Advertisement

ಪ್ರೇಮಿಗಳ ದಿನ ನಡೆಯುವ ಅನಗತ್ಯ ಚಟುವಟಿಕೆಗಳ ತಡೆಗೆ ಹಿಂದೂ ಜನಜಾಗೃತಿ ಸಮಿತಿ ಮನವಿ

07:00 PM Feb 10, 2022 | Team Udayavani |

ಕುಮಟಾ : ಪ್ರೇಮಿಗಳ ದಿನ ನಿಮಿತ್ತ ನಡೆಯುವ ಅನಗತ್ಯ ಚಟುವಟಿಕೆಗಳನ್ನು ತಡೆಯುವಂತೆ ಹಾಗೂ ಈ ಕುರಿತು ಕ್ರಮ ಕೈಗೊಳ್ಳುವಂತೆ ಹಿಂದೂ ಜನಜಾಗೃತಿ ಸಮಿತಿ ತಾಲೂಕು ಘಟಕದಿಂದ ತಹಶಿಲ್ದಾರರಿಗೆ ಮನವಿ ಸಲ್ಲಿಸಿದರು.

Advertisement

ಫೆಬ್ರವರಿಯಂದು 14 ರಂದು `ವ್ಯಾಲೆಂಟೈನ್ ಡೇ’ ಹೆಸರಿನಲ್ಲಿ ಪ್ರೇಮಿಗಳ ದಿನವನ್ನು ಆಚರಿಸುವ ಪದ್ಧತಿಯು ಹೆಚ್ಚುತ್ತಿದ್ದು, ದೇಶದಲ್ಲಿ ಈ ಮೂಲಕ ವ್ಯವಹಾರಿಕ ಲಾಭಗಳಿಸುವ ಉದ್ಧೇಶದಿಂದ ಪಾಶ್ಚಾತ್ಯರ ಈ ಅಂಧಾನುಕರಣೆಯು ಯುವಕ-ಯುವತಿಯರ ಅನೈತಿಕತೆ ಮತ್ತು ಸ್ವೇಚ್ಚಾಚಾರಕ್ಕೆ ಕಾರಣವಾಗುತ್ತಿದೆ. ಪಾಶ್ಚಾತ್ಯರ ಈ ವ್ಯಾಲೆಂಟೈನ್ ದಿನ ಯುವತಿಯರನ್ನು ಪೀಡಿಸುವ ಮತ್ತು ಅವರಿಗೆ ಹಿಂಸೆ ನೀಡುವ, ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುವ ದಿನವನ್ನಾಗಿ ಆಚರಿಸುತ್ತಿರುವುದು ಖೇಧಕರ ಸಂಗತಿಯಾಗಿದೆ. ಈ ದಿನ ಪಾರ್ಟಿಯ ಹೆಸರಿನಲ್ಲಿ ಯುವಕ ಯುವತಿಯರು ಮದ್ಯಪಾನ, ದೂಮಪಾನ ಮಾಡುವುದು, ಡ್ರಗ್ ಮಾಪಿಯಾದಂತಹ ಕೃತ್ಯಗಳಿಗೆ ಬಲಿಯಾಗುವುದು ಮುಂತಾದ ಅನುಚಿತ ಘಟನೆಗಳ ಪ್ರಮಾಣ ಹೆಚ್ಚಳವಾಗುತ್ತಿದೆ.

ಇದನ್ನು ತಡೆಯಲು ವ್ಯಾಲೆಂಟೈನ್ ದಿನದಂದು ವಿಶೇಷ ಪೋಲಿಸ್ ದಳ ರಚಿಸಿ ಶಾಲಾ-ಕಾಲೇಜುಗಳಲ್ಲಿ ಅನುಚಿತ ಕೃತ್ಯ ಮಾಡುವವರ ಮೇಲೆ, ವೇಗದಿಂದ ವಾಹನ ಚಲಾಯಿಸುವವರ ಮೇಲೆ ಕ್ರಮ ಜರುಗಿಸಬೇಕು. ಪ್ರೇಮಿಗಳ ದಿನದಂದು ನಡೆಯುವ ಘಟನೆಗಳನ್ನು ಗಮನದಲ್ಲಿರಿಸಿ ಪಾರ್ಕ್, ಮುಂತಾದ ಸ್ಥಳಗಳಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳನ್ನು ತಡೆಯಬೇಕು.ಮಹಿಳೆಯ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಘಟನೆಗಳನ್ನು ತಡೆಯಲು ಡೇ ಸಂಸ್ಕೃತಿಯನ್ನು ನಿಲ್ಲಿಸಲು ಮತ್ತು ಇಂತಹ ಆಚರಣೆಗಳಿಗೆ ಪ್ರೋತ್ಸಾಹ ನೀಡದಂತೆ ಶಾಲಾ ಕಾಲೇಜುಗಳಿಗೆ ನಿರ್ದೇಶನ ನೀಡಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ಸದಸ್ಯರು ಮನವಿಯ ಮೂಲಕ ಆಗ್ರಹಿಸಿದರು.

ಈ ಸಂಧರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕರಾದ ಶರತ್ ಕುಮಾರ್, ಧನಂಜಯ್ ಶೆಟ್, ನಾಗರಾಜ್ ಶೇಟ್,ನಾಗೇಂದ್ರ ಆಚಾರಿ ಮತ್ತು ಸತೀಶ್ ಸೆಟ್, ಸಂದೀಪ್ ಭಂಡಾರಿ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ : ದಿ ಗ್ರೇಟ್ ಖಲಿ ಬಿಜೆಪಿಗೆ ಸೇರ್ಪಡೆ : ಮೋದಿ ಕಾರ್ಯಗಳಿಂದ ಪ್ರಭಾವಿತನಾಗಿದ್ದೇನೆ

Advertisement
Advertisement

Udayavani is now on Telegram. Click here to join our channel and stay updated with the latest news.

Next