Advertisement
ಕೆಲ ಹಿಂದೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪ್ರವೇಶ ರಸ್ತೆಯಲ್ಲಿ, ಮುಖ್ಯ ರಸ್ತೆಯಿಂದ ಅಣತಿ ದೂರದಲ್ಲಿ ಕುರುಂಜಿ ವೆಂಕಟರಮಣ ಗೌಡ ಅವರ ಪ್ರತಿಮೆ ನಿರ್ಮಾಣಕ್ಕೆಂದು ಶಿಲಾನ್ಯಾಸ ನಡೆಸಲಾಗಿತ್ತು. ಈ ಸಂದರ್ಭ ದಾರಿದೀಪ (ಹೈಮಾಸ್ಟ್ ದೀಪ)ವನ್ನು ತೆರವುಗೊಳಿಸಲಾಗಿತ್ತು. ಅನಂತರ ಪ್ರತಿಮೆ ನಿರ್ಮಾಣಕ್ಕೆ ಕೆಎಸ್‌ಆರ್‌ಟಿಸಿ ನಿಯಮಗಳು ತೊಡಕಾದ ಕಾರಣ, ಆ ಸ್ಥಳದ ಬದಲಿಯಾಗಿ ಖಾಸಗಿ ಬಸ್ ನಿಲ್ದಾಣದ ಬಳಿ ಪ್ರತಿಮೆ ನಿರ್ಮಿಸಲು ಉದ್ದೇಶಿಸಲಾಗಿತ್ತು. ಅಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.
ಅದಾಗ್ಯೂ ನಗರ ಪಂಚಾಯತ್ ವತಿಯಿಂದ ಹೈಮಾಸ್ಟ್ ಲೈಟ್ ಅಳವಡಿಸುವ ಕಾರ್ಯ ಆಗಿಲ್ಲ. ನ.ಪಂ.ಸಭೆಗಳಲ್ಲಿ ಈ ವಿಚಾರ ಪ್ರಸ್ತಾಪ ಆಗಿದ್ದರೂ, ಸ್ಪಂದನೆಯೇ ಸಿಕ್ಕಿಲ್ಲ. ರಾತ್ರಿ ವೇಳೆ ಮೈಸೂರು, ಮಡಿಕೇರಿ ಬಳಿಯಿಂದ ಮಂಗಳೂರಿಗೆ ಸಂಚರಿಸುವ ಬಸ್‌ಗೆ ಏರಲು ಪ್ರಯಾಣಿಕರು ಇದೇ ಸ್ಥಳದಲ್ಲಿ ನಿಲ್ಲುತ್ತಿದ್ದರು. ಆದರೆ ದಾರಿದೀಪ ಇಲ್ಲದ ಕಾರಣ ಪ್ರಯಾಣಿಕರ ನಿಲುಗಡೆಗೆ ತೊಂದರೆ ಆಗಿದೆ. ಕತ್ತಲು ಆವರಿಸುವ ಕಾರಣ, ಬಸ್ ಕೂಡ ಇಲ್ಲಿ ನಿಲ್ಲದೇ ನೇರವಾಗಿ ಹೋಗುತ್ತಿದೆ. ಸುರಕ್ಷತೆಗೆ ಅಗತ್ಯ
ಮುಖ್ಯ ರಸ್ತೆ ಬಳಿಯಿಂದ ಬಸ್ ನಿಲ್ದಾಣಕ್ಕೆ ತೆರಳುವ ಸಂದರ್ಭದಲ್ಲಿ ಪ್ರಯಾಣಿಕರ ಬ್ಯಾಗ್, ನಗ-ನಗದುಗಳು ಸುರಕ್ಷತೆಯ ದೃಷ್ಟಿಯಿಂದಲೂ ದಾರಿದೀಪದ ಅನಿವಾರ್ಯತೆ ಇದೆ. ರಾತ್ರಿ ವೇಳೆ ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ಬರುತ್ತಾರೆ. ಹಾಗಾಗಿ ನಗರ ಪಂಚಾಯತ್ ತೆರವುಗೊಳಿಸಿದ ದಾರಿದೀಪವನ್ನು ಮತ್ತೆ ಅಳವಡಿಸುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ.