Advertisement

ಹಿಂದಿಯ ಹಿಂದೆ ಬಿದ್ದ ಚೀನ! ಹಿಂದಿ ಭಾಷಾಂತರಕಾರರಿಗಾಗಿ ವಿವಿಗಳಲ್ಲಿ ಹುಡುಕಾಟ

11:47 PM May 04, 2022 | Team Udayavani |

ಬೀಜಿಂಗ್‌: ವಾಸ್ತವಿಕ ಗಡಿ ರೇಖೆ(ಎಲ್‌ಎಸಿ)­ಯಲ್ಲಿ ತಾನು ನಡೆಸುತ್ತಿರುವ ಕುಕೃತ್ಯಗಳಿಗೆ ಮತ್ತಷ್ಟು ವೇಗ ನೀಡಲು ಮುಂದಾಗಿರುವ ಚೀನ ಈಗ “ಹಿಂದಿ’ಯ ಕದ ತಟ್ಟಿದೆ!

Advertisement

ಟಿಬೆಟ್‌ನ ಸ್ವಾಯತ್ತ ಪ್ರದೇಶದ ಎಲ್‌ಎಸಿಯಲ್ಲಿ ಕದ್ದಾಲಿಕೆ ಹಾಗೂ ಗುಪ್ತಚರ ಮಾಹಿತಿ ಸಂಗ್ರಹಿಸುವ ಉದ್ದೇಶದ ಭಾಗವಾಗಿ ಪೀಪಲ್ಸ್‌ ಲಿಬರೇಷನ್‌ ಆರ್ಮಿ(ಪಿಎಲ್‌ಎ)ಯು ಹಿಂದಿ ಭಾಷಾಂತರ ಬಲ್ಲಂಥ ಪದವೀಧರರನ್ನು ಚೀನದ ವಿವಿಧ ವಿಶ್ವವಿದ್ಯಾನಿಲಯಗಳಿಂದ ನೇರವಾಗಿ ನೇಮಕ ಮಾಡಿಕೊಳ್ಳಲು ಚಿಂತನೆ ನಡೆಸಿದೆ.

ಪಶ್ಚಿಮ ಥಿಯೇಟರ್‌ ಕಮಾಂಡ್‌ನ‌ ಅಡಿ ಬರುವ ಟಿಬೆಟ್‌ ಮಿಲಿಟರಿ ಡಿಸ್ಟ್ರಿಕ್ಟ್ ಮುಂಬ­ರುವ ಜೂನ್‌ ತಿಂಗಳೊಳಗಾಗಿ ಈ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಲು ಯೋಜಿಸಿದೆ ಎಂದು ಮೂಲಗಳು ತಿಳಿಸಿದೆ. ಭಾರತ­ದೊಂದಿಗೆ ಚೀನ‌ ಗಡಿಯ ಮೇಲ್ವಿ­ಚಾರಣೆಯ ಕೆಲಸವನ್ನೂ ಇದೇ ಕಮಾಂಡ್‌ ನಡೆಸುತ್ತದೆ.

ವಿವಿಗಳಿಗೆ ಭೇಟಿ: ಕಳೆದ 2 ತಿಂಗಳಲ್ಲಿ ಟಿಬೆಟ್‌ ಮಿಲಿಟರಿ ಡಿಸ್ಟ್ರಿಕ್ಟ್ ಚೀನದ ವಿವಿಧ ಕಾಲೇಜುಗಳು ಹಾಗೂ ವಿವಿಗಳಿಗೆ ಭೇಟಿ ಕೊಟ್ಟು, ಪಿಎಲ್‌ಎಯಲ್ಲಿ ಹಿಂದಿ ಭಾಷಾಂತರ ಬರುವವರಿಗೆ ಸಾಕಷ್ಟು ಅವಕಾಶಗಳಿವೆ ಎಂದು ಹೇಳಿತ್ತು.

ಇದನ್ನೂ ಓದಿ : ಚೆನ್ನೈ ಕಿಂಗ್ಸ್‌ಗೆ ಸೋಲು, ನಿರ್ಣಾಯಕ ಪಂದ್ಯದಲ್ಲಿ ಮಿಂಚಿದ ಡು ಪ್ಲೆಸಿಸ್‌ ಪಡೆ

Advertisement

ಇದಲ್ಲದೇ ಇತ್ತೀಚಿನ ವರ್ಷಗಳಲ್ಲಿ ಚೀನವು ಹಿಂದಿಯನ್ನು ಚೆನ್ನಾಗಿ ಮಾತನಾಡಲು ಬಲ್ಲ ಟಿಬೆಟಿಯನ್‌ಗಳನ್ನೇ ಸೇನೆಗೆ ನೇಮಕ ಮಾಡಿಕೊಳ್ಳುತ್ತಿದೆ. ಭಾರತದ ಉತ್ತರದ ಗಡಿಗಳಲ್ಲಿನ ಸೇನ ಕ್ಯಾಂಪ್‌ಗ್ಳಲ್ಲಿ ಇಂಥವರನ್ನು ನಿಯೋಜಿಸಲಾಗುತ್ತಿದೆ. ಹಿಂದಿ ಗೊತ್ತಿದ್ದರೆ ಗುಪ್ತಚರ ಮಾಹಿತಿಗಳನ್ನು ಸುಲಭವಾಗಿ ಸಂಗ್ರಹಿಸಬಹುದು ಎನ್ನುವುದು ಪಿಎಲ್‌ಎ ಲೆಕ್ಕಾಚಾರ. ಇದಕ್ಕೆ ಪ್ರತಿಯಾಗಿ ಇತ್ತ ಭಾರತೀಯ ಸೇನೆಯೂ ಯೋಧರಿಗೆ ಟಿಬೆಟಿಯನ್‌ ಭಾಷೆಯನ್ನು ಕಲಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next