Advertisement

Hindenburg Report: ಬಿಜೆಪಿ, ಕಾಂಗ್ರೆಸ್‌ ವಾಕ್ಸಮರ

12:51 AM Aug 13, 2024 | Team Udayavani |

ಹೊಸದಿಲ್ಲಿ: ಅದಾನಿ ಸಮೂ ಹದ ಅಕ್ರ ಮ ದಲ್ಲಿ ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ ಮುಖ್ಯಸ್ಥರೂ ಭಾಗಿಯಾಗಿ ದ್ದಾರೆ ಎಂದು ಆರೋಪಿ ಅಮೆರಿಕದ ಹಿಂಡನ್‌ಬರ್ಗ್‌ ಬಿಡುಗಡೆ ಮಾಡಿರುವ ವರದಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ  ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ.

Advertisement

ದೇಶದಲ್ಲಿ ಆರ್ಥಿಕ ಅರಾಜಕತೆ ಸೃಷ್ಟಿಸಲು, ಷೇರು ಮಾರುಕಟ್ಟೆ ಬೀಳಿಸಲು ಕಾಂಗ್ರೆಸ್‌ ಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದರೆ, ತನಿಖೆ ವಿಳಂಬ ಗೊಳಿಸುವ ಮೂಲಕ ಸೆಬಿ ಲೋಕ ಸಭೆ ಚುನಾ ವಣೆ ನಡೆಸಲು ಅನು ಕೂಲ ಮಾಡಿಕೊಟ್ಟಿತು ಎಂದು ಕಾಂಗ್ರೆಸ್‌ ಹೇಳಿದೆ.

ಮಾರುಕಟ್ಟೆ ಬೀಳಿಸಲು ಯತ್ನ: ಹಿಂಡನ್‌ಬರ್ಗ್‌ ವರದಿಗೆ ಸಂಬಂಧಿಸಿ ಸುಳ್ಳು ಹರಡುವ ಮೂಲಕ ಷೇರು ಮಾರುಕಟ್ಟೆ ಪತ ನ ಗೊ ಳಿ ಸಲು ಕಾಂಗ್ರೆಸ್‌ ಯತ್ನ ಮಾಡುತ್ತಿದೆ. ಈ ಮೂಲಕ ದೇಶದಲ್ಲಿ ಆರ್ಥಿಕ ಅಸ್ಥಿರತೆ ಸೃಷ್ಟಿಸುವುದು ಅದರ ಉದ್ದೇಶ. ಆ ಪಕ್ಷ ಯಾವತ್ತಿದ್ದರೂ ಭಾರತ ದ್ವೇಷಿ ಎಂದು ಮಾಜಿ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಆರೋಪಿಸಿದ್ದಾರೆ.

ಸೋರೋಸ್‌ ಪ್ರಮುಖ ಹೂಡಿಕೆದಾರ:
ಹಿಂಡನ್‌ಬರ್ಗ್‌ ಸಂಸ್ಥೆಯಲ್ಲಿ ಜಾರ್ಜ್‌ ಸೋರೋಸ್‌ ಪ್ರಮುಖ ಹೂಡಿಕೆದಾರ. ಭಾರತದ ವಿರುದ್ಧ ಸದಾ ಸುಳ್ಳು ಹಬ್ಬಿ ಸುವ ಸೋರೋಸ್‌ ಹೆಚ್ಚಿನ ಹೂಡಿಕೆ ಮಾಡಿದ್ದಾರೆ. ಇವರು ಪ್ರಧಾನಿ ಮೋದಿ ವಿರುದ್ಧ ದ್ವೇಷ ಹೊಂದಿದ್ದಾರೆ. ಹೀಗಾಗಿಯೇ ಹಿಂಡನ್‌ಬರ್ಗ್‌ ವರದಿ ಬಿಡುಗಡೆ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ಲೋಕಸಭೆ ಚುನಾವಣೆ ನಡೆಸಲು ಸಹಾಯ:
ಅದಾನಿ ಸಮೂಹದ ವಿರುದ್ಧ ಗಂಭೀರವಾದ ಆರೋಪ ಕೇಳಿಬಂದಿದ್ದರೂ ಸೆಬಿ ತನಿಖೆ ವಿಳಂಬಗೊಳಿಸಿ ಕೇಂದ್ರ ಸರಕಾರ‌ಕ್ಕೆ ನೆರವು ಒದಗಿಸಿದೆ. ಹೀಗಾಗಿಯೇ ಅಕ್ರಮ ಎಸಗಿರುವ ತನ್ನ ಸ್ನೇಹಿತರ ಹೆಸರು ಹೇಳದೇ ಮೋದಿ ಚುನಾವಣೆ ಎದು ರಿಸಿದರು ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಹೇಳಿದ್ದಾರೆ. ಅದಾನಿ ಪ್ರಕರಣಕ್ಕೆ ಸಂಬಂಧಿಸಿ 100 ಸಮನ್ಸ್‌, 1,100 ಪತ್ರ ಗಳನ್ನು ತನಿಖೆ ಮಾಡಲಾಗಿದೆ ಎಂದು ಹೇಳಲಾಯಿತು. ಈ ಮೂಲಕ ಮುಖ್ಯ ವಿಷಯದಿಂದ ಜನರನ್ನು ಮತ್ತೂಂದೆಡೆಗೆ ಸೆಳೆಯಲಾಯಿತು ಎಂದು ಆರೋಪಿಸಿದ್ದಾರೆ. ಹಿಂಡನ್‌ಬರ್ಗ್‌ ತನಿಖೆಯನ್ನು ಜಂಟಿ ಸಂಸ ದೀಯ ಸಮಿತಿಗೆ ನೀಡದಿ ದ್ದರೆ ದೇಶಾ ದ್ಯಂತ ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್‌ ಎಚ್ಚರಿಕೆ ನೀಡಿದೆ.

