Advertisement

ಸಿಂಗಲ್‌ ಫೇಸ್‌ ವಿದ್ಯುತ್‌ಗಾಗಿ ಪಾದಯಾತ್ರೆ

01:30 PM Jan 21, 2022 | Team Udayavani |

ಅಫಜಲಪುರ: ಹೊಲ ಗದ್ದೆಗಳಲ್ಲಿ ವಾಸವಾಗಿರುವ ರೈತರ ಮನೆಗಳಿಗೆ ಸಿಂಗಲ್‌ ಫೇಸ್‌ ವಿದ್ಯುತ್‌ ಸಂಪರ್ಕ ನೀಡುವಂತೆ ಆಗ್ರಹಿಸಿ ಫೆ.7ರಂದು ಪಟ್ಟಣದ ತಹಶೀಲ್ದಾರ್‌ ಕಚೇರಿಯಿಂದ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ಮೂಲಕ ತೆರಳಿ ಆಗ್ರಹಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದು ಜೆಡಿಎಸ್‌ ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಜು ಬಡದಾಳ ತಿಳಿಸಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಜೆಡಿಎಸ್‌ ತಾಲೂಕು ಅಧ್ಯಕ್ಷನಾಗಿದ್ದಾಗಿನಿಂದ ಹೊಲ ಗದ್ದೆಗಳಲ್ಲಿ ವಾಸವಿರುವ ರೈತರ ಮನೆಗಳಿಗೆ ಸಿಂಗಲ್‌ ಫೇಸ್‌ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕೆಂದು ಜೇಸ್ಕಾಂ ಇಲಾಖೆಗೆ ಮನವಿ ಮಾಡಿ, ಹೋರಾಟ ಮಾಡಿ ಸಾಕಾಗಿದೆ. ಹೋರಾಟ, ಮನವಿಗೆ ಅವರು ಬಗ್ಗುತ್ತಿಲ್ಲ ಹೀಗಾಗಿ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ಕೈಗೊಳ್ಳುವ ನಿರ್ಧಾರ ಮಾಡಿದ್ದೇವೆ ಎಂದು ಹೇಳಿದರು.

ವಿದ್ಯುತ್‌ ಇಲ್ಲದ್ದರಿಂದ ಬೆಳಕಿನ ವ್ಯವಸ್ಥೆಯಾಗದೇ ರೈತರು ಮತ್ತು ಅವರ ಮಕ್ಕಳು ಬಹಳಷ್ಟು ಪರದಾಡುವಂತೆ ಆಗಿದೆ. ರಾತ್ರಿ ವೇಳೆ ಹುಳ ಹುಪ್ಪಟೆಗಳ ಕಾಟದಿಂದ ರೈತ ಕುಟುಂಬದವರು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದರು. ಇನ್ನೂ ಸರ್ಕಾರ ತೊಗರಿ ಖರೀದಿಗೆ 6300 ರೂ. ಬೆಲೆ ನಿಗದಿ ಮಾಡಿದ್ದು ಅವೈಜ್ಞಾನಿಕವಾಗಿದೆ. ಕೂಡಲೇ ಕಷ್ಟದಲ್ಲಿರುವ ರೈತರ ತೊಗರಿಗೆ ಕ್ವಿಂಟಲ್‌ ಗೆ 8 ಸಾವಿರ ರೂ. ಬೆಲೆ ನೀಡಿ ಖರೀದಿ ಮಾಡಬೇಕು ಎಂದರು.

ಮುಖಂಡರಾದ ಹಣಮಂತ್ರಾವ್‌ ಬಿರಾದಾರ, ಸುನೀಲ ಹೊಸಮನಿ, ಸಾಗರ ರಾಠೊಡ, ಮಾರುತಿ ಚವ್ಹಾಣ, ಬೈಲಪ್ಪ ಪಟ್ಟೇದಾರ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next