Advertisement

ಹಿಮೇಶ್‌ ರೇಶಮಿಯಾ ಕಾರು ಅಪಘಾತ ; ಚಾಲಕ ಗಂಭೀರ

10:33 AM Jul 03, 2019 | Vishnu Das |

ಮುಂಬಯಿ: ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಹಿಮೇಶ್‌ ರೇಶಮಿಯಾ ಅವರು ಪ್ರಯಾಣಿಸುತ್ತಿದ್ದ ಕಾರು ಮಂಗಳವಾರ ಬೆಳಗ್ಗೆ ಅಪಘಾತಕ್ಕೀಡಾಗಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ಮುಂಬಯಿ -ಪುಣೆ ಎಕ್ಸ್‌ಪ್ರೆಸ್‌ ವೇ ಯಲ್ಲಿ ಅವಘಡ ಸಂಭವಿಸಿದ್ದು, ಬಿಹಾರ ಮೂಲದ ಚಾಲಕ ರಾಮ್‌ ರಂಜನ್‌ ಅವರ ಸ್ಥಿತಿ ಚಿಂತಾಜನಕವಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರೇಶಮಿಯಾ ಅವರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಆಶಿಖ್‌ ಬನಾಯಾ ಅಪ್‌ನೇ, ಝಲಕ್‌ದಿಕ್‌ ಲಾಜಾ ,ನಾಮ್‌ ಹೇ ತೇರಾ, ,ತೇರಾ ಸುರೂರ್‌ , ಆಪ್‌ ಕೀ ಕಶಿಶ್‌ ಸೇರಿದಂತೆ ಹಲವು ಹಾಡುಗಳ ಮೂಲಕ ರೇಶಮಿಯಾ ಮನೆ ಮಾತಾಗಿದ್ದರು. ಸಂಗೀತ ನಿರ್ದೇಶಕರಾಗಿ ಖ್ಯಾತರಾಗಿರುವ ಅವರು ರಿಯಾಲಿಟಿ ಶೋ ತೀರ್ಪುಗಾರರಾಗಿಯೂ ಕಾಣಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next