Advertisement

ಕ್ಲೈಂಟ್‌ಗಳ ಪಟ್ಟಿ ಬಿಡುಗಡೆ ಮಾಡಿ: ಮಾಧವಿಗೆ ಹಿಂಡನ್‌ಬರ್ಗ್‌ ಸವಾಲು
ಷೇರುಪೇಟೆ ಅಕ್ರಮಕ್ಕೆ ಸಂಬಂಧಿಸಿ ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್‌ ವಿರುದ್ಧ ಹಿಂಡನ್‌ಬರ್ಗ್‌ ಸಂಸ್ಥೆ ಹೊಸ ಆರೋಪಗಳನ್ನು ಮಾಡಿದೆ. ಮಾಧವಿ ಅವರು ತಮ್ಮ ಕ್ಲೈಂಟ್‌ಗಳ ಲಿಸ್ಟ್‌ ಬಿಡುಗಡೆ ಮಾಡಬೇಕು ಎಂದು ಸವಾಲು ಹಾಕಿದೆ. ಹಿಂಡನ್‌ಬರ್ಗ್‌ ವರದಿಗೆ ಸಂಬಂಧಿಸಿ ಮಾಧವಿ ಭಾನುವಾರ ರಾತ್ರಿ ಹೇಳಿಕೆ ಬಿಡುಗಡೆ ಮಾಡಿದ್ದರು.

ಇದನ್ನು ಆಧರಿಸಿ ಸರಣಿ ಟ್ವೀಟ್‌ ಮಾಡಿರುವ ಹಿಂಡನ್‌ಬರ್ಗ್‌ ರಿಸರ್ಚ್‌, ಮಾರಿಷಸ್‌ ಮತ್ತು ಬರ್ಮುಡಾಗಳಲ್ಲಿ ಹೂಡಿಕೆ ಮಾಡಿ ದ್ದಾರೆ ಎನ್ನುವ ಅನುಮಾನಗಳನ್ನು ಬುಚ್‌ ಅವರ ಹೇಳಿಕೆ ಹುಟ್ಟಿಸುತ್ತಿದೆ. ತಮ್ಮ ಪತಿಯ ಸ್ನೇಹಿತ ಈ ಹೂಡಿಕೆಗಳನ್ನು ನೋಡಿಕೊಳ್ಳುತ್ತಿದ್ದರು ಎಂದು ಅವರು ಹೇಳಿದ್ದಾರೆ. ಈ ಸಮಯದಲ್ಲಿ ಆ ಸ್ನೇಹಿತ ಅದಾನಿ ಕಂಪನಿಯಲ್ಲಿ ನಿರ್ದೇಶಕರಾಗಿದ್ದರು ಎಂದು ಹಿಂಡನ್‌ಬರ್ಗ್‌ ಆರೋಪಿಸಿದೆ. ಧವಳ್‌ ಅವರ ಬಾಲ್ಯ ಸ್ನೇಹಿತ ಅನಿಲ್‌ ಅಹುಜಾ ಈ ಹೂಡಿಕೆಗಳನ್ನು ನೋಡಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ನಾವು ಸಿಂಗಾಪುರದ ನಿವಾಸಿಗಳಾಗಿದ್ದೆವು ಎಂದು ಮಾಧವಿ ಹೇಳಿಕೆಯಲ್ಲಿ ತಿಳಿಸಿದ್ದರು.

ಷೇರುಪೇಟೆ ಸ್ಥಿರ: ಅದಾನಿ ಷೇರು ಪತನ
ಬಿದ್ದು ಎದ್ದು ಬಿದ್ದ ಬಿಎಸ್‌ಇ ಸೆನ್ಸೆಕ್ಸ್‌ , ಅದಾನಿಯ 8 ಕಂಪೆನಿಗಳ ಷೇರು ಪತನ
ಮುಂಬಯಿ: ಹಿಂಡ ನ್‌ ಬರ್ಗ್‌ ವರ ದಿಯು ಮುಂಬಯಿ ಷೇರು ಪೇ ಟೆಯ ಮೇಲೆ ದೊಡ್ಡ ಮ ಟ್ಟ ದಲ್ಲಿ ನಕಾ ರಾ ತ್ಮಕ ಪರಿ ಣಾಮ ಬೀರ ಬ ಹುದು ಎಂಬ ಊಹೆ  ಸುಳ್ಳಾ ಗಿದೆ. ಸೋಮವಾರದ ವಹಿವಾಟಿನಲ್ಲಿ ಹಿಂಡ ನ್‌ ಬರ್ಗ್‌ ವರದಿ ಎಫೆಕ್ಟ್ ಎಂಬಂತೆ ಅದಾನಿ ಗ್ರೂಪ್‌ನ ಎಲ್ಲ 10 ಕಂಪೆನಿ ಗಳ ಷೇರು ಗಳೂ ಪತ ನ ಗೊಂಡಿದ್ದರೂ, ಒಟ್ಟಾರೆ ಷೇರು ಪೇಟೆ ಸ್ಥಿರತೆ ಕಾಯ್ದುಕೊಂಡಿತ್ತು.

