗ್ರಹಿಸಿದರು.
ಕರ್ನಾಟಕದಲ್ಲಿ ಹಿಂದುನಿಷ್ಠರ ಹತ್ಯೆಯನ್ನು ಮಾಡಿರುವ ಪಿಎಫ್ಐ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಲಾಯಿತು.
ಲೈಂಗಿಕ ಹಗರಣಗಳು ನಡೆದಿರುವ ಹಿನ್ನಲೆಯಲ್ಲಿ ದೇಶಾದ್ಯಂತ ಎಲ್ಲಾ ಚರ್ಚ್‌ಗಳ ಮತ್ತು ವಿಶನರಿ ಸಂಸೆœಗಳ ತಪಾಸಣೆ ನಡೆಸಬೇಕು ಎಂದು ಆಗ್ರಹಿಸಿದರು.
ಕುಂಭ ಮೇಳದ ವೇಳೆ ಯಾತ್ರಿಗಳಿಗೆ ರೈಲು ದರ ಏರಿಸಿ ತೊಂದರೆ ಮಾಡಬಾರದು ಎಂದು ಆಗ್ರಹಿಸಿದರು.