ವಹಿವಾಟು ಆರಂಭವಾದಾಗ ಕುಸಿಯುತ್ತಾ ಸಾಗಿದ ಷೇರು ಪೇಟೆ, ಅನಂತರ ಚೇತ ರಿಕೆ ಕಂಡು, ದಿನಾಂತ್ಯಕ್ಕೆ ಮತ್ತೆ ಅಲ್ಪ ಅಂಕ ಗಳ ಕುಸಿ ತ ದೊಂದಿಗೆ ವಹಿ ವಾಟು ಮುಗಿ ಸಿದೆ. ಬಿಎ ಸ್‌ಇ ಸೆನ್ಸೆಕ್ಸ್‌ 56.99 ಅಂಕ ಇಳಿಕೆಯಾಗಿ, 79.648ರಲ್ಲಿ ವಹಿ ವಾಟು ಅಂತ್ಯಗೊಳಿಸಿದರೆ, ನಿಫ್ಟಿ 20.50 ಅಂಕ ಕುಸಿ ದು, 24,347ರಲ್ಲಿ ಕೊನೆಗೊಂಡಿದೆ.

ಅದಾನಿಗೆ ಆಘಾತ:
ಅದಾನಿ ಗ್ರೂಪ್‌ಗೆ ಸೋಮವಾರ ಆಘಾತ ಎದುರಾಗಿದ್ದು, 8 ಕಂಪೆನಿ ಗಳ ಷೇರುಗಳು ಪತ ನ ಗೊಂಡಿವೆ. ಅದಾನಿ ಎಂಟರ್‌ ಪ್ರೈಸಸ್‌ ಶೇ.5.5, ಅದಾನಿ ಎನರ್ಜಿ ಶೇ.17, ವಿಲ್ಮಾರ್‌ ಶೇ.4.14, ಅದಾನಿ ಟೋಟಲ್‌ ಗ್ಯಾಸ್‌ ಶೇ.4.03, ಎನ್‌ಡಿ ಟಿವಿ ಶೇ.3.08, ಅದಾನಿ ಪೋರ್ಟ್ಸ್ ಶೇ.2, ಎಸಿಸಿ ಶೇ.1.55, ಅದಾನಿ ಪವರ್‌ ಶೇ.0.65 ಕುಸಿತ ಕಂಡಿವೆ. ಆದರೆ ವಹಿ ವಾ ಟಿನ ಅಂತ್ಯ ದಲ್ಲಿ ಅದಾನಿ ಗ್ರೀನ್‌ ಎನರ್ಜಿ, ಅಂಬುಜಾ ಸಿಮೆಂಟ್‌ ಷೇರು ಗಳು ಚೇತ ರಿಕೆ ಕಂಡವು. ಒಟ್ಟಾ ರೆ ಯಾಗಿ ಅದಾನಿ ಕಂಪೆನಿ ಗಳ ಮಾರು ಕಟ್ಟೆ ಬಂಡ ವಾಳದಲ್ಲಿ 22,064 ಕೋಟಿ ರೂ. ನಷ್ಟ ಉಂಟಾಗಿದೆ.

ಕಾಂಗ್ರೆಸ್‌ಗೆ ಕಪಾಳಮೋಕ್ಷ ಎಂದ ನೆಟ್ಟಿಗರು
ಸೋಮವಾರ ಮಧ್ಯಾಂತ ರ ದಲ್ಲಿ ಸೆನ್ಸೆಕ್ಸ್‌ 400 ಅಂಕ ಗ ಳಷ್ಟು ಚೇತ ರಿಕೆ ಕಂಡಿದ್ದು, ಅದರ ಬೆನ್ನಲ್ಲೇ ಸಾಮಾ ಜಿಕ ಜಾಲ ತಾ ಣ ಗ ಳಲ್ಲಿ ಭಾರೀ ಚರ್ಚೆ ಆರಂಭವಾಗಿತ್ತು. ಪೇಟೆ ಪತನವಾಗಬೇಕು ಎಂದು ಕಾಂಗ್ರೆಸ್‌ ಬಯಸಿತ್ತು. ಆದರೆ ಭಾರ ತೀಯ ಹೂಡಿ ಕೆ ದಾ ರರು ಕಾಂಗ್ರೆ ಸ್‌ಗೆ ಕಪಾ ಳ ಮೋಕ್ಷ ಮಾಡಿ ದ್ದಾರೆ ಎಂದು ಹಲವರು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next